G Parameshwara: ಮುನಿಯಪ್ಪ ಮುಖ್ಯಮಂತ್ರಿ ಆದರೆ ಸ್ವಾಗತಿಸುತ್ತೇನೆ: ಗೃಹ ಸಚಿವ ಜಿ. ಪರಮೇಶ್ವರ
KH Muniyappa: ಮುನಿಯಪ್ಪ ಅವರು ಎರಡು ಬಾರಿ ಎಂಪಿ ಆಗಿದ್ದಾರೆ. ಎರಡು ಬಾರಿ ಎಂಪಿಯಾಗಿರುವುದು ಸಾಮಾನ್ಯವಲ್ಲ. ಅವರು ಹಿರಿಯರಿದ್ದಾರೆ. ಅವರು ಕೇಂದ್ರದಲ್ಲಿ ಕೂಡ ಸಚಿವರಾಗಿದ್ದರು. ಕೇಂದ್ರದಲ್ಲಿ ಸಚಿವರಾದ ಬಳಿಕ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಹಾಗಾಗಿ ಅವರು ಸಮರ್ಥರಿದ್ದು ಅವರಿಗೆ ಸಿಎಂ ಆಗುವ ಅರ್ಹತೆ ಇದೆ ಎಂದರು.
-
ಹರೀಶ್ ಕೇರ
Oct 27, 2025 1:59 PM
ಬೆಂಗಳೂರು : ಕೆ.ಎಚ್ ಮುನಿಯಪ್ಪ (KH Muniyappa) ಮುಖ್ಯಮಂತ್ರಿ (Chief minister) ಆದರೆ ನಾನು ಸ್ವಾಗತ ಮಾಡುತ್ತೇನೆ, ಸಂತೋಷ ಪಡುತ್ತೇನೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ (Home minister G Parameshwara) ಹೇಳಿಕೆ ನೀಡಿದ್ದಾರೆ. ಆ ಮೂಲಕ ಗೃಹ ಸಚಿವರು ರಾಜ್ಯದಲ್ಲಿ ʼದಲಿತ ಸಿಎಂʼ ದಾಳ ಉರುಳಿಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಮುನಿಯಪ್ಪ ಅವರು ಸಮರ್ಥರಿದ್ದಾರೆ. ಅವರು ಸಿಎಂ ಆಗುವುದಾದರೆ ನಾನು ಸಂತೋಷ ಪಡುತ್ತೇನೆ ಎಂದಿದ್ದಾರೆ.
ತುಳಿತಕ್ಕೆ ಒಳಗಾಗಿರುವ ವರ್ಗಕ್ಕೆ ಆಡಳಿತ ಬೇಕಿದೆ. ಆ ವರ್ಗಕ್ಕೆ ಆಡಳಿತ ಸಿಗುತ್ತೆ ಎಂದರೆ ಸಂತೋಷ. ಆದರೆ ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮುನಿಯಪ್ಪ ಅವರು ಎರಡು ಬಾರಿ ಎಂಪಿ ಆಗಿದ್ದಾರೆ. ಎರಡು ಬಾರಿ ಎಂಪಿಯಾಗಿರುವುದು ಸಾಮಾನ್ಯವಲ್ಲ. ಅವರು ಹಿರಿಯರಿದ್ದಾರೆ. ಅವರು ಕೇಂದ್ರದಲ್ಲಿ ಕೂಡ ಸಚಿವರಾಗಿದ್ದರು. ಕೇಂದ್ರದಲ್ಲಿ ಸಚಿವರಾದ ಬಳಿಕ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಹಾಗಾಗಿ ಅವರು ಸಮರ್ಥರಿದ್ದು ಅವರಿಗೆ ಸಿಎಂ ಆಗುವ ಅರ್ಹತೆ ಇದೆ. ಅವರು ಸಿಎಂ ಆದರೆ ನಾನು ಸಂತೋಷ ಪಡುತ್ತೇನೆ ಎಂದರು.
ಇದನ್ನೂ ಓದಿ: Dharmasthala Case: ಅ.31ರ ಒಳಗೆ ಧರ್ಮಸ್ಥಳ ಪ್ರಕರಣದ ತನಿಖೆ ಸಂಪೂರ್ಣ: ಜಿ. ಪರಮೇಶ್ವರ್
ನಾವೆಲ್ಲ ಒಂದು ವರ್ಗಕ್ಕೆ ಸೇರಿದ್ದು, ಆ ವರ್ಗಕ್ಕೆ ಆಡಳಿತ ಸಿಕ್ಕರೆ ಸಂತೋಷಪಡುತ್ತೇನೆ. ಯಾವ ವರ್ಗ ತುಳಿತಕ್ಕೆ ಒಳಗಾಗಿದೆಯೋ ಆ ವರ್ಗಕ್ಕೆ ಆಡಳಿತ ಸಿಗುತ್ತೆ ಎಂದರೆ ಸಂತೋಷ ಪಡುತ್ತೇನೆ. ಈಗ ಬಿಹಾರ ಎಲೆಕ್ಷನ್ ನಡೆಯುತ್ತಿದೆ. ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಬದಲಾವಣೆ ಆಗುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.