ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲಬುರಗಿ

ಮಾಜಿ ಸಿಎಂ ಸಿದ್ದರಾಮಯ್ಯ ಮೂರ್ತಿ ತೆರವು ಖಂಡಿಸಿ ಕಲಬುರಗಿಯಲ್ಲಿ ಅಭಿಮಾನಿಗಳ ಬಳಗದಿಂದ ಪ್ರತಿಭಟನೆ

ಮಾಜಿ ಸಿಎಂ ಸಿದ್ದರಾಮಯ್ಯ ಮೂರ್ತಿ ತೆರವು ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ

Kalaburagi News: ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ, ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ತೆರವುಗೊಳಿಸಿರುವ ಸ್ಥಳದಲ್ಲಿಯೇ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಮರಳಿ ಪ್ರತಿಷ್ಠಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಮಳೆ ಕೈ ಕೊಟ್ಟ ಹಿನ್ನೆಲೆ ಕೃಷಿಗೆ ಸಂಕಷ್ಟ, ಬರ ಘೋಷಣೆಗೆ ರೈತರ ಒತ್ತಾಯ: 1000 ಕೋಟಿ ವಿಶೇಷ ಪ್ಯಾಕೇಜ್‌ಗೆ ಆಗ್ರಹ

1000 ಕೋಟಿ ವಿಶೇಷ ಪ್ಯಾಕೇಜ್‌ಗೆ ಆಗ್ರಹ

ಕಲಬುರಗಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿರುವ ಸಂದರ್ಭದಲ್ಲೇ ರೈತರ ಈ ಬೇಡಿಕೆ ಮತ್ತಷ್ಟು ಮುನ್ನೆಲೆಗೆ ಬಂದಿದೆ. ಬರದ ಸಂಕಷ್ಟದಲ್ಲಿರುವ ಕೃಷಿಕರಿಗೆ ಸರಕಾರ ತಕ್ಷಣ ಸ್ಪಂದಿಸಬೇಕು. ನೈಜ ಬೆಳೆನಷ್ಟ ಗುರುತಿಸಿ ಪರಿಹಾರ ಕಲ್ಪಿಸುವ ಜತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಗಾಣಗಾಪುರದ ಶ್ರೀ ದತ್ತಾತ್ರೇಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್

ಗಾಣಗಾಪುರದ ಶ್ರೀ ದತ್ತಾತ್ರೇಯ ಸನ್ನಿಧಿಗೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ

CM DK Shivakumar: ಗಾಣಗಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಈಗಾಗಲೇ ಸೂಕ್ತ ಯೋಜನೆಗಳನ್ನು ಘೋಷಿಸಿದೆ. ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮನವಿಯಂತೆ ಹಂತ- ಹಂತವಾಗಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

Street Festival: ಸ್ಟ್ರೀಟ್‌ ಫೆಸ್ಟಿವಲ್‌ಗೆ ಭಾರೀ ಸ್ಪಂದನೆ: ರಸ್ತೆಗೆ ವಿಶೇಷ ವಿನ್ಯಾಸ, ಜಗಮಗಿಸುವ ಲೇಸರ್ ಶೋ, ಡ್ರೋನ್ ಶೋಗೆ ಜನ ಫಿದಾ, ಕಲಬುರಗಿಯಲ್ಲಿ ರಂಗೇರಿದ ಕಲ್ಯಾಣ ಕರ್ನಾಟಕ ಉತ್ಸವ

