Student Missing: ಆರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವ ಯಮುನಾ ನದಿಯಲ್ಲಿ ಪತ್ತೆ
Delhi University: ಆರು ದಿನಗಳ ಹಿಂದೆ ಕಾಣೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ 19 ವರ್ಷದ ವಿದ್ಯಾರ್ಥಿನಿ ಸ್ನೇಹಾ ದೇಬ್‌ನಾಥ್ , ಯಮುನಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತ್ರಿಪುರಾ ನಿವಾಸಿಯಾದ ಸ್ನೇಹಾ ಅವರ ಶವವನ್ನು ಕುಟುಂಬಸ್ಥರು ಗುರುತಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸ್ನೇಹಾ ದೇಬ್ನಾಥ್

ನವದೆಹಲಿ: ಆರು ದಿನಗಳ ಹಿಂದೆ ಕಾಣೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ (Delhi University) 19 ವರ್ಷದ ವಿದ್ಯಾರ್ಥಿನಿ (Student) ಸ್ನೇಹಾ ದೇಬ್‌ನಾಥ್ (Sneha Debnath), ಯಮುನಾ ನದಿಯಲ್ಲಿ (Yamuna River) ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತ್ರಿಪುರಾ ನಿವಾಸಿಯಾದ ಸ್ನೇಹಾ ಅವರ ಶವವನ್ನು ಕುಟುಂಬಸ್ಥರು ಗುರುತಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸ್ನೇಹಾ ಜುಲೈ 7ರಂದು ಉತ್ತರ ದೆಹಲಿಯ ಸಿಗ್ನೇಚರ್ ಬ್ರಿಡ್ಜ್‌ಗೆ ಕ್ಯಾಬ್‌ನಲ್ಲಿ ತೆರಳಿದ್ದಳು. ಆಗಿನಿಂದ ಆಕೆಯ ಸುಳಿವು ಇರಲಿಲ್ಲ. ಇದರಿಂದ ಗಾಬರಿಯಾಗಿದ್ದ ಆಕೆಯ ಕುಟುಂಬದವರು ಹುಡುಕಾಟ ನಡೆಸಿದ್ದರು. ಪೊಲೀಸರ ಪ್ರಕಾರ, ಸ್ನೇಹಾ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಸೂಚಿಸುವ ಕೈಬರಹದ ನೋಟ್ ಪತ್ತೆಯಾಗಿದೆ. ಆಕೆಯ ಓದಿನ ಬಗ್ಗೆ ಯಾವುದೇ ತೊಂದರೆ ಇರಲಿಲ್ಲ, ಆದರೆ ಕುಟುಂಬದ ಕಾರಣಗಳಿಂದ ಭಾವನಾತ್ಮಕವಾಗಿ ಕುಗ್ಗಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ನೇಹಾ ಅವರ ಚಲನವಲನವನ್ನು ಪತ್ತೆಹಚ್ಚಿದ ಪೊಲೀಸರು, ಆಕೆಯ ಕೊನೆಯ ಸ್ಥಳವು ಸಿಗ್ನೇಚರ್ ಬ್ರಿಡ್ಜ್ ಎಂದು ದೃಢಪಡಿಸಿದ್ದಾರೆ. ಆಕೆಯ ಶವವು ಗೀತಾ ಕಾಲೋನಿಯ ಫ್ಲೈಓವರ್ ಬಳಿಯ ಯಮುನಾ ನದಿಯಲ್ಲಿ ಪತ್ತೆಯಾಗಿದೆ. ಕೆಲವು ಪ್ರತ್ಯಕ್ಷದರ್ಶಿಗಳು ಒಬ್ಬ ಯುವತಿ ಸೇತುವೆಯ ಮೇಲೆ ನಿಂತಿರುವುದನ್ನು ಕಂಡು, ನಂತರ ಆಕೆ ಕಾಣೆಯಾದುದನ್ನು ಗಮನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಸ್ಮಶಾನದಲ್ಲಿ ವಿವಾಹಿತ ಮಹಿಳೆಯೊಂದಿಗೆ ಬಿಜೆಪಿ ನಾಯಕನ ರಾಸಲೀಲೆ; ಕ್ಯಾಮರಾ ಕಣ್ಣಲ್ಲಿ ಸೆರೆ
ಸ್ನೇಹಾ ಜುಲೈ 7ರ ರಾತ್ರಿ ತನ್ನ ಆಪ್ತ ಸ್ನೇಹಿತರಿಗೆ ಇಮೇಲ್ ಮತ್ತು ಸಂದೇಶಗಳನ್ನು ಕಳುಹಿಸಿದ್ದಳು. ಆಕೆ ಕಳೆದ ಕೆಲವು ತಿಂಗಳಿಂದ ಭಾವನಾತ್ಮಕವಾಗಿ ಕುಗ್ಗಿದ್ದಳು ಎಂದು ಸ್ನೇಹಿತರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.ಇನ್ನು ಸ್ನೇಹಾ ಕಾಣೆಯಾದ ಸಮಯದಲ್ಲಿ ಸೇತುವೆಯ ಬಳಿಯ ಯಾವುದೇ CCTV ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.
ಆತ್ಮ ರಾಮ ಸನಾತನ ಧರ್ಮ ಕಾಲೇಜಿನಲ್ಲಿ ಸ್ನೇಹಾ ದೇಬ್ನಾಥ್ ವ್ಯಾಸಾಂಗ ಮಾಡುತ್ತಿದ್ದರು.ಅವರು ಮೂಲತಃ ತ್ರಿಪುರದವರಾಗಿದ್ದು, ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಬಂದಿದ್ದರು. ಜುಲೈ 7 ರಂದು, ಅವರು ತಮ್ಮ ಸ್ನೇಹಿತೆಯನ್ನು ಸರೈ ರೋಹಿಲ್ಲಾ ರೈಲ್ವೆ ನಿಲ್ದಾಣದಲ್ಲಿ ಬಿಡಲು ಹೋಗಿದ್ದರು. ಅಂದಿನಿಂದ ಅವರು ಕಾಣೆಯಾಗಿದ್ದರು.