Deer Rescued: ಕೆರೆಯಲ್ಲಿ ಮುಳುಗುತ್ತಿದ್ದ 4 ವರ್ಷದ ಗರ್ಭಿಣಿ ಜಿಂಕೆ ರಕ್ಷಣೆ
Deer Rescued: ಧಾರವಾಡದ ಹೊರವಲಯದಲ್ಲಿರುವ ಸೋಮೇಶ್ವರ ದೇವಸ್ಥಾನದ ಹತ್ತಿರದ ಕೆರೆಯಲ್ಲಿ ನೀರು ಕುಡಿಯಲು ಹೋಗಿದ್ದ ಜಿಂಕೆ, ಬಳ್ಳಿಗೆ ಸಿಲುಕಿ ಪರದಾಡುತ್ತಿತ್ತು. ಈ ಬಗ್ಗೆ ಸ್ಥಳೀಯರಿಂ ಮಾಹಿತಿ ಪಡೆದ ಧಾರವಾಡದ ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ.


ಧಾರವಾಡ: ನೀರು ಕುಡಿಯಲು ಹೋಗಿ ಕೆರೆಯಲ್ಲಿ ಮುಳುಗುತ್ತಿದ್ದ 4 ವರ್ಷದ ಗರ್ಭಿಣಿ ಜಿಂಕೆಯನ್ನು ರಕ್ಷಣೆ ಮಾಡಿರುವುದು ಧಾರವಾಡದ ಹೊರವಲಯದಲ್ಲಿ ನಡೆದಿದೆ. ಕೆರೆಯಲ್ಲಿ ಸಿಲುಕಿ ಪರದಾಡುತ್ತಿದ್ದ ಜಿಂಕೆಯನ್ನು (Deer Rescued) ಸುರಕ್ಷಿತವಾಗಿ ಹೊರಗಡೆ ತರುವಲ್ಲಿ ಧಾರವಾಡದ ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪ್ರಾಣಿ ಪ್ರಿಯ ಸೋಮು ಅವರು ಯಶಸ್ವಿಯಾಗಿದ್ದಾರೆ.
ಧಾರವಾಡದ ಹೊರವಲಯದಲ್ಲಿರುವ ಸೋಮೇಶ್ವರ ದೇವಸ್ಥಾನದ ಹತ್ತಿರ ಇರುವ ಕೆರೆಯಲ್ಲಿ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ನೀರು ಕುಡಿಯಲು ಹೋಗಿದ್ದ ಜಿಂಕೆ ಕೆರೆಯಲ್ಲಿನ ಬಳ್ಳಿಗೆ ಸಿಲುಕಿ, ಹೊರಬರಲಾಗದೆ ಪರದಾಡುತ್ತಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಪ್ರಾಣಿಪ್ರಿಯ ಸೋಮು ಅವರು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿ, ಕಾರ್ಯಾಚರಣೆ ಮಾಡಿ ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಜಿಂಕೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಈ ಸುದ್ದಿಯನ್ನೂ ಓದಿ | Student Missing: ಆರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವ ಯಮುನಾ ನದಿಯಲ್ಲಿ ಪತ್ತೆ
ಕಡಲಿನಲ್ಲಿ ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲು
ಉಡುಪಿ : ಉಡುಪಿ (Udupi news) ಸಮೀಪದ ಸಮುದ್ರದಲ್ಲಿ ಇಂದು ಘೋರವಾದ ದುರಂತ ಸಂಭವಿಸಿದ್ದು, ನಾಡದೋಣಿ ಮಗುಚಿ ಮೂವರು ಮೀನುಗಾರರು (Fishermen Drowned) ನೀರು ಪಾಲಾಗಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನೀರು ಪಾಲಾದ ಮೂವರು ಮೀನುಗಾರರನ್ನು ಸುರೇಶ್ ಖಾರ್ವಿ (45), ರೋಹಿತ್ ಖಾರ್ವಿ (38) ಹಾಗೂ ಜಗ್ಗು ಅಲಿಯಾಸ್ ಜಗದೀಶ್ ಖಾರ್ವಿ (36) ಎಂದು ಗುರುತಿಸಲಾಗಿದೆ.
ಮೀನುಗಾರಿಕೆಗೆ ಈ ಮೂವರು ಮೀನುಗಾರರು ಸಮುದ್ರಕ್ಕೆ ಇಳಿದಿದ್ದರು. ಕಡಲಬ್ಬರ ಕಂಡು ಮೀನುಗಾರರು ವಾಪಸ್ ಆಗುತ್ತಿದ್ದರು. ಈ ವೇಳೆ ಓರ್ವ ಮೀನುಗಾರ ಅಲೆಗಳ ಅಬ್ಬರಕ್ಕೆ ಸಮುದ್ರಕ್ಕೆ ಬಿದ್ದಿದ್ದಾನೆ. ನೀರಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಇನ್ನಿಬ್ಬರು ಮುಂದಾಗಿದ್ದಾರೆ. ಈ ವೇಳೆ ಮೂವರೂ ಸಮುದ್ರ ಪಾಲಾಗಿದ್ದಾರೆ. ಈಜು ಗೊತ್ತಿದ್ದರೂ ಮೂವರೂ ಅಲೆಗಳ ಅಬ್ಬರದಿಂದಾಗಿ ದೋಣಿಗೆ ಮರಳಲು ಸಾಧ್ಯವಾಗದೆ ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಮೂವರಿಗಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲೆನಾಡು ಹಾಗೂ ಕರಾವಳಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭಾರಿ ಪ್ರಮಾಣದಲ್ಲಿ ಹಳ್ಳಕೊಳ್ಳ ಮತ್ತು ನದಿಗಳು ತುಂಬಿ ಹರಿಯುತ್ತಿವೆ ಹಾಗೂ ಅಪಾರ ಪ್ರಮಾಣದ ನೀರು ಕಡಲನ್ನು ಸೇರುತ್ತಿದೆ. ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಆದರೂ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸಮುದ್ರಕ್ಕೆ ಇವರು ತೆರಳಿದ್ದರು ಎನ್ನಲಾಗಿದೆ.