Actor Ramesh Aravind: ರಮೇಶ್ ಅರವಿಂದ್ ಡೇ; ಅಮೆರಿಕದ ಟೆಕ್ಸಾಸ್‌ನಲ್ಲಿ ಕನ್ನಡದ ನಟನಿಗೆ ವಿಶೇಷ ಗೌರವ
Dr Ramesh Aravind Day: ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಹಾಗೂ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಕನ್ನಡದ ಹಿರಿಯ ನಟ ರಮೇಶ್ ಅರವಿಂದ್ ಅವರನ್ನು, ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್ ನಗರದಲ್ಲಿ ವಿಶೇಷವಾಗಿ ಗೌರವಿಸಲಾಗಿದೆ.


ಟೆಕ್ಸಾಸ್: ನಟ, ನಿರ್ದೇಶಕ, ಚಿತ್ರಕಥೆಗಾರ ಹಾಗೂ ನಿರೂಪಕರಾಗಿ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಹಾಗೂ ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಕನ್ನಡದ ಹಿರಿಯ ನಟ ರಮೇಶ್ ಅರವಿಂದ್ (Actor Ramesh Aravind) ಅವರನ್ನು ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್ ನಗರದಲ್ಲಿ ಅನಿವಾಸಿ ಭಾರತೀಯರು ವಿಶೇಷವಾಗಿ ಗೌರವಿಸಿದ್ದಾರೆ. ʼಡೇ ಆಫ್ ಗ್ರಾಟಿಟ್ಯೂಡ್ 2025ʼ ಸಮಾರಂಭದಲ್ಲಿ ʼರಮೇಶ್ ಅರವಿಂದ್ ಡೇʼ (Dr Ramesh Aravind Day) ಅನ್ನು ಆಚರಿಸುವ ಮೂಲಕ ಕನ್ನಡದ ನಟನಿಗೆ ಗೌರವ ಸಲ್ಲಿಸಲಾಗಿದೆ.
ಆಸ್ಟಿನ್ ನಗರದ ʼಪ್ರೋಕ್ಲಮೇಷನ್ ಡೇʼ ದಿನದಂದು ಮೇಯರ್, ಪ್ರೊಟೆಮ್ ವನೀಸಾ ಅವರು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬೌಟ್ ಅವರ ಸಂದೇಶದ ಸನ್ಮಾನ ಪತ್ರವನ್ನು ನೀಡಿ ಕನ್ನಡದ ನಟನನ್ನು ಗೌರವಿಸಿದರು.

ಗ್ರಾಟಿಟ್ಯೂಟ್ ಡೇ , ಸಂಸ್ಥಾಪಕ ಎಂ. ಜೆ. ಚಾರ್ಮನಿ ಅವರ ಸ್ವಾಗತದೊಂದಿಗೆ ಆ.23 ರಂದು ಸಾವಿರಾರು ಗಣ್ಯರ ಸಮ್ಮುಖದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು. ಆಸ್ಟಿನ್ ನಗರದ ಚೀಫ್ ಲರ್ನಿಂಗ್ ಆಫೀಸರ್, ಮೀಚಲೇ ಲಾ ಟೋರನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | BBK 12: ಬಿಗ್ ಬಾಸ್ ಕನ್ನಡ ಆರಂಭಕ್ಕೆ ಡೇಟ್ ಫಿಕ್ಸ್: ಈ ದಿನಾಂಕದಂದು ಪ್ರೋಮೋ ರಿಲೀಸ್
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಮೇಶ್ ಅರವಿಂದ್ ಅವರು, ಈ ಕಾರ್ಯಕ್ರಮ ನನ್ನ ಜೀವನದ ಅಭೂತಪೂರ್ವ ಕ್ಷಣ. ಇದನ್ನು ನಾನು ಮರೆಯಲಾರೆ ಎಂದರು.