ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇವಿ ಮೂಲಸೌಕರ್ಯ ವ್ಯವಸ್ಥೆ ಬಲಪಡಿಸಿಕೊಂಡ ಟಾಟಾ ಮೋಟಾರ್ಸ್: ಎಲೆಕ್ಟ್ರಿಕ್ ಎಸ್‌ಸಿವಿಗಳಿಗೆ ಈಗ 25,000 ಸಾರ್ವಜನಿಕ ಚಾರ್ಜರ್‌ ಗಳು ಲಭ್ಯ

ಚಾರ್ಜಿಂಗ್ ಮೂಲಸೌಕರ್ಯದ ವಿಸ್ತರಣೆಯನ್ನು ಇನ್ನಷ್ಟು ವೇಗಗೊಳಿಸಲು, ಟಾಟಾ ಮೋಟಾರ್ಸ್ ಸಂಸ್ಥೆಯು 13 ಪ್ರಮುಖ ಚಾರ್ಜಿಂಗ್ ಪಾಯಿಂಟ್ ಆಪರೇಟರ್‌ಗಳ (ಸಿಪಿಒ) ಜೊತೆಗೆ ಮುಂದಿನ 12 ತಿಂಗಳಲ್ಲಿ 25,000 ಹೆಚ್ಚುವರಿ ಸಾರ್ವಜನಿಕ ಚಾರ್ಜರ್‌ಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ.

ಎಲೆಕ್ಟ್ರಿಕ್ ಎಸ್‌ಸಿವಿಗಳಿಗೆ ಈಗ 25,000 ಸಾರ್ವಜನಿಕ ಚಾರ್ಜರ್‌ ಗಳು ಲಭ್ಯ

-

Ashok Nayak Ashok Nayak Sep 16, 2025 11:37 PM

ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಸಂಸ್ಥೆಯು ಝೀರೋ ಎಮಿಷನ್ ಸಾರಿಗೆ ವಿಭಾಗವನ್ನು ಬೆಳೆಸುವ ವಿಚಾರದಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಎಲೆಕ್ಟ್ರಿಕ್ ಸಣ್ಣ ವಾಣಿಜ್ಯ ವಾಹನಗಳ (ಎಸ್‌ಸಿವಿ) ಗ್ರಾಹಕ ರಿಗೆ ಈಗ 25,000ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ ಗಳು ಸ್ಥಾಪಿಸಿದೆ.

ಬೆಂಗಳೂರು, ದೆಹಲಿ-ಎನ್‌ಸಿಆರ್, ಮುಂಬೈ, ಚೆನ್ನೈ, ಮತ್ತು ಹೈದರಾಬಾದ್ ಸೇರಿದಂತೆ 150ಕ್ಕೂ ಹೆಚ್ಚು ನಗರಗಳಲ್ಲಿ ಈ ಚಾರ್ಜರ್‌ ಗಳನ್ನು ಇನ್ ಸ್ಟಾಲ್ ಮಾಡಲಾಗಿದ್ದು, ಅದರಲ್ಲೂ ಚಾರ್ಜರ್ ಗಳು ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರಗಳಲ್ಲಿಯೇ ನೆಲೆಗೊಂಡಿವೆ. ಈ ಮೂಲಕ ಕೊನೆಯ-ಮೈಲಿ ವಿತರಣಾ ನಿರ್ವಾಹಕರಿಗೆ ಹೆಚ್ಚುವರಿ ರೇಂಜ್ ಭರವಸೆ, ಕಾರ್ಯಾಚರಣೆ ದಕ್ಷತೆ ಮತ್ತು ಸುಧಾರಿತ ಆದಾಯ ಒದಗಿಸಲಾಗುತ್ತದೆ.

ಚಾರ್ಜಿಂಗ್ ಮೂಲಸೌಕರ್ಯದ ವಿಸ್ತರಣೆಯನ್ನು ಇನ್ನಷ್ಟು ವೇಗಗೊಳಿಸಲು, ಟಾಟಾ ಮೋಟಾ ರ್ಸ್ ಸಂಸ್ಥೆಯು 13 ಪ್ರಮುಖ ಚಾರ್ಜಿಂಗ್ ಪಾಯಿಂಟ್ ಆಪರೇಟರ್‌ಗಳ (ಸಿಪಿಒ) ಜೊತೆಗೆ ಮುಂದಿನ 12 ತಿಂಗಳಲ್ಲಿ 25,000 ಹೆಚ್ಚುವರಿ ಸಾರ್ವಜನಿಕ ಚಾರ್ಜರ್‌ಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ. ಎಲ್ಲಾ ಅಸ್ತಿತ್ವದಲ್ಲಿರುವ ಮತ್ತು ಹೊಸತಾಗಿ ಅಳವಡಿಸ ಲಾಗುವ ಚಾರ್ಜರ್ ಸ್ಥಳಗಳು ಟಾಟಾ ಮೋಟಾರ್ಸ್‌ ನ ಅತ್ಯಾಧುನಿಕ ಸಂಪರ್ಕಿತ ವಾಹನ ವೇದಿಕೆಯಾದ ಫ್ಲೀಟ್ ಎಡ್ಜ್‌ ನಲ್ಲಿ ಕಾಣಿಸಲಿದ್ದು, ಈ ಮೂಲಕ ಗ್ರಾಹಕರು ಅವಶ್ಯ ಸಂದರ್ಭದಲ್ಲಿ ಮತ್ತು ಸುಲಭವಾಗಿ ಈ ಚಾರ್ಜರ್ ಗಳನ್ನು ಬಳಸಬಹುದಾಗಿದೆ.

ಇದನ್ನೂ ಓದಿ: Tata Motors: ವಿದ್ಯುತ್ ವಾಣಿಜ್ಯ ವಾಹನಗಳ ಗುತ್ತಿಗೆ ನೀಡುವ ವ್ಯವಸ್ಥೆ ಕಲ್ಪಿಸಲು ವರ್ಟೆಲೋ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ ಮೋಟಾರ್ಸ್

ಒಡಂಬಡಿಕೆಗೆ ಸಹಿ ಮಾಡಿರುವ ಆಪರೇಟರ್‌ ಗಳ ಹೆಸರುಗಳು ಹೀಗಿವೆ: ಎ ಪ್ಲಸ್ ಚಾರ್ಜ್, ಆಂಪ್‌ ವೋಲ್ಟ್ಸ್, ಚಾರ್ಜ್‌ಮಾಡ್, ಚಾರ್ಜ್ ಝೋನ್, ಎಲೆಕ್ಟ್ರಿಕ್ ಫ್ಯೂಯಲ್, ಎನ್ವೋ ದ ಸಸ್ಟೈನರ್, ಇವಿ ಸ್ಪಾಟ್ ಚಾರ್ಜ್, ಕಝಾಮ್, ನಿಕೋಲ್ ಇವಿ, ಸೋನಿಕ್ ಮೊಬಿಲಿಟಿ, ಥಂಡರ್‌ಪ್ಲಸ್ ಸೊಲ್ಯೂ ಷನ್ಸ್, ವೋಲ್ಟಿಕ್, ಮತ್ತು ಝಿಯಾನ್ ಎಲೆಕ್ಟ್ರಿಕ್.

ಈ ಘೋಷಣೆಯನ್ನು ಮಾಡಿರುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ಎಸ್‌ಸಿವಿಪಿ ಯು ಮುಖ್ಯಸ್ಥ ಮತ್ತು ಉಪಾಧ್ಯಕ್ಷ ಶ್ರೀ. ಪಿನಾಕಿ ಹಲ್ದಾರ್ ಅವರು, “25,000 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ ಗಳ ಗಡಿಯನ್ನು ದಾಟಿರುವುದು ಎಲೆಕ್ಟ್ರಿಕ್ ಸರಕು ಸಾಗಾಣಿಕಾ ಸಾರಿಗೆ ಮತ್ತು ಅದಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ಬೆಳೆಸುವಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈಗಾಗಲೇ 10,000ಕ್ಕೂ ಹೆಚ್ಚು ಏಸ್ ಇವಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವು ಒಟ್ಟಾರೆಯಾಗಿ 6 ಕೋಟಿ ಗಿಂತಲೂ ಹೆಚ್ಚು ಕಿಮೀ ದೂರವನ್ನು ಕ್ರಮಿಸಿವೆ.

ಈಗ ನಾವು ಗ್ರಾಹಕರು ಮತ್ತು ಸಾಗಾಣಿಕೆದಾರರಲ್ಲಿ ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಗಳ ಬಳಕೆಯ ಲಾಭಗಳ ಬಗ್ಗೆ ವಿಶ್ವಾಸ ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ನಮ್ಮ ಇತ್ತೀಚೆಗೆ ಪರಿಚಯಿಸಲಾದ ಏಸ್ ಪ್ರೊ ಇವಿ, ನಗರ ಮತ್ತು ಅರೆ-ನಗರ ಸರಕು ಅನ್ವಯಿಕೆಗಳಲ್ಲಿ ವಿಕಸನಗೊಳ್ಳುತ್ತಿರುವ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ತನ್ನ ಸುಧಾರಿತ ಸಾಮರ್ಥ್ಯ ಗಳೊಂದಿಗೆ ಆಕರ್ಷಣೆಯನ್ನು ಪಡೆಯುತ್ತಿದೆ. ”

