Dharawad News: ಥಿನ್ನರ್‌ನಿಂದ ಮನೆಗೆ ಹೊತ್ತಿಕೊಂಡ ಬೆಂಕಿ, ಬಾಲಕ ಸಾವು, ತಂದೆಗೆ ತೀವ್ರ ಗಾಯ
Dharawad: ಬಾಲಕನ ಅಜ್ಜಿ ಒಲೆ ಹೊತ್ತಿಸಲು ಥಿನ್ನರ್ ಬಳಸಿದ್ದಾರೆ. ಈ ವೇಳೆ ದಿಡೀರನೆ ಬೆಂಕಿ ಹೊತ್ತಿಕೊಂಡು ಬೆಂಕಿ ಇಡೀ ಮನೆ ಆವರಿಸಿದೆ. ಬೆಂಕಿಯಲ್ಲಿ ಸಿಲುಕಿ ಬಾಲಕ ಅಗಸ್ತ್ಯ ಪರದಾಡುತ್ತಿದ್ದಾಗ ರಕ್ಷಣೆಗೆ ಬಂದ ತಂದೆ ಚಂದ್ರಕಾಂತ ಅವರಿಗೂ ಬೆಂಕಿ ಹೊತ್ತಿಕೊಂಡಿದೆ.


ಧಾರವಾಡ: ಧಾರವಾಡದಲ್ಲಿ (Dharawad News) ಘೋರವಾದ ದುರಂತವೊಂದು ಸಂಭವಿಸಿದೆ. ಪೇಂಟ್ ತೆಳು ಮಾಡಲು ಬಳಸುವ ಥಿನ್ನರ್ (Thinner) ಬಾಟಲಿಯಿಂದ ಮನೆಯಲ್ಲಿ ಬೆಂಕಿ (Fire accident) ಹೊತ್ತಿಕೊಂಡಿದ್ದು, ಈ ಘಟನೆಯಲ್ಲಿ ನಾಲ್ಕು ವರ್ಷದ ಬಾಲಕ ಸಾವನಪ್ಪಿದ್ದಾನೆ. ಮಗನನ್ನು ರಕ್ಷಿಸಲು ಬಂದ ತಂದೆಗೆ ಗಂಭೀರವಾದ ಗಾಯಗಳಾಗಿವೆ. ಧಾರವಾಡದ ಸಂತೋಷ್ ನಗರದಲ್ಲಿ ನಿನ್ನೆ ಈ ಘಟನೆ ಸಂಭವಿಸಿದೆ.
ನಾಲ್ಕು ವರ್ಷದ ಬಾಲಕ ಅಗಸ್ತ್ಯ ಸಾವನಪ್ಪಿದ್ದು ಆತನ ತಂದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲಕನ ಅಜ್ಜಿ ಒಲೆ ಹೊತ್ತಿಸಲು ಥಿನ್ನರ್ ಬಳಸಿದ್ದಾರೆ. ಈ ವೇಳೆ ದಿಡೀರನೆ ಬೆಂಕಿ ಹೊತ್ತಿಕೊಂಡು ಬೆಂಕಿ ಇಡೀ ಮನೆ ಆವರಿಸಿದೆ. ಬೆಂಕಿಯಲ್ಲಿ ಸಿಲುಕಿ ಬಾಲಕ ಅಗಸ್ತ್ಯ ಪರದಾಡುತ್ತಿದ್ದಾಗ ರಕ್ಷಣೆಗೆ ಬಂದ ತಂದೆ ಚಂದ್ರಕಾಂತ ಅವರಿಗೂ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಬಾಲಕ ಸಾವನಪ್ಪಿದ್ದಾನೆ. ಸದ್ಯ ತಂದೆ ಚಂದ್ರಕಾಂತ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ದುರಂತ, ಒಬ್ಬ ಸಾವು
ಬೆಂಗಳೂರು: ಇಂದು ಬೆಂಗಳೂರಲ್ಲಿ (Bengaluru) ನಸುಕಿನ ಜಾವ 3:30ಕ್ಕೆ ಭೀಕರವಾದ ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಒಬ್ಬ ಸಜೀವ ದಹನಗೊಂಡಿದ್ದಾನೆ. ಬೆಂಗಳೂರಿನ ನಗರತ್ ಪೇಟೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಮೂವರು ಅಂಗಡಿಯೊಳಗೆ ಸಿಲುಕಿರುವ ಅಥವಾ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ನಗರತ್ ಪೇಟೆಯ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಈ ಅಗ್ನಿ ಅವಘಡ ತಡರಾತ್ರಿ ಸಂಭವಿಸಿದ್ದು, ಅಂಗಡಿಯೊಳಗೆ ನಿದ್ರಿಸಿದ್ದ ಐದಕ್ಕೂ ಹೆಚ್ಚು ಕೆಲಸಗಾರರು ಇದರಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಪ್ಲಾಸ್ಟಿಕ್ ಅಂಗಡಿಯೊಳಗೆ ರಾತ್ರಿ ಕೆಲಸಗಾರರು ಮಲಗಿ ನಿದ್ರಿಸಿರುವಾಗ ಬೆಂಕಿ ಹೊತ್ತಿಕೊಂಡಿದೆ. ತೀವ್ರ ದಹನಕಾರಿ ವಸ್ತುಗಳು ಅಂಗಡಿಯಲ್ಲಿ ಇದ್ದುದರಿಂದ ಬೆಂಕಿ ಶೀಘ್ರವಾಗಿ ವ್ಯಾಪಿಸಿದೆ. ಮಾಹಿತಿ ದೊರೆತ ಕೂಡಲೆ ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಕಾರ್ಯನಿರತವಾಗಿವೆ. ಮೃತಪಟ್ಟವರ ವಿವರಗಳು ದೊರೆತಿಲ್ಲ. ಅಂಗಡಿ ಮಾಲಿಕರನ್ನು ಪತ್ತೆ ಹಚ್ಚಲಾಗುತ್ತಿದೆ. ಶಾರ್ಟ್ ಸರ್ಕಿಟ್‌ನಿಂದ ಹೀಗಾಗಿರಬಹುದು ಎನ್ನಲಾಗಿದ್ದು, ಸುರಕ್ಷತಾ ಕ್ರಮಗಳ ಗೈರುಹಾಜರಿಯ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
ಇದನ್ನೂ ಓದಿ: Self Harming: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕಿ; ಕಾರಣ ನಿಗೂಢ