ಸ್ಟ್ರೀಟ್‌ ಫೆಸ್ಟಿವಲ್‌ಗೆ ಭಾರೀ ಸ್ಪಂದನೆ

ಬಣ್ಣ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸಿದ ಆವರಣದಲ್ಲಿ ಯುವಕ-ಯುವತಿಯರು, ಮಕ್ಕಳು, ಮಹಿಳೆ ಯರು ಸೇರಿ ಸಾವಿರಾರು ಜನರು ಸೇರಿ ಸಂಭ್ರಮಿಸಿದರು. ಜಗಮಗಿಸುವ ದೀಪಾಲಂಕಾರ, ಅಲಂಕೃತ ಪ್ರವೇಶದ್ವಾರ ಹಾಗೂ ವಿಭಿನ್ನ ವಿನ್ಯಾಸಗಳ ನಡುವೆ ಯುವಕ-ಯುವತಿಯರು ಸ್ಟ್ರೀಟ್ ಫೆಸ್ಟಿವಲ್‌ನ ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಂಡರು. ಮೊಬೈಲ್‌ಗಳಲ್ಲಿ ಕ್ಷಣಗಳನ್ನು ಸೆರೆ ಹಿಡಿಯುತ್ತಾ, ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತಾ ಯುವ ಸಮೂಹ ಉತ್ಸವದ ವಾತಾವರಣಕ್ಕೆ ಮತ್ತಷ್ಟು ರಂಗು ತಂದಿತು.

IT Park at Kalaburagi: ಸ್ಪೋರ್ಟ್ಸ್ ಸಿಟಿ, ಕೆಆರ್‌ಐಎ, ಕೋಟಿ ವೃಕ್ಷ ಅಭಿಯಾನ ಸೇರಿ ಹಲವು ಯೋಜನೆ: ಕಲಬುರಗಿಗೆ ಐಟಿ ಪಾರ್ಕ್, 50 ಸಾವಿರ ನಿವೇಶನ

ಕಲಬುರಗಿಗೆ ಐಟಿ ಪಾರ್ಕ್, 50 ಸಾವಿರ ನಿವೇಶನ

ಕಲಬುರಗಿಯಲ್ಲಿ ಈಗಾಗಲೇ 120ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಸ್ಥಾಪನೆಯಾಗಿದ್ದು, 2030ರ ವೇಳೆಗೆ 500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಸ್ಥಾಪನೆಯ ಗುರಿ ಹೊಂದಲಾಗಿದೆ. ಯುವ ಉದ್ಯಮಿ ಗಳು ಹಾಗೂ ನವೋದ್ಯಮಿಗಳಿಗೆ ಉತ್ತೇಜನ ನೀಡಲು ಕೆಆರ್‌ಐಎ (Kalaburagi Research, Innovation and Youth Accelerator) ಸ್ಥಾಪಿಸಲಾಗುವುದು ಎಂದರು.

79th Kalyana Karnataka Utsava Day: 2000 ಕೋಟಿ ರು.ನ 940 ಕಾಮಗಾರಿಗಳಿಗೆ ಮುಖ್ಯಮಂತ್ರಿ ಶಿವಕುಮಾರ್ ಚಾಲನೆ, ʼಕಲ್ಯಾಣಕ್ಕೆʼ ದಶ ಯೋಜನೆ

ʼಕಲ್ಯಾಣಕ್ಕೆʼ ದಶ ಯೋಜನೆ

ಸಿಎಂ ಡಿ.ಕೆ ಶಿವಕುಮಾರ್ ಅವರು 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಗುರುವಾರ ಮಾಲಾರ್ಪಣೆ ಮಾಡಿದರು. ಸಚಿವರಾದ ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ ವೈ ಪಾಟೀಲ್, ಬಿ.ಆರ್ ಪಾಟೀಲ್, ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಜಗದೇವ ಗುತ್ತೇದಾರ್, ಪ್ರವೀಣ್ ಪಾಟೀಲ್ ಹರವಾಳ, ಹೋರಾಟಗಾರ ಲಕ್ಷ್ಮಣ ದಸ್ತಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಪೇದೆ ರಾಜಶೇಖರ್ ವಿರುದ್ಧ ಎರಡು ಪ್ರಕರಣ: ಗೃಹಿಣಿ ಮನೆಗೆ ಬೆಂಕಿ, ಪಿಎಸ್‌ಐ ಕಾರಿಗೂ ಬೆಂಕಿ ಹಚ್ಚಿದ ಆರೋಪ

ಪೇದೆ ರಾಜಶೇಖರ್ ವಿರುದ್ಧ ಎರಡು ಪ್ರಕರಣ ದಾಖಲು

ರಾಜಶೇಖರ್ ಈ ಹಿಂದೆ ಗೃಹಿಣಿಯ ಮನೆಗೆ ತೆರಳಿ ಕಿರುಕುಳ ನೀಡಿದ್ದಾನೆ ಎಂಬ ದೂರು ಠಾಣೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಶಿಸ್ತು ಕ್ರಮ ಕೈಗೊಂಡು ಕೆಲ ದಿನಗಳ ಹಿಂದೆ ಆತನನ್ನು ಚಿಂಚೋಳಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ಗೃಹಿಣಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಆಕ್ರೋಶಗೊಂಡು ಪಿಎಸ್‌ಐ ಅವರ ಕಾರಿಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗುತ್ತಿದೆ.

