Girish Mattannavar: ರೌಡಿಶೀಟರ್‌ನ ಮಾನವ ಹಕ್ಕು ಅಧಿಕಾರಿ ಎಂದಿದ್ದ ಗಿರೀಶ್ ಮಟ್ಟಣ್ಣನವರ್‌ಗೆ ಸಂಕಷ್ಟ; ದೂರು ದಾಖಲು
Girish Mattannavar: ಅಪರಾಧ ಹಿನ್ನೆಲೆಯ ವ್ಯಕ್ತಿಯನ್ನು ಮಾನವ ಹಕ್ಕು ಅಧಿಕಾರಿಯಾಗಿ ಪರಿಚಯಿಸುವುದು ಸೂಕ್ತವಲ್ಲ. ಈ ರೀತಿಯ ತಪ್ಪು ಪರಿಚಯವು ಮಾನವ ಹಕ್ಕು ಆಯೋಗದ ಪ್ರಾಮಾಣಿಕತೆಗೆ ಕಳಂಕವನ್ನು ತರುತ್ತದೆ. ಈ ಕೃತ್ಯ ಮಾಡಿದ ಗಿರೀಶ್ ಮಟ್ಟೆಣ್ಣನವರ ವಿರುದ್ಧ ತುರ್ತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.


ಬೆಂಗಳೂರು: ರೌಡಿಶೀಟರ್‌ನನ್ನು ಮಾನವ ಹಕ್ಕು ಅಧಿಕಾರಿ ಎಂದು ಪೋಲಿಸರಿಗೆ ತಪ್ಪು ಮಾಹಿತಿ ನೀಡಿರುವ ಗಿರೀಶ್ ಮಟ್ಟಣ್ಣನವರ್ (Girish Mattannavar) ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಬೆಂಗಳೂರಿನ ಸುರೇಶ್ ಎಚ್.ಎಂ. ಎಂಬುವವರು ದೂರು ಸಲ್ಲಿಸಿದ್ದಾರೆ. ಧರ್ಮಸ್ಥಳ ಪ್ರಕರಣ ಸಂಬಂಧ ಗಿರೀಶ್ ಮಟ್ಟಣ್ಣನವರ್, ಹುಬ್ಬಳ್ಳಿ-ಧಾರವಾಡ ರೌಡಿ ಶೀಟರ್ ಮದನ್ ಬುಗಡಿಯನ್ನು ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಪೋಲಿಸರಿಗೆ ಪರಿಚಯಿಸಿದ್ದು, ಇದು ಅತ್ಯಂತ ಗಂಭೀರ ವಿಷಯವಾಗಿದೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಮಾಹಿತಿ ಪ್ರಕಾರ, ಮದನ್ ಬುಗಡಿ ಮಾನವ ಹಕ್ಕು ಅಧಿಕಾರಿಯಲ್ಲ, ಬದಲಾಗಿ ಹುಬ್ಬಳ್ಳಿಯ ರೌಡಿಶೀಟರ್ ಆಗಿದ್ದು, ಆತನ ಮೇಲೆ ಕೊಲೆ ಸೇರಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ. ಮದನ್ ಬುಗಡಿ ಡಿಸೆಂಬನರ್‌ಲ್ಲಿ ಹುಬ್ಬಳ್ಳಿ ರೌಡಿ ಪರೇಡ್‌ನಲ್ಲಿ ಭಾಗವಹಿಸಿದ್ದರು. ಹಳೆ ಹುಬ್ಬಳ್ಳಿಯಲ್ಲಿ 5, ಕೇಶ್ವಾಪುರದಲ್ಲಿ 1, ಮತ್ತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ.
ಪೊಲೀಸರ ಹೇಳಿಕೆ ಪ್ರಕಾರ, ರೌಡಿಶೀಟರ್ ಕಾರ್ಯಾಚರಣೆಗಳಲ್ಲಿ ಮದನ್ ನಿರ್ವಹಣೆ ಕಂಡುಬಂದಿದ್ದು, ಈ ಹಿನ್ನೆಲೆಯು ಯಾರಾದರೂ ವ್ಯಕ್ತಿಯನ್ನು ಮಾನವ ಹಕ್ಕು ಅಧಿಕಾರಿಯಾಗಿ ಪರಿಚಯಿಸಲು ಸೂಕ್ತವಲ್ಲ. ಈ ರೀತಿಯ ತಪ್ಪು ಪರಿಚಯವು ಮಾನವ ಹಕ್ಕು ಆಯೋಗದ ಪ್ರಾಮಾಣಿಕತೆಗೆ ಕಳಂಕವನ್ನು ತರುತ್ತದೆ. ಈ ಕೃತ್ಯ ಮಾಡಿದ ಗಿರೀಶ್ ಮಟ್ಟೆಣ್ಣನವರ ವಿರುದ್ಧ ತುರ್ತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ನಿಮ್ಮ ಆಯೋಗದಿಂದ ವಿನಂತಿಸಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Chinthamani News: ಬಿಜೆಪಿಯಿಂದ ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಹೋರಾಟ ಬೃಹತ್ ಪ್ರತಿಭಟನೆ