ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru traffic: ವರ್ಕ್‌ ಫ್ರಂ ಹೋಮ್‌ ಅಂತ್ಯ, ನಾಳೆಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್‌ ದುಪ್ಪಟ್ಟು

Bengaluru: ಕಳೆದ ವರ್ಷದ ಅಂಕಿ-ಅಂಶದ ಆಧಾರದಲ್ಲಿ ಪ್ರತಿನಿತ್ಯ ಸುಮಾರು 82 ಸಾವಿರ ವಾಹನಗಳು ಔಟರ್​ ರಿಂಗ್​ ರೋಡ್ ಮೂಲಕ ಸಂಚರಿಸಿದ್ದವು. ಈ ವರ್ಷದಲ್ಲಿ ಅವುಗಳ ಸಂಖ್ಯೆ ಸುಮಾರು 1 ಲಕ್ಷದ 20 ಸಾವಿರಕ್ಕೆ ಹೆಚ್ಚಿತ್ತು. ಈಗ ವರ್ಕ್​ ಫ್ರಮ್​ ಹೋಮ್​ ಕ್ಯಾನ್ಸಲ್​ ಆಗುತ್ತಿರುವ ಕಾರಣ ಅಕ್ಟೋಬರ್ 1ರಿಂದ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ವರ್ಕ್‌ ಫ್ರಂ ಹೋಮ್‌ ಅಂತ್ಯ, ನಾಳೆಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್‌ ಡಬಲ್

-

ಹರೀಶ್‌ ಕೇರ ಹರೀಶ್‌ ಕೇರ Sep 30, 2025 7:23 AM

ಬೆಂಗಳೂರು: ಅಕ್ಟೋಬರ್ 1ರಿಂದ ಬಹುತೇಕ ಖಾಸಗಿ ಕಂಪನಿಗಳ ವರ್ಕ್ ಫ್ರಮ್ ಹೋಮ್ (Work from Home) ಅಂತ್ಯವಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ (Bengaluru traffic) ಟ್ರಾಫಿಕ್​ ಡಬಲ್​ ಆಗುವ ಸಾಧ್ಯತೆ ಹೆಚ್ಚಿದೆ. ಉದ್ಯೋಗಿಗಳು ಕಚೇರಿಗೇ ಹೋಗಿ ಕೆಲಸ ಮಾಡಬೇಕಿರುವ ಕಾರಣ ವಾಹನಗಳ ಓಡಾಟದ ಸಂಖ್ಯೆಯೂ ಸಹಜವಾಗಿ ಹೆಚ್ಚಲಿದೆ. ಅಂದಾಜಿನ ಪ್ರಕಾರ ಔಟರ್​ ರಿಂಗ್​ ರೋಡ್​ ಒಂದರಲ್ಲಿಯೇ ಪ್ರತಿನಿತ್ಯ 10 ಲಕ್ಷ ಉದ್ಯೋಗಿಗಳು ಓಡಾಡುವ ನಿರೀಕ್ಷೆ ಇದೆ.

ಬೆಂಗಳೂರಿನ ಬಹುತೇಕ ಖಾಸಗಿ ಕಂಪನಿಗಳು ವರ್ಕ್​ ಫ್ರಮ್​ ಹೋಮ್​ ಸೌಲಭ್ಯ ಹಿಂಪಡೆಯಲು ನಿರ್ಧರಿಸಿವೆ ಎನ್ನಲಾಗಿದ್ದು, ಶೇಕಡಾ 80ರಷ್ಟು ಐಟಿ ಕಂಪನಿಗಳು ಈ ತೀರ್ಮಾನಕ್ಕೆ ಮುಂದಾಗಿವೆಯಂತೆ. ಔಟರ್​ ರಿಂಗ್​ ರೋಡ್‌ನಲ್ಲಿ ಸುಮಾರು 500ರಷ್ಟು ಪ್ರತಿಷ್ಟಿತ ಕಂಪನಿಗಳಿದ್ದು, ಎರಡು ಸಾವಿರ ಆಫೀಸುಗಳಿವೆ. ಇವುಗಳಲ್ಲಿ ಬಹುತೇಕ ಕಂಪನಿಗಳು ತಮ್ಮ ನೌಕರರಿಗೆ ವರ್ಕ್​ ಫ್ರಮ್​ ಹೋಮ್​ ನೀಡಿದ್ದವು. ಆದರೆ ಈಗ ಉದ್ಯೋಗಿಗಳು ಮತ್ತೆ ಆಫೀಸಿ ನತ್ತ ಮುಖ ಮಾಡಬೇಕಿರುವ ಕಾರಣ ಟ್ರಾಫಿಕ್​ ಸಹಜವಾಗಿಯೇ ಇನ್ನಷ್ಟು ಹೆಚ್ಚಾಗಲಿದೆ.

ಕಳೆದ ವರ್ಷದ ಅಂಕಿ-ಅಂಶದ ಆಧಾರದಲ್ಲಿ ಪ್ರತಿನಿತ್ಯ ಸುಮಾರು 82 ಸಾವಿರ ವಾಹನಗಳು ಔಟರ್​ ರಿಂಗ್​ ರೋಡ್ ಮೂಲಕ ಸಂಚರಿಸಿದ್ದವು. ಈ ವರ್ಷದಲ್ಲಿ ಅವುಗಳ ಸಂಖ್ಯೆ ಸುಮಾರು 1 ಲಕ್ಷದ 20 ಸಾವಿರಕ್ಕೆ ಹೆಚ್ಚಿತ್ತು. ಈಗ ವರ್ಕ್​ ಫ್ರಮ್​ ಹೋಮ್​ ಕ್ಯಾನ್ಸಲ್​ ಆಗುತ್ತಿರುವ ಕಾರಣ ಅಕ್ಟೋಬರ್ 1ರಿಂದ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಸಂಚಾರ ದಟ್ಟಣೆ ಸಮಸ್ಯೆಯಿಂದ ಹೈರಾಣಾಗ್ತಿರುವ ವಾಹನ ಸವಾರರಿಗೆ ಖಾಸಗಿ ಕಂಪನಿಗಳ ಈ ನಿರ್ಧಾರ ಮತ್ತಷ್ಟು ತಲೆನೋವು ತಂದಿದೆ. ಒಂದೊಮ್ಮೆ ವರ್ಕ್​ ಫ್ರಮ್​ ಹೋಮ್​ ಕ್ಯಾನ್ಸಲ್​ ಆಗಿದ್ದೇ ಆದಲ್ಲಿ ಪ್ರತಿನಿತ್ಯ ಓಡಾಡುವ ಉದ್ಯೋಗಿಗಳ ಸಂಖ್ಯೆ ಬೆಂಗಳೂರಲ್ಲಿ ದ್ವಿಗುಣವಾಗುವ ನಿರೀಕ್ಷೆ ಇದೆ.

ಖಾಸಗಿ ಕಂಪನಿಗಳ ಈ ನಿರ್ಧಾರಕ್ಕೆ ಗ್ರೇಟರ್ ಬೆಂಗಳೂರು ಐಟಿ ಕಂಪನೀಸ್ ಆ್ಯಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಉದ್ಯೋಗಿಗಳಿಗೆ ನೀಡಲಾಗಿರುವ ವರ್ಕ್ ಫ್ರಮ್ ಹೋಮ್ ಸೌಲಭ್ಯ ಹಿಂಪಡೆಯದಂತೆ ಆಗ್ರಹಿಸಿದೆ.

ಇದನ್ನೂ ಓದಿ: Bengaluru: ಅ.2ರಂದು ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