ಜೇವರ್ಗಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ; ನೆಲಕ್ಕೆ ಕೆಡವಿ ಹತ್ತಕ್ಕೂ ಹೆಚ್ಚು ಮಂದಿಯಿಂದ ಹಲ್ಲೆ!

ಜೇವರ್ಗಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಯೂರ ಗ್ರಾಮದಲ್ಲಿ ಘಟನೆ ನಡೆದಿದೆ. ಯುವಕನೊಬ್ಬನ ಮೇಲೆ ಹತ್ತಕ್ಕೂ ಹೆಚ್ಚು ಮಂದಿ ಏಕಾಏಕಿ ದಾಳಿ ಮಾಡಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಯುವಕನನ್ನು ನೆಲಕ್ಕೆ ಕೆಡವಿ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Bike Accident: ಗಣೇಶ ಮೂರ್ತಿ ನೋಡಲು ಹೋಗಿ ಮಸಣ ಸೇರಿದ ಯುವಕ

ಗಣೇಶ ಮೂರ್ತಿ ನೋಡಲು ಹೋಗಿ ಮಸಣ ಸೇರಿದ ಯುವಕ

ಗಣೇಶ ಮೂರ್ತಿ ವೀಕ್ಷಿಸಲು ತೆರಳಿದ್ದ ಯುವಕರು ಬೈಕ್‌ಗಳಲ್ಲಿ ರೇಸಿಂಗ್ ಕಟ್ಟಿಕೊಂಡು ವೇಗವಾಗಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ರೇಸ್‌ನಲ್ಲಿ ಭಾಗಿಯಾಗಿದ್ದ ಯುವಕರ ಬೈಕ್‌ಗಳೇ ಅಪಘಾತಕ್ಕೀಡಾಗಿದ್ದು, ಡಿಕ್ಕಿಯ ರಭಸಕ್ಕೆ ಪ್ರಶಾಂತ ಹಾಗೂ ಲಿಂಗರಾಜ್ ಅವರ ತಲೆಗೆ ಗಂಭೀರ ಗಾಯಗಳಾಗಿ ಧಾರಾಕಾರ ರಕ್ತಸ್ರಾವವಾಗಿದೆ.

Kalyana Karnataka Festival: ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಲು ಸಚಿವ ಪ್ರಿಯಾಂಕ್ ಖರ್ಗೆ ಕರೆ

79ನೇ ಕಲ್ಯಾಣ ಕರ್ನಾಟಕ ಉತ್ಸವ–2026

ಸೆಪ್ಟೆಂಬರ್ 16 ಮತ್ತು 17 ರಂದು ಕಲಬುರಗಿ ನಗರದಲ್ಲಿ ಆಯೋಜಿಸಲಾಗಿರುವ ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಯುವ ಜನರು, ವಿದ್ಯಾರ್ಥಿಗಳು ಹಾಗೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವ ವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಕರೆ ನೀಡಿದ್ದಾರೆ.

79th Kalyana Karnataka Utsava celebration: ಸೆ.16, 17 ರಂದು 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಕಲಬುರಗಿಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ, ಬೀದಿ ಉತ್ಸವ

ಸೆ.16, 17 ರಂದು 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ

ಅಪ್ಪನ ಕೆರೆಯಲ್ಲಿ ಸಂಜೆ 7ರಿಂದ ಭೈರವ್ ಮತ್ತು ತಂಡದಿಂದ ಇಂಡೋ-ಫ್ಯೂಷನ್ ವಾದ್ಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ 8.30ಕ್ಕೆ ಮುಖ್ಯಮಂತ್ರಿ ಅವರಿಂದ ಕೆರೆ ಅಭಿವೃದ್ಧಿ ಕಾಮಗಾರಿ ಗಳ ಉದ್ಘಾಟನೆ ನಡೆಯಲಿದ್ದು, ರಾತ್ರಿ 9ರಿಂದ ಧ್ವನಿ ಮತ್ತು ಬೆಳಕಿನ ಪ್ರದರ್ಶನದ ಜತೆಗೆ ಡ್ರೋನ್ ಪ್ರದರ್ಶನವೂ ನಡೆಯಲಿದೆ.

ಕಲಬುರಗಿಯಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ವಿವಾಹಿತ ಮಹಿಳೆ-ಯುವಕ ಆತ್ಮಹತ್ಯೆ!

ಪ್ರೀತಿಗೆ ಮನೆಯಲ್ಲಿ ವಿರೋಧ; ವಿವಾಹಿತ ಮಹಿಳೆ-ಯುವಕ ಆತ್ಮಹತ್ಯೆ!

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮ ಹೊರವಲಯದಲ್ಲಿ ಘಟನೆ ನಡೆದಿದೆ. ಮೃತರಿಬ್ಬರು ಪ್ರೇಮಿಗಳೆಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ, ಸಿಪಿಐ ಮತ್ತು ಪಿಎಸ್‌ಐ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಕೆಶಿ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿ‌ದ ಕಲಬುರಗಿ ಮಿನಿ ವಿಧಾನಸೌಧ, ಜಗತ್ ವೃತ್ತ

ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿ‌ದ ಕಲಬುರಗಿ ಮಿನಿ ವಿಧಾನಸೌಧ

Kalaburagi News: ಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದ ರಾಜ್ಯ ಸರ್ಕಾರ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಮಿನಿ ವಿಧಾನ ಸೌಧ ಕಟ್ಟಡ ಮತ್ತು ಜಗತ್ ವೃತ್ತಗಳು‌ ಗುರುವಾರ ಸಂಜೆ ಹಳದಿ, ಕೆಂಪು ಬಣ್ಣದ ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿದವು.

CID Raid: ಕೆಪಿಎಸ್‌ಸಿ ಪಶುವೈದ್ಯಕೀಯ ನೇಮಕಾತಿ ಅಕ್ರಮ: ಕಲಬುರಗಿಯಲ್ಲಿ ಅಭ್ಯರ್ಥಿ ಮನೆ ಮೇಲೆ ಸಿಐಡಿ ದಾಳಿ

ಕಲಬುರಗಿಯಲ್ಲಿ ಅಭ್ಯರ್ಥಿ ಮನೆ ಮೇಲೆ ಸಿಐಡಿ ದಾಳಿ

ಮಮಿತಾ ಅವರು ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಮೂಲಕ ಡೀಲ್ ಮಾಡಿ ಕೊಂಡು ನೇಮಕಾತಿ ಪಡೆದಿದ್ದಾರೆ ಎಂಬ ಆರೋಪ ಪ್ರಕರಣದ ತನಿಖೆಯಲ್ಲಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಮಮಿತಾ ಅವರ ಮನೆ ಸೇರಿದಂತೆ ಸಂಬಂಧಿತ ದಾಖಲೆಗಳು ಹಾಗೂ ಇತರ ಮಾಹಿತಿಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ತೊಗರಿ, ಉದ್ದು, ಹೆಸರು, ಕಡಲೆಯಿಂದ ಆರು ಬಗೆಯ ಎನರ್ಜಿ ಬಾರ್‌ ಅಭಿವೃದ್ಧಿ: ಕಲ್ಯಾಣ ಕರ್ನಾಟಕದ ಬೇಳೆಕಾಳಿಗೆ ಹೊಸ ‘ಬ್ರ್ಯಾಂಡ್’ ಕನಸು

