Operation Sindoor: ಭಾರತದ ಆಪರೇಷನ್ ಸಿಂದೂರ್ ಬಳಿಕ ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಹುಡುಕುತ್ತಿರೋದು ಏನು?
Operation Sindoor: ಭಾರತವು ಬುಧವಾರ ತಡರಾತ್ರಿ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿದ ನಂತರ, ಪಾಕಿಸ್ತಾನದ ನಾಗರಿಕರು ಗೂಗಲ್‌ನಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಎರಡು ವಾರಗಳ ನಂತರ, ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿತು. ಈ ಕಾರ್ಯಾಚರಣೆಯ ಉದ್ದೇಶ, ಗಡಿರೇಖೆಯ ಆಚೆಗಿನ ಭಯೋತ್ಪಾದಕ ಗುಂಪುಗಳ ಶಿಬಿರಗಳು ಮತ್ತು ಲಾಂಚ್ ಪ್ಯಾಡ್‌ಗಳನ್ನು ಧ್ವಂಸಗೊಳಿಸುವುದಾಗಿತ್ತು ಎಂದು ಭಾರತೀಯ ಸೇನೆಯ ಮೂಲಗಳು ದೃಢಪಡಿಸಿವೆ.


ಇಸ್ಲಾಮಾಬಾದ್: ಭಾರತವು ಬುಧವಾರ ತಡರಾತ್ರಿ ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆ ನಡೆಸಿದ ನಂತರ, ಪಾಕಿಸ್ತಾನದ (Pakistan) ನಾಗರಿಕರು ಗೂಗಲ್‌ನಲ್ಲಿ (Google) ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terror Attack) ಎರಡು ವಾರಗಳ ನಂತರ, ಭಾರತವು ಪಾಕ್ ಆಕ್ರಮಿತ ಕಾಶ್ಮೀರದ (PoK) ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿತು. ಈ ಕಾರ್ಯಾಚರಣೆಯ ಉದ್ದೇಶ, ಗಡಿರೇಖೆಯ (LoC) ಆಚೆಗಿನ ಭಯೋತ್ಪಾದಕ ಗುಂಪುಗಳ ಶಿಬಿರಗಳು ಮತ್ತು ಲಾಂಚ್ ಪ್ಯಾಡ್‌ಗಳನ್ನು ಧ್ವಂಸಗೊಳಿಸುವುದಾಗಿತ್ತು ಎಂದು ಭಾರತೀಯ ಸೇನೆಯ ಮೂಲಗಳು ದೃಢಪಡಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ‘ಆಪರೇಷನ್ ಸಿಂಧೂರ್’ ದೃಶ್ಯಗಳು ವೈರಲ್ ಆಗುತ್ತಿದ್ದಂತೆ, ಪಾಕಿಸ್ತಾನದ ಜನರು ಗೂಗಲ್‌ನಲ್ಲಿ ತಮ್ಮ ಕುತೂಹಲಕ್ಕೆ ಉತ್ತರ ಹುಡುಕಲು ಪ್ರಾರಂಭಿಸಿದ್ದಾರೆ.
ಸಿಂಧೂರ್ ಎಂದರೇನು?
ಪಾಕಿಸ್ತಾನದಲ್ಲಿ ಹೆಚ್ಚು ಹುಡುಕಾಟ ನಡೆಸಿದ ಪ್ರಶ್ನೆಯೆಂದರೆ, “ಸಿಂಧೂರ್ ಎಂದರೇನು?” ಸಿಂಧೂರ್, ಪಹಲ್ಗಾಮ್‌ನಲ್ಲಿ 26 ನಾಗರಿಕರ ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ಜ್ಞಾಪಕವಾಗಿ ಬಳಕೆಯಾಯಿತು. ಏಪ್ರಿಲ್ 22 ರಂದು ಭಯೋತ್ಪಾದಕರು ಧರ್ಮದ ಆಧಾರದ ಮೇಲೆ ಪ್ರವಾಸಿಗರನ್ನು ಕೊಂದಿದ್ದರು. ಸಿಂಧೂರವನ್ನು ಯುದ್ಧಕ್ಕೆ ತೆರಳುವ ಯೋಧರು ಸಾಂಕೇತಿಕ ಹೆಮ್ಮೆಯಿಂದ ಧರಿಸುತ್ತಾರೆ. ಇತರೆ ಸಿಂಧೂರ್ ಸಂಬಂಧಿತ ಹುಡುಕಾಟಗಳೆಂದರೆ: ಆಪರೇಷನ್ ಸಿಂಧೂರ್ ಎಂದರೇನು?, ಸಿಂಧೂರ್ ಎಂದರೆ ಇಂಗ್ಲಿಷ್‌ನಲ್ಲಿ ಏನು?, ಆಪರೇಷನ್ ಸಿಂಧೂರ್ ವಿಕಿಪೀಡಿಯಾ.
