ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BR Patil: ನನ್ನನ್ನು ಸೋಲಿಸಲು 6,900 ಮತ ಡಿಲೀಟ್: ಕಾಂಗ್ರೆಸ್‌ ಶಾಸಕ ಬಿಆರ್‌ ಪಾಟೀಲ ಆರೋಪ

ನನ್ನನ್ನು ಸೋಲಿಸುವ ಉದ್ದೇಶದಿಂದ ಮತಗಳ್ಳತನ ನಡೆದಿತ್ತು. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪರವಾಗಿದ್ದ 6,900 ಮತಗಳನ್ನು ಡಿಲೀಟ್ ಮಾಡಿದ್ದರು. ಈ ವಿಚಾರವಾಗಿ ದೂರು ಕೂಡ ದಾಖಲಾಗಿದೆ. ಆದರೆ ಚುನಾವಣಾ ಆಯೋಗ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಬಿಆರ್‌ ಪಾಟೀಲ ಹೇಳಿದ್ದಾರೆ.

ನನ್ನ ಸೋಲಿಸಲು 6,900 ಮತ ಡಿಲೀಟ್: ಕಾಂಗ್ರೆಸ್‌ ಶಾಸಕ ಬಿಆರ್‌ ಪಾಟೀಲ ಆರೋಪ

-

ಹರೀಶ್‌ ಕೇರ ಹರೀಶ್‌ ಕೇರ Sep 8, 2025 1:17 PM

ಕಲಬುರಗಿ: ನನ್ನನ್ನು ಸೋಲಿಸುವ ಉದ್ದೇಶದಿಂದ ಕಳೆದ ವಿಧಾನಸಭೆ ಚುನಾವಣೆಯ (Assembly election) ಸಂದರ್ಭ ಮತದಾರರ ಪಟ್ಟಿಯಿಂದ 6,900 ಮತಗಳನ್ನು ಡಿಲೀಟ್ ಮಾಡಿಸಲಾಗಿದೆ ಎಂದು ಕಲಬುರಗಿ (Kalaburagi) ಜಿಲ್ಲೆಯ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಬಿಆರ್ ಪಾಟೀಲ್ (BR Patil) ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಹದೇವಪುರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ (Vote theft) ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದರು. ಇದೀಗ ಬಿಆರ್‌ ಪಾಟೀಲ್‌ ಸಹ ಸ್ಪೋಟಕ ಆರೋಪ ಮಾಡಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಸೋಲಿಸುವ ಉದ್ದೇಶದಿಂದ ಮತಗಳ್ಳತನ ನಡೆದಿತ್ತು. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪರವಾಗಿದ್ದ 6,900 ಮತಗಳನ್ನು ಡಿಲೀಟ್ ಮಾಡಿದ್ದರು. ಈ ವಿಚಾರವಾಗಿ ದೂರು ಕೂಡ ದಾಖಲಾಗಿದೆ. ಆದರೆ ಚುನಾವಣಾ ಆಯೋಗ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದರು.

ನಮ್ಮ ಕಾರ್ಯಕರ್ತರ ಹೆಸರು ಮತ ಪಟ್ಟಿಯಿಂದ ಬಿಟ್ಟು ಹೋದದ್ದು ಗೊತ್ತಾಯಿತು. ಸುಮಾರು ಜನರಿಂದ ಈ ರೀತಿ ಕಂಪ್ಲೇಂಟ್ ಬಂತು. ತಕ್ಷಣ ನಾನು ಮತ್ತು ಪ್ರಿಯಾಂಕ ಖರ್ಗೆ ಚುನಾವಣಾ ಆಯೋಗ ಭೇಟಿ ಮಾಡಿ ಪ್ರತಿಭಟನೆ ಮಾಡಿದ ಮೇಲೆ ಅದನ್ನು ಡಿಲೀಟ್ ಮಾಡುವುದನ್ನು ನಿಲ್ಲಿಸಿದರು. ರಾಹುಲ್ ಗಾಂಧಿಯವರು ಹೇಳಿದ್ದು ಮತಗಳ್ಳತನ ಅಭಿಯಾನಕ್ಕೆ ಇನ್ನೊಂದು ಉದಾಹರಣೆಯಾಗಿದೆ ಎಂದಿದ್ದಾರೆ.

ಇದರ ಹಿನ್ನೆಲೆಯಲ್ಲಿರುವ ಉದ್ದೇಶ ನನಗೆ ಬೇಕಾದಂತಹ ಮತದಾರರನ್ನು ಮತಪಟ್ಟಿಯಿಂದ ಡಿಲೀಟ್ ಮಾಡಿ ಚುನಾವಣೆ ಗೆಲ್ಲುವಂತಹ ತಂತ್ರಗಾರಿಕೆ ಅವತ್ತು ಆಗಿತ್ತು. ಆದರೆ ಅಂದಿನ ದಿನಗಳಲ್ಲಿ ನಾವು ಜಾಗೃತರಾದ ತಕ್ಷಣ ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇಲ್ಲವಾದರೆ ನಾನು ಚುನಾವಣೆಯಲ್ಲಿ ಸೋಲುತ್ತಿದ್ದೆ ಎಂದು ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಗಂಭೀರವಾದ ಆರೋಪ ಮಾಡಿದರು.

ಇದನ್ನೂ ಓದಿ: Laxmi Hebbalkar: ಬಿಜೆಪಿಗರ ಮತಗಳ್ಳತನದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ- ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಪ