ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harassment: ಬೆಂಗಳೂರಿನ ಬೀದಿಯಲ್ಲಿ ಲೈಂಗಿಕ ವಿಕೃತಿ ತೋರಿದ ಕಾಮುಕ ಆರೆಸ್ಟ್‌

Bengaluru Crime News: ಬೆಂಗಳೂರಿನ ಬೀದಿಯಲ್ಲಿ ಅಪಘಾತಕ್ಕೆ ತುತ್ತಾದ ಬೀದಿ ನಾಯಿಯೊಂದಕ್ಕೆ ಸಹಾಯ ಮಾಡಲು ಹೋದ ಯುವತಿ ಕಾಮುಕನ ವಿಕೃತಿಗೆ ತುತ್ತಾಗಿದ್ದಾಳೆ. ಅಮೃತಹಳ್ಳಿ ಠಾಣೆ ಪೊಲೀಸರು ಸಿಸಿಟಿವಿ ಫೂಟೇಜ್‌ಗಳ ಸಹಾಯದಿಂದ ಮಂಜುನಾಥ್‌ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಬೀದಿಯಲ್ಲಿ ಲೈಂಗಿಕ ವಿಕೃತಿ ತೋರಿದ ಕಾಮುಕ ಆರೆಸ್ಟ್‌

-

ಹರೀಶ್‌ ಕೇರ ಹರೀಶ್‌ ಕೇರ Sep 15, 2025 10:22 AM

ಬೆಂಗಳೂರು: ಬೆಂಗಳೂರಿನಲ್ಲಿ (bengaluru) ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದ್ದು, ಬೀದಿನಾಯಿಗೆ ಸಹಾಯ ಮಾಡುತ್ತಿದ್ದ ಯುವತಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ (Harassment) ನೀಡಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶೋಧ ನಡೆಸಿ ವಿಕೃತನನ್ನು ಹೆಡೆಮುರಿ ಕಟ್ಟಿದ್ದಾರೆ. ಸೆಪ್ಟೆಂಬರ್ 7ರಂದು ರಾತ್ರಿ 11:50ರ ಹೊತ್ತಿಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಅಮೃತಹಳ್ಳಿ ಠಾಣೆ ಪೊಲೀಸರು ಮಂಜುನಾಥ್ ಎಂಬ ಆರೋಪಿಯನ್ನು ಆರೆಸ್ಟ್ (Arrest) ಮಾಡಿದ್ದಾರೆ.

ಅಂದು ರಾತ್ರಿ ಜಕ್ಕೂರು ಮುಖ್ಯ ರಸ್ತೆಯಲ್ಲಿ ಬೀದಿ ನಾಯಿಯೊಂದು ಅಪಘಾತಕ್ಕೆ ಒಳಗಾಗಿತ್ತು. ಕಾರು ನಿಲ್ಲಿಸಿ ಶ್ವಾನದ ರಕ್ಷಣೆಗೆ ಮುಂದಾಗಿದ್ದ ಯುವತಿಗೆ ಬೈಕ್‌ನಲ್ಲಿ ಬಂದ ಆರೋಪಿ ಬ್ಯಾಡ್ ಟಚ್ ಮಾಡಿ ಪರಾರಿಯಾಗಿದ್ದ. ನಾಯಿಯನ್ನು ರಕ್ಷಿಸಿದ್ದರಿಂದ ಯುವತಿ ಕೈಗೆ ರಕ್ತ ಆಗಿತ್ತು. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಬಳಿ ಯುವತಿ ಕೈ ತೊಳೆದುಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಬಂದು ಯುವತಿಯ ಖಾಸಗಿ ಅಂಗ ಮುಟ್ಟಿ ಆರೋಪಿ ಪರಾರಿಯಾಗಿದ್ದ. ಘಟನೆ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಸೇವಿಸಿದವರ ಬಂಧನ

ಶಿರಸಿ: ಹುತ್ತಗಾರ ಗ್ರಾಮ ಪಂಚಾಯತದ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನು ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಶಿರಸಿಯ ನೆಹರು ನಗರದ ದೀಪಕ್, ಕೆ ಎಚ್ ಬಿ ಕಾಲೋನಿಯ ಪರೀಕ್ಷಿತ್‌ ಹಾಗೂ ನೆಹರು ನಗರದ ಶಿವಮೂರ್ತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಮಾದಕ ವಸ್ತು ಸೇವಿಸಿರುವ ಸಂಶಯದ ಮೇಲೆ ಪೊಲೀಸರು ವಶಕ್ಕೆ ಪಡೆದು ನಗರದ ಪಂಡಿತ ಸಾರ್ವಜನಿ‌ಕ ಆಸ್ಪತ್ರೆ ಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವಿಸಿರುವುದು ಧೃಡ ಪಟ್ಟಿದೆ. ಈ ಹಿನ್ನೆಲೆಯಲ್ಲಿ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ NDPS ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಕೃಷ್ಣಮೂರ್ತಿ, ಜಗದೀಶ್.ಎಂ, ಶಿರಸಿ ಡಿಎಸ್ಪಿ ಗೀತಾ ಪಾಟೀಲ್, ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಠಾಣೆ ಪಿಎಸ್ಐ ಸಂತೋಷ್ ಕುಮಾರ್ ಎಂ. ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪಿ ಸಿ ಅರುಣ್ ಕುಮಾರ್, ದವಲ್ ಸಾಬ್, ಮಾರುತಿ ಗೌಡ, ಗದಿಗೆಪ್ಪಾ ಚಕ್ರಸಾಲಿ ಭಾಗವಹಿಸಿದ್ದರು.

ಇದನ್ನೂ ಓದಿ: Viral Video: ಛೀ… ಮನುಷ್ಯತ್ವ ಇಲ್ವಾ? ಅತ್ತೆ-ಮಾವನ ವರದಕ್ಷಿಣೆ ಕಿರುಕುಳ, ಗಂಡನ ಚಿತ್ರಹಿಂಸೆ; ಟೆರೇಸ್‍ನಿಂದ ಕೆಳಗೆ ಹಾರಿದ ಮಹಿಳೆ