ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cyclone Montha: ಮೋಂತಾ ಚಂಡಮಾರುತ ಪರಿಣಾಮ, ಬೆಂಗಳೂರಿನ ಕೆಲ ವಿಮಾನ ರದ್ದು, ರೈಲುಗಳು ವಿಳಂಬ

Bengaluru: ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಇಲಾಖೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಿದೆ. ದಕ್ಷಿಣ ಮಧ್ಯ ರೈಲ್ವೆಯಿಂದ ಹಲವು ರೈಲುಗಳ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಮೋಂತಾ ಚಂಡಮಾರುತ ಪರಿಣಾಮ, ಬೆಂಗಳೂರಿನ ಕೆಲ ವಿಮಾನ ರದ್ದು, ರೈಲುಗಳು ವಿಳಂಬ

-

ಹರೀಶ್‌ ಕೇರ ಹರೀಶ್‌ ಕೇರ Oct 28, 2025 6:51 AM

ಬೆಂಗಳೂರು, ಅ.27: ಮೋಂತಾ ಚಂಡಮಾರುತದ (Cyclone Montha) ತನ್ನ ಎಫೆಕ್ಟ್‌ ತೋರಿಸಲು ಆರಂಭಿಸಿದೆ. ಪರಿಣಾಮವಾಗಿ ಕರ್ನಾಟಕದಲ್ಲೂ ಕಳೆದೆರಡು ದಿನಗಳಿಂದ ಮತ್ತೆ ಮಳೆ ಶುರುವಾಗಿದೆ. ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಮೋಂತಾ ಚಂಡಮಾರುತ (Cyclone Montha) ಅಪ್ಪಳಿಸಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ನಾಳೆ ಕರ್ನಾಟಕದಲ್ಲೂ ಮಳೆ ಹೆಚ್ಚಾಗಲಿದ್ದು, ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿಗೆ ಆಗಮಿಸಲಿರುವ ಕೆಲವು ವಿಮಾನಗಳು ರದ್ದಾಗಿದ್ದು, ರೈಲುಗಳ ಆಗಮನ ಹಾಗೂ ನಿರ್ಗಮನದಲ್ಲೂ ವ್ಯತ್ಯಾಸವಾಗಲಿದೆ.

ಆಂಧ್ರದಲ್ಲಿ ನಾಳೆ (ಅಕ್ಟೋಬರ್ 28) ಚಂಡಮಾರುತದಿಂದಾಗಿ 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಜಯವಾಡದಲ್ಲಿ ಏರ್ ಇಂಡಿಯಾ ವಿಮಾನ ಕೂಡ ರದ್ದಾಗಿದೆ. ಇಂಡಿಗೋ ವಿಮಾನ ಕೂಡ ನಾಳೆಯ ಹವಾಮಾನವನ್ನು ನೋಡಿಕೊಂಡು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ. ಇದರ ನಡುವೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳು 12 ಗಂಟೆ ತಡವಾಗಿ ಪ್ರಯಾಣ ಆರಂಭಿಸಲಿವೆ.

ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಇಲಾಖೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಿದೆ. ದಕ್ಷಿಣ ಮಧ್ಯ ರೈಲ್ವೆಯಿಂದ ಹಲವು ರೈಲುಗಳ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಇದರ ಅನ್ವಯ, ನಾಳೆ ರೈಲುಗಳು ನಿಗದಿತ ನಿರ್ಗಮನ ಸಮಯಕ್ಕಿಂತ 12 ಗಂಟೆಗಳ ಕಾಲ ವಿಳಂಬವಾಗಿ ಹೊರಡಲಿವೆ. ಅವುಗಳೆಂದರೆ,

  1. ರೈಲು ಸಂಖ್ಯೆ 22501 SMVT ಬೆಂಗಳೂರು – ನ್ಯೂ ತಿನ್ಸುಕಿಯಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.

  1. ರೈಲು ಸಂಖ್ಯೆ 12836 SMVT ಬೆಂಗಳೂರು – ಹಟಿಯಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.

