ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಿಂತಾಮಣಿ ನಗರದಲ್ಲಿ ಕ್ಷುಲ್ಲಕ ಕಾರಣದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯ

ನಗರದ ನಾರಸಿಂಹಪೇಟೆಯ ನಿವಾಸಿ ಅರ್ಬಾಜ್(23) ವರ್ಷ ಮೃತಪಟ್ಟಿರುವ ಯುವಕ. ವೆಂಕಟಗಿರಿ ಕೋಟೆಯ ನಿವಾಸಿ ಫಹಾದ್ ಕೊಲೆ ಮಾಡಿರುವ ಆರೋಪಿ. ನಗರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ವಾಸೀಮ್ ಎಂಬುವವರ ಹಣ್ಣಿನ ಅಂಗಡಿಯಲ್ಲಿ ಅರ್ಬಾಜ್ ಕೆಲಸ ಮಾಡುತ್ತಿದ್ದ. ಅದರ ಪಕ್ಕದಲ್ಲೇ ಇರುವ ಸಾಧಿಕ್ ಎಂಬುವವರ ಹಣ್ಣಿನ ಅಂಗಡಿಯಲ್ಲಿ ಫಹಾದ್ ಕೆಲಸ ಮಾಡುತ್ತಿದ್ದನು.

ಕ್ಷುಲ್ಲಕ ಕಾರಣದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯ

-

Ashok Nayak Ashok Nayak Sep 11, 2025 10:34 AM

ಚಿಂತಾಮಣಿ: ನಗರದ ಎಂ ಜಿ ರಸ್ತೆಯ ಸರ್ಕಾರಿ ಆಸ್ಪತ್ರೆಯ ಮುಂಭಾಗದ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುವ ಇಬ್ಬರು ಕೆಲಸಗಾರರ ನಡುವೆ ಕ್ಷುಲ್ಲಕ ಕಾರಣದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯಗೊಂಡಿದೆ.

ನಗರದ ನಾರಸಿಂಹಪೇಟೆಯ ನಿವಾಸಿ ಅರ್ಬಾಜ್(23) ವರ್ಷ ಮೃತಪಟ್ಟಿರುವ ಯುವಕ. ವೆಂಕಟಗಿರಿ ಕೋಟೆಯ ನಿವಾಸಿ ಫಹಾದ್ ಕೊಲೆ ಮಾಡಿರುವ ಆರೋಪಿ. ನಗರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ವಾಸೀಮ್ ಎಂಬುವವರ ಹಣ್ಣಿನ ಅಂಗಡಿಯಲ್ಲಿ ಅರ್ಬಾಜ್ ಕೆಲಸ ಮಾಡುತ್ತಿದ್ದ. ಅದರ ಪಕ್ಕದಲ್ಲೇ ಇರುವ ಸಾಧಿಕ್ ಎಂಬುವವರ ಹಣ್ಣಿನ ಅಂಗಡಿಯಲ್ಲಿ ಫಹಾದ್ ಕೆಲಸ ಮಾಡುತ್ತಿದ್ದನು.

ಇದನ್ನೂ ಓದಿ: Cyber Crime: ಡಿಜಿಟಲ್ ಆರೆಸ್ಟ್ ಮೂಲಕ ಮಾಜಿ ಶಾಸಕರಿಗೇ 30 ಲಕ್ಷ ರೂ. ವಂಚನೆ!

ಮಂಗಳವಾರ ಸಂಜೆ ಯಾವುದೋ ವಿಷಯಕ್ಕಾಗಿ ತಮಾಷೆಯಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ಕೈ ಕೈ ಮಿಲಾಯಿಸುವ ಹಂತದಲ್ಲಿ ಪಹಾದ್ ಹಣ್ಣು ಕತ್ತರಿಸುವ ಚಾಕುವನ್ನು ಅರ್ಬಾಜ್ ಮೇಲೆ ಎಸೆದಿದ್ದಾನೆ. ಅದು ಕುತ್ತಿಗೆಗೆ ಬಿದ್ದು ಗಂಟಲು ಬಳಿ ಚುಚ್ಚಿಕೊಂಡಿದೆ.

ಗಾಯಾಳುವನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್ ಎನ್ ಆರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕೋಲಾರಕ್ಕೆ ಹೋಗು ತ್ತಿರುವಾಗ ಮಾರ್ಗಮದ್ಯೆ ಸುಗಟೂರು ಬಳಿ ಮೃತಪಟ್ಟಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಲಾರದ ಎಸ್ ಎನ್ ಆರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಫಹಾದ್ ಮತ್ತು ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಆಕಸ್ಮಿಕವೋ ಅಥವಾ ಯಾವುದಾದರೂ ಹಳೆಯ ದ್ವೇಷವೋ ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.

ಇನ್ನೂ ಸ್ಥಳಕ್ಕೆ ಜಿಲ್ಲಾ ಎಸ್ ಪಿ ಕುಶಾಲ್ ಚೌಕ್ಸೆ ಮತ್ತು ಸೆನ್ ಡಿವೈಎಸ್ಪಿ ರವಿಕುಮಾರ್, ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್ ಮತ್ತು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.