ಇಂಡಿಯನ್ ಮಿಸೈಲ್ ಅಟ್ಯಾಕ್
ಇಸ್ಲಾಮಾಬಾದ್, ಪಂಜಾಬ್, ಮತ್ತು ಸಿಂಧ್‌ನಿಂದ “ಭಾರತ ಕ್ಷಿಪಣಿ ಉಡಾಯಿಸಿತು”, “ಭಾರತದ ಕ್ಷಿಪಣಿ ದಾಳಿ”, “ಭಾರತವು ಪಾಕಿಸ್ತಾನದ ಮೇಲೆ ಕ್ಷಿಪಣಿ ಉಡಾವಣೆ” ಇತ್ಯಾದಿ ಪದಗಳೊಂದಿಗೆ ಹುಡುಕಾಟಗಳು ನಡೆದಿವೆ.
ಈ ಸುದ್ದಿಯನ್ನು ಓದಿ: Operation Sindoor: ಪ್ರಧಾನಿ ಮೋದಿ ಭೇಟಿ ಮಾಡಿದ ವಿಶ್ವ ಬ್ಯಾಂಕ್ ಅಧ್ಯಕ್ಷ; ಪಾಕ್ ಮೇಲೆ ಬೀಳುತ್ತಾ ಆರ್ಥಿಕ ಹೊಡೆತ ?
ವೈಟ್ ಫ್ಲಾಗ್
ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ‘ವೈಟ್ ಫ್ಲಾಗ್’ ಪದ ಹುಡುಕಾಟದಲ್ಲಿ ಮುಂಚೂಣಿಯಲ್ಲಿತ್ತು. ವೈಟ್ ಫ್ಲಾಗ್ ಯುದ್ಧದಲ್ಲಿ ಶರಣಾಗತಿಯ ಸಂಕೇತವಾಗಿದೆ. ಸೈನಿಕರು ಬಿಳಿಬಟ್ಟೆಯನ್ನು ತಮ್ಮ ಗನ್‌ಗೆ ಕಟ್ಟಿ, ಶತ್ರು ಅಥವಾ ಇತರ ಸೇನೆಗೆ ಶಾಂತಿಯ ಒಪ್ಪಂದಕ್ಕಾಗಿ ತೋರಿಸುತ್ತಾರೆ. ಶರಣಾಗತಿಯ ಸಂದೇಶವನ್ನು ಒಪ್ಪಿಕೊಂಡರೆ, ದಾಳಿಗಳು ನಿಲ್ಲುತ್ತವೆ ಮತ್ತು ಶಾಂತಿ ಮಾತುಕತೆಗೆ ಅವಕಾಶವಿರುತ್ತದೆ.
ಭಾರತ ಯುದ್ಧ ಘೋಷಣೆ
“ಭಾರತ ಯುದ್ಧ ಘೋಷಿಸಿತು” ಎಂಬುದು ಪಾಕಿಸ್ತಾನದಲ್ಲಿ ಗೂಗಲ್‌ನ ಟಾಪ್ ಕೀವರ್ಡ್‌ಗಳಲ್ಲಿ ಒಂದಾಗಿತ್ತು. “ಭಾರತ-ಪಾಕಿಸ್ತಾನ ಯುದ್ಧ ಇಂದು”, “ಯುದ್ಧದ ಅಪ್‌ಡೇಟ್” ಇತ್ಯಾದಿ ಹುಡುಕಾಟಗಳು ಗೂಗಲ್ ಟ್ರೆಂಡ್ಸ್‌ನಲ್ಲಿ ಕಾಣಿಸಿಕೊಂಡಿವೆ. ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಸಂಪೂರ್ಣ ಯುದ್ಧಕ್ಕೆ ಕಾರಣವಾಗಬಹುದೇ ಎಂದು ಸ್ಥಳೀಯರು ಕಾತರದಿಂದ ಹುಡುಕಿದ್ದಾರೆ.