ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಸೆಪ್ಟೆಂಬರ್‌ 1ರಂದು ಬಿಜೆಪಿ ʼಧರ್ಮಸ್ಥಳ ಚಲೋʼ: ಪ್ರಲ್ಹಾದ್ ಜೋಶಿ

Pralhad Joshi: ಧರ್ಮಸ್ಥಳ ಪ್ರಹಸನದಲ್ಲಿ ಸತ್ಯವನ್ನು ಹೊರಗೆಡವಲು ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ಕೈಗೊಳ್ಳಬೇಕಿದೆ. ಇದಕ್ಕಾಗಿ ಸೆಪ್ಟೆಂಬರ್‌ 1ರ ಸೋಮವಾರ ರಾಜ್ಯ ಬಿಜೆಪಿ ʼಧರ್ಮಸ್ಥಳ ಚಲೋʼ ಹಮ್ಮಿಕೊಂಡಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಧರ್ಮಸ್ಥಳದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಸೆಪ್ಟೆಂಬರ್‌ 1ಕ್ಕೆ ಬಿಜೆಪಿ ʼಧರ್ಮಸ್ಥಳ ಚಲೋʼ: ಪ್ರಲ್ಹಾದ್‌ ಜೋಶಿ

Profile Siddalinga Swamy Aug 28, 2025 10:20 PM

ಹುಬ್ಬಳ್ಳಿ: ಧರ್ಮಸ್ಥಳ ಬುರುಡೆ ಷಡ್ಯಂತ್ರದ ಸತ್ಯಾಸತ್ಯತೆ ಬಯಲಿಗೆಳೆಯಲು ಆಗ್ರಹಿಸಿ ರಾಜ್ಯ ಬಿಜೆಪಿ ಸೆಪ್ಟೆಂಬರ್‌ 1ರಂದು ʼಧರ್ಮಸ್ಥಳ ಚಲೋʼ ಹಮ್ಮಿಕೊಂಡಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕರೆ ಕೊಟ್ಟಿದ್ದಾರೆ.‌ ಹುಬ್ಬಳ್ಳಿಯಲ್ಲಿ ಗುರುವಾರ ಮಾಧ್ಯಮವರೊಂದಿಗೆ ಮಾತನಾಡಿದ ಸಚಿವರು, ಸುಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಬುರುಡೆ ಷಡ್ಯಂತ್ರವನ್ನು ಸರ್ಕಾರ ಸೂಕ್ತ ತನಿಖೆಗೊಳಪಡಿಸಬೇಕು. ಸತ್ಯಾಸತ್ಯತೆ ಹೊರಗೆಡವಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.

ಧರ್ಮಸ್ಥಳ ಪ್ರಹಸನದಲ್ಲಿ ಸತ್ಯವನ್ನು ಹೊರಗೆಡವಲು ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ಕೈಗೊಳ್ಳಬೇಕಿದೆ. ಇದಕ್ಕಾಗಿ ಸೆ. 1ರಂದು ರಾಜ್ಯ ಬಿಜೆಪಿ ʼಧರ್ಮಸ್ಥಳ ಚಲೋʼ ಹಮ್ಮಿಕೊಂಡಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಧರ್ಮಸ್ಥಳದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ. ಸರ್ವರೂ ಇದರಲ್ಲಿ ಭಾಗಿಯಾಗಬೇಕೆಂದು ಸಚಿವರು ಮನವಿ ಮಾಡಿದರು.

ಧರ್ಮಸ್ಥಳ ವಿಚಾರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆ ಮೇಲೆ ದಾಳಿ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್ ಸಹಾಯ ಮಾಡಿದ್ದು, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದಂತಿದೆ. ಈ ಪ್ರಕರಣದಲ್ಲಿ ಸರ್ಕಾರ ಮೊದಲು ಇದನ್ನು ಪತ್ತೆ ಹಚ್ಚಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಎಸ್‌ಐಟಿ ರಚಿಸಲು ಯಾರು ಹೇಳಿದ್ರು?

ಧರ್ಮಸ್ಥಳ ವಿಚಾರವಾಗಿ ಕಾಂಗ್ರೆಸ್ ಬುದ್ಧಿಹೀನರಂತೆ ವರ್ತನೆ ತೋರಿದೆ. ಸಾಮಾನ್ಯ ಜ್ಞಾನವೂ ಇಲ್ಲದಂತೆ ನಡೆದುಕೊಂಡಿದೆ. ಎಸ್ಐಟಿ ರಚಿಸಲು ಯಾರು ಹೇಳಿದ್ದರು? ಎಂದು ಸರ್ಕಾರವನ್ನು ಪ್ರಶ್ನಿಸಿದರು. ಈ ಪ್ರಕರಣದಲ್ಲಿ ಒಬ್ಬ ಯೂಟ್ಯೂಬರ್ ಅನ್ನು ನಂಬಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಳ್ಳಕ್ಕೆ ಬಿದ್ದಿದೆ. ಅತ್ಯಂತ ಬುದ್ಧಿಹೀನರೂ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಜೋಶಿ ಟೀಕಿಸಿದರು.

ಪ್ರಸ್ತುತವಾಗಿ ವಿದೇಶದಲ್ಲಿ ಸಹ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಎಸ್ಐಟಿ ಅಧಿಕಾರಿಗಳ ಮೇಲೆ ಕನಿಕರ ಮೂಡುತ್ತಿದೆ. ಯಾರೋ ಹೇಳಿದರೆಂದು ದೊಡ್ಡ ದೊಡ್ಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದರು.‌

ಈ ಸುದ್ದಿಯನ್ನೂ ಓದಿ | PM Svanidhi Scheme: ಬೀದಿ ಬದಿ ವ್ಯಾಪಾರಿಗಳಿಗೆ ಗುಡ್‌ ನ್ಯೂಸ್:‌ ʼಪಿಎಂ ಸ್ವನಿಧಿʼ ಯೋಜನೆ ಮತ್ತೈದು ವರ್ಷ ವಿಸ್ತರಣೆ

ಎನ್‌ಐಎ ತನಿಖೆ ಬಗ್ಗೆ ಗೊತ್ತಿಲ್ಲ

ಈ ಪ್ರಕರಣ ಎನ್ಐಎ ತನಿಖೆಗೊಳಪಡುವ ಸಾಧ್ಯತೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ‌ಎಸ್ಐಟಿ ಬಗ್ಗೆ ಹೈಕೋರ್ಟ್ ನೇತೃತ್ವದಲ್ಲಿ ಮೊದಲು ತನಿಖೆ ಆಗಬೇಕು. ಹಿಂದೂ ಧರ್ಮ, ಸಂಸ್ಕೃತಿಯನ್ನು ನಾಶ ಮಾಡಲು ಯೋಜಿಸಿ ಹೀಗೆಲ್ಲ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.