  1. ರೈಲು ಸಂಖ್ಯೆ 12503 SMVT ಬೆಂಗಳೂರು – ಅಗರ್ತಲಾ ಹಮ್ ಸಫರ್ ಎಕ್ಸ್‌ಪ್ರೆಸ್.

  1. ರೈಲು ಸಂಖ್ಯೆ 12246 SMVT ಬೆಂಗಳೂರು – ಹೌರಾ ಜಂಕ್ಷನ್ ದುರಂತೋ ಎಕ್ಸ್‌ಪ್ರೆಸ್.

  1. ರೈಲು ಸಂಖ್ಯೆ 12864 SMVT ಬೆಂಗಳೂರು – ಹೌರಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.

  1. ರೈಲು ಸಂಖ್ಯೆ 13433 SMVT ಬೆಂಗಳೂರು – ಮಾಲ್ಡಾ ಟೌನ್ ಅಮೃತ್ ಭಾರತ್ ಎಕ್ಸ್‌ಪ್ರೆಸ್.

  1. ರೈಲು ಸಂಖ್ಯೆ 18048 ವಾಸ್ಕೊ ಡ ಗಾಮ – ಶಾಲಿಮಾರ್ ಅಮರಾವತಿ ಎಕ್ಸ್‌ಪ್ರೆಸ್.

ಇದನ್ನೂ ಓದಿ: Cyclone Montha: ಕರ್ನಾಟಕಕ್ಕೂ ಮೋಂತಾ ಚಂಡಮಾರುತ ಎಫೆಕ್ಟ್: ಎಲ್ಲಿ ಎಷ್ಟು ದಿನ ಮಳೆ?

ಆಂಧ್ರಪ್ರದೇಶದಲ್ಲಿ 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಶಾಖಪಟ್ಟಣ ಪ್ರದೇಶದಲ್ಲಿ 43 ರೈಲುಗಳು ರದ್ದಾಗಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಕ್ಟೋಬರ್ 28ರಂದು ವಿಶಾಖಪಟ್ಟಣಂ ಮೂಲಕ ಹಾದುಹೋಗುವ 43 ರೈಲುಗಳನ್ನು ರದ್ದುಗೊಳಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ಘೋಷಿಸಿದೆ. ಹವಾಮಾನ ಪರಿಸ್ಥಿತಿಗಳು ಸುಧಾರಿಸಿ ಹಳಿಗಳು ತೆರವುಗೊಂಡ ನಂತರ ರೈಲು ಸೇವೆಗಳನ್ನು ಪುನಃಸ್ಥಾಪಿಸಲಾಗುವುದು.

ಬೆಂಗಳೂರಿನ ವಿಮಾನವೂ ರದ್ದು

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಜಯವಾಡದಿಂದ ಬರುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಕ್ಟೋಬರ್ 28ರಂದು ವಿಜಯವಾಡ ವಿಮಾನ ನಿಲ್ದಾಣದಿಂದ ನಿಗದಿಯಾಗಿದ್ದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಅವುಗಳಲ್ಲಿ ಬೆಂಗಳೂರಿನ 2 ವಿಮಾನಗಳೂ ಸೇರಿವೆ. IX 2819 (ವಿಜಾಗ್-ವಿಜಯವಾಡ), IX 2862 (ವಿಜಯವಾಡ-ಹೈದರಾಬಾದ್), IX 2875 (ಬೆಂಗಳೂರು-ವಿಜಯವಾಡ), IX 2876 (ವಿಜಯವಾಡ-ಬೆಂಗಳೂರು), IX 976 (ಶಾರ್ಜಾ-ವಿಜಯವಾಡ), IX 975 (ವಿಜಯವಾಡ-ಶಾರ್ಜಾ), IX 2743 (ಹೈದರಾಬಾದ್-ವಿಜಯವಾಡ), ಮತ್ತು IX 2743 (ವಿಜಯವಾಡ-ವಿಜಯವಾಡ) ವಿಮಾನಗಳ ಹಾರಾಟ ನಾಳೆ ಸ್ಥಗಿತಗೊಳ್ಳಲಿದೆ.