Haveri News: ಹಾವೇರಿಯಲ್ಲಿ ನಾಪತ್ತೆಯಾಗಿದ್ದ ಸಹೋದರಿಯರು ಪುಣೆಯಲ್ಲಿ ಪತ್ತೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರಿಬ್ಬರು ಏಕಾಏಕಿ ಮನೆಯಿಂದ ನಾಪತ್ತೆಯಾದ ಪ್ರಕರಣವು ಜನರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಇದೀಗ ಪೊಲೀಸರು ನಾಪತ್ತೆಯಾಗಿದ್ದ ಅಕ್ಕ ತಂಗಿಯನ್ನು ಪುಣೆಯಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಹಾವೇರಿಯ ಅಬ್ದುಲ್ ಖಾದರ್ ಲೋಹರ್ ಅವರ ಪುತ್ರಿಯರು ನಾಪತ್ತೆಯಾಗಿದ್ದರು.


ಹಾವೇರಿ: ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರಿಬ್ಬರು ಏಕಾಏಕಿ ಮನೆಯಿಂದ ನಾಪತ್ತೆಯಾದ ಪ್ರಕರಣವು ಜನರಲ್ಲಿ ಆತಂಕವನ್ನು (Haveri News) ಸೃಷ್ಟಿಸಿತ್ತು. ಇದೀಗ ಪೊಲೀಸರು ನಾಪತ್ತೆಯಾಗಿದ್ದ ಅಕ್ಕ ತಂಗಿಯನ್ನು ಪುಣೆಯಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಹಾವೇರಿಯ ಅಬ್ದುಲ್ (Missing Case) ಖಾದರ್ ಲೋಹರ್ ಅವರ ಪುತ್ರಿಯರು ನಾಪತ್ತೆಯಾಗಿದ್ದರು. ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹೋದರಿಯರಿಬ್ಬರು ಓದುತ್ತಿದ್ದರು. ಅವರ ತಾಯಿ ಹೆಚ್ಚು ಮೊಬೈಲ್ ನೋಡಬೇಡಿ ಓದಿಕೊಳ್ಳಿ ಎಂದು ಹೇಳಿದ್ದಕ್ಕಾಗಿ ಸಹೋದರಿಯರು ಮನೆಯಿಂದ ಹೊರಟು ಹೋಗಿದ್ದರು. ಇದೀಗ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.
ತಮ್ಮ ಸಹಪಾಠಿಗಳೊಂದಿಗೆ “ನಾವು ಹುಬ್ಬಳ್ಳಿಗೆ ಹೋಗುತ್ತೇವೆ” ಎಂದು ಹೇಳಿ, ಕೇವಲ ಒಂದೆರಡು ಬಟ್ಟೆಗಳನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಮನೆಯಿಂದ ಹೊರಟಿದ್ದರು. ಆದರೆ, ಅವರು ಹಾವೇರಿಯಿಂದ ದಾದರ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಪುಣೆಗೆ ಪ್ರಯಾಣಿಸಿದ್ದರು. ಬಾಲಕಿಯರ ನಾಪತ್ತೆಯ ವಿಷಯ ತಿಳಿದ ತಕ್ಷಣ, ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು, ಮತ್ತು ಬಾಲಕಿಯರ ಶಾಲಾ ಸಹಪಾಠಿಗಳು ಹಾಗೂ ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಲಾಯಿತು. ಹಾವೇರಿಯ ಪ್ರಮುಖ ಬೀದಿಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ತನಿಖೆ ನಡೆಸಿದ್ದರು.
ನಂತರ ಇವರಿಬ್ಬರು ಪುಣೆಯಲ್ಲಿರುವುದು ತಿಳಿದು ಬಂದಿತ್ತು. ವಿಚಾರಣೆಯ ಸಂದರ್ಭದಲ್ಲಿ, ಬಾಲಕಿಯರು ತಾಯಿಯ ಬುದ್ಧಿಮಾತಿಗೆ ಮುನಿಸಿಕೊಂಡು ಮನೆ ತೊರೆದಿರುವುದು ದೃಢಪಟ್ಟಿತ್ತು. ಪುಣೆ ಪೊಲೀಸರು ತಕ್ಷಣವೇ ಬಾಲಕಿಯರನ್ನು ರಕ್ಷಿಸಿ, ಹಾವೇರಿ ಪೊಲೀಸರಿಗೆ ಮಾಹಿತಿ ರವಾನಿಸಿದರು. ಬಾಲಕಿಯರ ಪೋಷಕರು ಹಾವೇರಿ ಪೊಲೀಸರೊಂದಿಗೆ ಪುಣೆಗೆ ತೆರಳಿ ಮಕ್ಕಳನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Murder Case: ಪಾರ್ಟಿ ಮಾಡುತ್ತಿದ್ದ ಮಾಜಿ ಗ್ರಾ.ಪಂ ಅಧ್ಯಕ್ಷನ ಮೇಲೆ ಡೆಡ್ಲಿ ಅಟ್ಯಾಕ್; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಯುವಕನ ಕೊಲೆ
ಶಿವಮೊಗ್ಗದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. 38 ವರ್ಷದ ಯುವಕ ಮಣಿಕಂಠ ಕೊಲೆಯಾದ ದುರ್ದೈವಿ. ಮಣಿಕಂಠ, ಗಾರೆ ಕೆಲಸಗಾರರಾಗಿ ಜೀವನ ಸಾಗಿಸುತ್ತಿದ್ದವನು. ತನ್ನ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ ಅವನು, ದಿನನಿತ್ಯದ ಕೆಲಸದಿಂದ ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದ. ತಡರಾತ್ರಿ ಯಾರೋ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ, ದೊಡ್ಡ ಕಲ್ಲಿನಿಂದ ತಲೆ ಮೇಲೆ ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾರೆ. ತುಂಗಾನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.