ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕ್ರಿಕೆಟ್ ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಇನ್ನಿಲ್ಲ

ಸಾಹಿತ್ಯದಲ್ಲೂ ಕೈಯಾಡಿಸಿದ್ದ ಇವರು ಹಲವಾರು ಪತ್ತೇದಾರಿ ಮತ್ತಿತರ ಕಾದಂಬರಿಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಇವರ ಜೀವನ ಸಾಧನೆಯ 'ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು' ಪುಸ್ತಕ ಪ್ರಕಟವಾಗಿತ್ತು. ವಿಶ್ವವಿಖ್ಯಾತ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಬಿ.ಎಸ್. ಚಂದ್ರಶೇಖರ್ ಅವರು ಈ ಕೃತಿಯನ್ನು ಬಿಡುಗಡೆ ಮಾಡಿದ್ದರು.

ಕ್ರಿಕೆಟ್ ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಇನ್ನಿಲ್ಲ

ಚನ್ನಗಿರಿ ಕೇಶವಮೂರ್ತಿ

ಹರೀಶ್‌ ಕೇರ ಹರೀಶ್‌ ಕೇರ May 6, 2025 2:30 PM

ಬೆಂಗಳೂರು: ಪ್ರಸಿದ್ಧ ಕ್ರಿಕೆಟ್ ಅಂಕಿ ಅಂಶ ತಜ್ಞ, ಕಾಫಿ ಬೋರ್ಡ್‌ನ ನಿವೃತ್ತ ಉಪ ಕಾರ್ಯದರ್ಶಿಗಳು ಆಗಿದ್ದ ಚನ್ನಗಿರಿ ಕೇಶವಮೂರ್ತಿ (85) ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಇವರಿಂದ ಸಾಹಿತ್ಯ ಮತ್ತು ಕ್ರಿಕೆಟ್ ಕ್ಷೇತ್ರಕ್ಕೆ ಅಪಾರ ಸೇವೆ ಸಂದಿದೆ. ಕ್ರಿಕೆಟ್‌ ಎಲ್ಲ ಅಂಕಿ ಅಂಶಗಳೂ ಇವರ ಬಾಯ್ತುದಿಯಲ್ಲಿದ್ದವು. ಅನೇಕ ಇಂಗ್ಲಿಷ್, ಕನ್ನಡ ಕೃತಿಕಾರರು ಕ್ರಿಕೆಟ್‌ಗೆ ಸಂಬಂಧಿಸಿ ಕೃತಿ ರಚನೆಗಾಗಿ ಇವರ ಸಹಾಯವನ್ನು ಪಡೆದಿದ್ದಾರೆ.

ಸಾಹಿತ್ಯದಲ್ಲೂ ಕೈಯಾಡಿಸಿದ್ದ ಇವರು ಹಲವಾರು ಪತ್ತೇದಾರಿ ಮತ್ತಿತರ ಕಾದಂಬರಿಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಕಗ್ಗೆರೆ ಪ್ರಕಾಶ್‌ ಅವರು ಸಂಪಾದಿಸಿದ್ದ ಇವರ ಜೀವನ ಸಾಧನೆಯ 'ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು' ಪುಸ್ತಕ ಪ್ರಕಟವಾಗಿತ್ತು. ವಿಶ್ವವಿಖ್ಯಾತ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಬಿ.ಎಸ್. ಚಂದ್ರಶೇಖರ್ ಅವರು ಈ ಕೃತಿಯನ್ನು ಬಿಡುಗಡೆ ಮಾಡಿದ್ದರು.

ಕಾಫಿ ಬೋರ್ಡ್‌ನ ಉಪ ಕಾರ್ಯದರ್ಶಿಯಾಗಿ ಕೆಲವು ಕಾಲ ಇವರು ಮೌಲ್ಯಯುತ ಸೇವೆ ಸಲ್ಲಿಸಿದ್ದರು. ಚನ್ನಗಿರಿ ಕೇಶವಮೂರ್ತಿ ಅವರು ಮಗ ಸಂಜಯ್, ಮಗಳು ಸವಿತಾ, ಪತ್ನಿ ಶಾಂತಾ ಹಾಗೂ ಅಪಾರ ಬಂಧು ಬಳಗ, ಸ್ನೇಹಿತರನ್ನು ಅಗಲಿದ್ದಾರೆ.

ಇದನ್ನೂ ಓದಿ: Book Release: ಚನ್ನಗಿರಿ ಕೇಶವಮೂರ್ತಿ ಜೀವನ ಸಾಧನೆಯ ಪುಸ್ತಕ ಲೋಕಾರ್ಪಣೆ