ಬೆಂಗಳೂರಿನ ಮಾಹೆಯಲ್ಲಿ ‘ನಶೆ ಮುಕ್ತ ಕರ್ನಾಟಕ’ ಮಹತ್ವದ ಜಾಗೃತಿ ಅಭಿಯಾನ ಉದ್ಘಾಟನೆ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಾದಕ ದ್ರವ್ಯ ನಿಗ್ರಹದಳ ಮತ್ತು ಸೈಬರ್ ಅಪರಾಧ ವಿಭಾಗವು ಮಣಿಪಾಲ್ ಫೌಂಡೇಶನ್ ಮತ್ತು ಮಾಯಾ ಫಿಲ್ಮ್ಸ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ, ‘ನಶೆ ಮುಕ್ತ ಕರ್ನಾಟಕ’ ಮಹತ್ವದ ಅಭಿಯಾನವು ನಗರದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕ್ಯಾಂಪಸ್ ನಲ್ಲಿ ಯಶಸ್ವಿಯಾಗಿ ಉದ್ಘಾಟಿಸ ಲಾಯಿತು.


* ಕರ್ನಾಟಕದಾದ್ಯಂತ ಇರುವ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ನಡೆಯಲಿರುವ ಮಹತ್ವದ ಜಾಗೃತಿ ಅಭಿಯಾನ
* ಕ್ರಿಕೆಟ್ ದಂತಕಥೆಗಳಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಕಾಣಿಸಿಕೊಂಡಿರುವ ಸಾಕ್ಷ್ಯಚಿತ್ರ ಬಿಡುಗಡೆ
* ಒಂದು ವರ್ಷಗಳ ಕಾಲ ಸಾಮಾಜಿಕ ಜಾಲತಾಣದಲ್ಲಿ ನಡೆಯಲಿದೆ ಜಾಗೃತಿ ಅಭಿಯಾನ
ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಾದಕ ದ್ರವ್ಯ ನಿಗ್ರಹದಳ ಮತ್ತು ಸೈಬರ್ ಅಪರಾಧ ವಿಭಾಗವು ಮಣಿಪಾಲ್ ಫೌಂಡೇಶನ್ ಮತ್ತು ಮಾಯಾ ಫಿಲ್ಮ್ಸ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ, ‘ನಶೆ ಮುಕ್ತ ಕರ್ನಾಟಕ’ ಮಹತ್ವದ ಅಭಿಯಾನವು ನಗರದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕ್ಯಾಂಪಸ್ ನಲ್ಲಿ ಯಶಸ್ವಿಯಾಗಿ ಉದ್ಘಾಟಿಸ ಲಾಯಿತು.
ರಾಜ್ಯದ ಆಂತರಿಕ ಭದ್ರತೆ ವಿಭಾಗ, ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಸೈಬರ್ ವಿಭಾಗದ ಡಿಜಿಪಿ ಡಾ. ಪ್ರಣವ್ ಮೊಹಾಂತಿ, ಸಿಐಡಿ ವಿಭಾಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಸವಿತಾ ಶ್ರೀನಿವಾಸ್, ಮಣಿಪಾಲ್ ಫೌಂಡೇಶನ್ನ ಸಿಇಓ ಶ್ರೀ ಹರಿನಾರಾಯಣ ಶರ್ಮಾ, ಮಾಯಾ ಫಿಲ್ಮ್ಸ್ನ ಸಂಸ್ಥಾಪಕ ನಿರ್ದೇಶಕರಾದ ಶ್ರೀಮತಿ ಮಾಯಾ ಚಂದ್ರ, ಬೆಂಗಳೂರು ಮಾಹೆ ಪ್ರೊ ವೈಸ್-ಚಾನ್ಸಲರ್ ಪ್ರೊ. ಡಾ. ಮಧು ವೀರರಾಘವನ್, ಬೆಂಗಳೂರು ಮಾಹೆಯ ಅಡಿಷನಲ್ ರಿಜಿಸ್ಟ್ರಾರ್ ಡಾ. ರಾಘವೇಂದ್ರ ಪ್ರಭು ಪಿ ಈ ಅಭಿಯಾನಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: Vishweshwar Bhat Coumn: ಮೃದು ಲ್ಯಾಂಡಿಂಗ್ ಎಂಬ ಭ್ರಮೆ
ಡಿಜಿಪಿ ಡಾ. ಪ್ರಣಬ್ ಮೊಹಾಂತಿ ಅವರು ಮಾತನಾಡಿ, ‘ಮಾದಕ ದ್ರವ್ಯ ಬಳಕೆಯನ್ನು ತಡೆಗಟ್ಟಲು ಒಟ್ಟಾಗಿ ಹೋರಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂತಹ ಅಭಿಯಾನಗಳಿಂದ ಮಾದಕ ದ್ರವ್ಯ ವಿರುದ್ಧದ ಹೋರಾಟ ಗಳನ್ನು ಮತ್ತಷ್ಟು ಶಕ್ತಿಯುತಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ಅದರಲ್ಲೂ ಯುವಪೀಳಿಗೆ ಹೆಚ್ಚು ಗಮನ ಹರಿಸಬೇಕಿದೆ. ಇಂತಹ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕಿದೆ. ಮಾದಕ ದ್ರವ್ಯವು ಬಳಕೆದಾರರಿಗೆ ಮಾತ್ರವಲ್ಲ ಅವರ ಕುಟುಂಬಗಳಿಗೆ ಮತ್ತು ಸಮಾಜಕ್ಕೂ ಮಾರಕವಾಗಿದೆ ಎಂಬ ಸಂದೇಶ ಎಲ್ಲರನ್ನೂ ತಲುಪಬೇಕಿದೆ” ಎಂದು ಹೇಳಿದರು.
