ಟಾಟಾ ಮೋಟಾರ್ಸ್‌ನಿಂದ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕ್‌ಅಪ್‌ಗಳ ಮೇಲೆ ಭಾರಿ ಆಫರ್ ಘೋಷಣೆ
ಪೂರ್ಣ ಜಿಎಸ್‌ಟಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದರ ಜೊತೆಗೆ ಕಂಪನಿಯು ಈಗ ತನ್ನ ಜನಪ್ರಿಯ ಬ್ರ್ಯಾಂಡ್‌ಗಳಾದ ಏಸ್, ಏಸ್ ಪ್ರೊ, ಇಂಟ್ರಾ ಮತ್ತು ಯೋಧಾದ ಡೀಸೆಲ್, ಪೆಟ್ರೋಲ್ ಮತ್ತು ದ್ವಿ-ಇಂಧನ ರೂಪಾಂತರಗಳ ಮೇಲೆ 32 ಇಂಚಿನ ಎಲ್‌ಇಡಿ ಟಿವಿ ಉಡುಗೊರೆ ಮತ್ತು ₹65,000 ವರೆಗಿನ ಹೆಚ್ಚುವರಿ ಗ್ರಾಹಕ ಲಾಭಗಳನ್ನು ಒದಗಿಸಲು ಮುಂದಾಗಿದೆ. ಈ ಆಫರ್ ಅನ್ನು ಇನ್ನಷ್ಟು ಆಕರ್ಷಕ ಗೊಳಿಸಿದೆ.

-

ಬೆಂಗಳೂರು: ಭಾರತದ ನಂ.1 ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ತನ್ನ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕ್‌ಅಪ್ (SCVPU) ಗ್ರಾಹಕರಿಗೆ ಹಬ್ಬದ ಸಂತೋಷವನ್ನು ಮುಂಚಿತವಾಗಿ ಒದಗಿಸುತ್ತಿದ್ದು, ಪೂರ್ಣ ಜಿಎಸ್‌ಟಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದರ ಜೊತೆಗೆ ಕಂಪನಿಯು ಈಗ ತನ್ನ ಜನಪ್ರಿಯ ಬ್ರ್ಯಾಂಡ್‌ಗಳಾದ ಏಸ್, ಏಸ್ ಪ್ರೊ, ಇಂಟ್ರಾ ಮತ್ತು ಯೋಧಾದ ಡೀಸೆಲ್, ಪೆಟ್ರೋಲ್ ಮತ್ತು ದ್ವಿ-ಇಂಧನ ರೂಪಾಂತರಗಳ ಮೇಲೆ 32 ಇಂಚಿನ ಎಲ್‌ಇಡಿ ಟಿವಿ ಉಡುಗೊರೆ ಮತ್ತು ₹65,000 ವರೆಗಿನ ಹೆಚ್ಚುವರಿ ಗ್ರಾಹಕ ಲಾಭಗಳನ್ನು ಒದಗಿಸಲು ಮುಂದಾಗಿದೆ. ಈ ಆಫರ್ ಅನ್ನು ಇನ್ನಷ್ಟು ಆಕರ್ಷಕಗೊಳಿಸಿದೆ.
ಇದನ್ನೂ ಓದಿ: Payana Car Museum: ವಿಂಟೇಜ್ ಕಾರುಗಳ 'ಪಯಣ'; ಜಗತ್ತನ್ನೇ ಆಕರ್ಷಿಸುತ್ತಿದೆ ಈ ಮಾದರಿ ಮ್ಯೂಸಿಯಂ
ಈ ಸೀಮಿತ ಅವಧಿಯ ಆಫರ್ 22 ಸೆಪ್ಟೆಂಬರ್ 2025 ರವರೆಗೆ ಬುಕಿಂಗ್ ಮಾಡಿದವರಿಗೆ ಮತ್ತು 30 ಸೆಪ್ಟೆಂಬರ್ 2025 ರೊಳಗೆ ವಾಹನ ಡೆಲಿವರಿ ದೊರೆತವರಿಗೆ ಮಾತ್ರ ಲಭ್ಯವಿರುತ್ತದೆ. ಇದರ ಜೊತೆಗೆ, ಹೊಸದಾಗಿ ಬಿಡುಗಡೆಯಾದ ಏಸ್ ಪ್ರೊ ಈಗ ಕೇವಲ ₹3.67 ಲಕ್ಷ ಆರಂಭಿಕ ಬೆಲೆಯಲ್ಲಿ ದೊರೆಯ ಲಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಈ ಮೂಲಕ ಸಂಸ್ಥೆಯು ಉದ್ಯಮಿಗಳಿಗೆ ಟಾಟಾ ವಾಹನದೊಂದಿಗೆ ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ಸುಲಭ ವಾಗಿಸುತ್ತದೆ.
* ಗ್ರಾಹಕರು ತಮ್ಮ ಆಯ್ಕೆಯ ವಾಹನ ರೂಪಾಂತರದ ನಿಖರ ಬೆಲೆಯನ್ನು ಅಧಿಕೃತ ಟಾಟಾ ಮೋಟಾರ್ಸ್ ಶೋರೂಮ್‌ನಿಂದ ಖಚಿತಪಡಿಸಿಕೊಂಡು, ಆಫರ್ ಅವಧಿಯಲ್ಲಿ ಡೆಲಿವರಿ ಪಡೆಯಲು ಮುಂಚಿತವಾಗಿ ಬುಕ್ ಮಾಡಬಹುದು.