ಮಾತು ಮುಂದುವರಿಸಿದ ಅವರು, “ನಾವು ವಿಶ್ವಾಸಾರ್ಹ, ಉನ್ನತ-ಕಾರ್ಯಕ್ಷಮತೆಯ ಇ- ಕಾರ್ಗೋ ವಾಹನಗಳನ್ನು ಒದಗಿಸುವುದನ್ನು ಮುಂದುವರೆಸುತ್ತಿದ್ದು, ತಂತ್ರಾತ್ಮಕ ಸಹಯೋಗಗಳ ಮೂಲಕ ಮೂಲಸೌಕರ್ಯ ವ್ಯವಸ್ಥೆಯನ್ನು ವಿಸ್ತರಿಸುವ ಕಡೆಗೆ ಗಮನ ಕೇಂದ್ರೀಕರಿಸಿದ್ದೇವೆ. ಭಾರತದ ಪ್ರಮುಖ ಚಾರ್ಜಿಂಗ್ ಪಾಯಿಂಟ್ ಆಪರೇಟರ್‌ ಗಳೊಂದಿಗಿನ ಪಾಲುದಾರಿಕೆಯು, ದೇಶಾದ್ಯಂತ ಉದ್ಯಮಿಗಳಿಗೆ ಮತ್ತು ಸಾಗಾಣಿಕೆದಾರರಿಗೆ ಲಾಭದಾಯಕ, ಶೂನ್ಯ- ಇಂಗಾಲ ಹೊರಸೂಸುವಿಕೆ ಸರಕು ಸಾಗಾಣಿಕೆಯ ಅತ್ಯುತ್ತಮ ಜಾಲವನ್ನು ನಿರ್ಮಿಸುವ ನಮ್ಮ ಬದ್ಧತೆ ಯನ್ನು ಸಾರುತ್ತದೆ” ಎಂದು ಹೇಳಿದರು.

ಟಾಟಾ ಮೋಟಾರ್ಸ್‌ ನ ಇ-ಎಸ್‌ಸಿವಿ ಶ್ರೇಣಿಯು ಈಗ ಏಸ್ ಪ್ರೊ ಇವಿ, ಏಸ್ ಇವಿ ಮತ್ತು ಏಸ್ ಇವಿ 1000 ಅನ್ನು ಒಳಗೊಂಡಿದ್ದು, ಇವುಗಳು ನಗರ ಮತ್ತು ಸಣ್ಣ ಪಟ್ಟಣಗಳ ಗ್ರಾಹಕರ ವೈವಿಧ್ಯಮಯ ಸರಕು ಸಾಗಾಣಿಕಾ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಂಡಿವೆ. ಟಾಟಾ ಮೋಟಾರ್ಸ್ ನ ಎಲ್ಲಾ ವಾಣಿಜ್ಯ ವಾಹನಗಳು ಬಹುವಿಧದ ಲೋಡ್ ಡೆಕ್ ಕಾನ್ಫಿಗರೇಷನ್ ಗಳು ಮತ್ತು ಪೇಲೋಡ್ ಆಯ್ಕೆ ಗಳೊಂದಿಗೆ ಲಭ್ಯವಿದ್ದು, ವಿವಿಧ ವ್ಯಾಪಾರ ಬಳಕೆಗಳಿಗೆ ಒದಗಿ ಬರಲಿವೆ. ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆ ಒದಗಿಸಲೆಂದೇ ನಿರ್ಮಿತವಾಗಿರುವ ಇವುಗಳನ್ನು ಕಠಿಣ ಭೂಪ್ರದೇಶಗಳು ಮತ್ತು ಸಂಕೀರ್ಣ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲಾಗಿದೆ.

ಜಾಸ್ತಿ ಸಮಯ ಕಾರ್ಯಾಚರಣೆ ನಡೆಯುವಂತೆ ಮತ್ತು ಗ್ರಾಹಕರಿಗೆ ಹೆಚ್ಚು ಕೆಲಸ ಮಾಡುವಂತೆ ನೆರವಾಗಲು ಟಾಟಾ ಮೋಟಾರ್ಸ್ ಸಂಸ್ಥೆಯು ಭಾರತದಾದ್ಯಂತ 200ಕ್ಕೂ ಹೆಚ್ಚು ಇವಿ ಸಪೋರ್ಟ್ ಕೇಂದ್ರಗಳನ್ನು ಸ್ಥಾಪಿಸಿದ್ದು, ತನ್ನ ಬೆಳೆಯುತ್ತಿರುವ ಗ್ರಾಹಕ ಬಳಗಕ್ಕೆ ವಿಶ್ವಾಸಾರ್ಹ ಸೇವೆ ಮತ್ತು ತಾಂತ್ರಿಕ ಸಹಾಯವನ್ನು ಒದಗಿಸುತ್ತಿದೆ.