ಸಿಐಡಿ ವಿಭಾಗದ ಎಸ್‌ಪಿ ಶ್ರೀಮತಿ ಸವಿತಾ ಶ್ರೀನಿವಾಸ್ ಮಾತನಾಡಿ, ‘ಕರ್ನಾಟಕದಲ್ಲಿ 2023ರಲ್ಲಿ 6,000ಕ್ಕೂ ಹೆಚ್ಚು ಮಾದಕ ದ್ರವ್ಯ ವ್ಯಸನ ಪ್ರಕರಣಗಳು ದಾಖಲಾಗಿದ್ದವು. 2024 ಮತ್ತು 2025ರಲ್ಲಿ ಈ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಜಾಗೃತಿ ಅಭಿಯಾನ ವನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ನೇರವಾಗಿ ಅರಿವು ಮೂಡಿಸಲಾಗುತ್ತದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ. ಡಾಕ್ಯುಮೆಂಟರಿ ಪ್ರದರ್ಶನ, ವಿವಿಧ ಹಿನ್ನೆಲೆಯ ಜನರಿಗೆ “ನಾರ್ಕೊ ವಾರಿಯರ್ಸ್” ತರಬೇತಿ ಕಾರ್ಯಕ್ರಮಗಳ ಮೂಲಕ ಅಭಿಯಾನವನ್ನು ಎಲ್ಲರಿಗು ತಲುಪಿಸುವ ಕೆಲಸ ಆಗಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಆಂಟಿ-ಡ್ರಗ್ ಸಮಿತಿಗಳನ್ನು ರಚಿಸಲಾಗುವುದು’ ಎದು ಹೇಳಿದರು.
ಪ್ರೊ ವೈಸ್-ಚಾನ್ಸಲರ್ ಪ್ರೊ. ಡಾ. ಮಧು ವೀರರಾಘವನ್ ಅವರು, “ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ನೀಡುವ ಮಾಹೆಯ ಬದ್ಧತೆಗೆ ಪೂರಕವಾಗಿ ಮಾದಕದ್ರವ್ಯ ಮುಕ್ತ ಕರ್ನಾಟಕ ಅಭಿಯಾನ ಇದ್ದು, ಈ ಮಹತ್ವದ ಅಭಿಯಾನವನ್ನು ನಮ್ಮ ಕ್ಯಾಂಪಸ್ ನಲ್ಲಿ ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಒಳಿತಿಗೆ ದುಡಿಯುವ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಡೀಕರಿಸಲಾಗುತ್ತಿದೆ. ಮಾದಕ ದ್ರವ್ಯ ವ್ಯಸನದ ವಿರುದ್ಧ ಹೋರಾಡಲು ಶಿಕ್ಷಣವೇ ಪ್ರಬಲ ಅಸ್ತ್ರವಾಗಿದೆ. ಈ ಅಭಿಯಾನದ ಮೂಲಕ ಧನಾತ್ಮಕ ಬದಲಾವಣೆ ಉಂಟಾಗುವುದನ್ನು ನೋಡಲು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.
ಕಳೆದ ಒಂದು ವರ್ಷದಿಂದ ನಿಮ್ಹಾನ್ಸ್ ಮತ್ತು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ನೆರವಿನೊಂದಿಗೆ ಈ ಅಭಿಯಾನವನ್ನು ಅಭಿವೃದ್ಧಿಸಲಾಗಿದೆ ಎಂಬುದು ಗಮನಾರ್ಹ. ಈ ಕಾರ್ಯಕ್ರಮದಲ್ಲಿ ಅಭಿಯಾನದ ಭಾಗವಾಗಿರುವ 17 ನಿಮಿಷಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸ ಲಾಯಿತು.