ಕಲ್ಯಾಣ ಕರ್ನಾಟಕದ ಬೇಳೆಕಾಳಿಗೆ ಹೊಸ ‘ಬ್ರ್ಯಾಂಡ್’ ಕನಸು

ಕಲ್ಯಾಣ ಕರ್ನಾಟಕ ಜೈವಿಕ ಆರ್ಥಿಕತೆ ಮಿಷನ್‌ನಡಿ ಬೆಂಗಳೂರಿನ ಜೈವಿಕ ನಾವೀನ್ಯತಾ ಕೇಂದ್ರ (ಬಿಬಿಸಿ), ಕೃಷಿ ಇಲಾಖೆಯ ಸಹಯೋಗದಲ್ಲಿ ಈ ಪ್ರಯತ್ನ ಕೈಗೊಂಡಿದೆ. ‘ಕಲಬುರಗಿ ಬೇಳೆಕಾಳುಗಳ ಉಪಕ್ರಮ’ದಡಿ ಆರು ಬಗೆಯ ಶಕ್ತಿವರ್ಧಕ ತಿಂಡಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ವಿವಿಧ ಬೇಳೆ ಕಾಳುಗಳ ಸಂಯೋಜನೆಯ ಹಾಗೂ ಹೆಚ್ಚಿನ ಪ್ರೋಟೀನ್ ಹೊಂದಿರುವ ವಿಶೇಷ ಮಾದರಿಯೂ ಇದರಲ್ಲಿ ಸೇರಿದೆ.

Kalaburagi as state's second capital: ಕಲ್ಯಾಣ ಕರ್ನಾಟಕಕ್ಕೆ ಪ್ರಾಶಸ್ತ್ಯ ನೀಡಲು ಆಗ್ರಹ: ಕಲಬುರಗಿ ಆಗಲಿ ರಾಜ್ಯದ ಎರಡನೇ ರಾಜಧಾನಿ

ಕಲಬುರಗಿ ಆಗಲಿ ರಾಜ್ಯದ ಎರಡನೇ ರಾಜಧಾನಿ

ಬೆಂಗಳೂರು ಕೇಂದ್ರಿತ ಅಭಿವೃದ್ಧಿಗೆ ಪರ್ಯಾಯವಾಗಿ ರಾಜ್ಯದ ವಿವಿಧ ನಗರಗಳಲ್ಲಿ ಆರ್ಥಿಕ, ತಂತ್ರಜ್ಞಾನ ಹಾಗೂ ಕೈಗಾರಿಕಾ ಚಟವಟಿಕೆಗಳನ್ನು ವಿಕೇಂದ್ರೀಕರಿಸುವ ಚಿಂತನೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕಲಬುರಗಿಗೆ ಕೇವಲ ಬಿಯಾಂಡ್ ಬೆಂಗಳೂರು ಕ್ಲಸ್ಟರ್‌ನ ಸ್ಥಾನಮಾನ ನೀಡುವು ದಕ್ಕಿಂತ, ಆಡಳಿತಾತ್ಮಕವಾಗಿ ಹೆಚ್ಚಿನ ಮಹತ್ವ ನೀಡಬೇಕು ಎನ್ನಲಾಗಿದೆ.

Sandalwood Actor Ramesh Arvind: ಪ್ರೀತಿ–ಸಲುಗೆಯಿಂದ ಮಕ್ಕಳ ಪ್ರತಿಭೆ ಹೊರ ತನ್ನಿ: ಪ್ರೇಕ್ಷಕರ ನೋಟದಲ್ಲಿ ಪ್ರೀತಿ ಇರಲಿ ನಟ ಅರವಿಂದ ರಮೇಶ್

ಪ್ರೀತಿ–ಸಲುಗೆಯಿಂದ ಮಕ್ಕಳ ಪ್ರತಿಭೆ ಹೊರತನ್ನಿ: ನಟ ಅರವಿಂದ ರಮೇಶ್

ಮಕ್ಕಳನ್ನು ಬೆದರಿಸಿ, ಹೆದರಿಸಿ ಕಲಿಸುವ ಬದಲು ಪ್ರೀತಿ ಹಾಗೂ ಸಲುಗೆಯಿಂದ ಅವರಲ್ಲಿನ ಪ್ರತಿಭೆ ಯನ್ನು ಗುರುತಿಸಿ ಹೊರತರುವ ಪ್ರಯತ್ನ ಮಾಡಬೇಕು. ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳನ್ನು ಸುಂದರ ಮೂರ್ತಿಯಂತೆ ರೂಪಿಸಬಹುದು. ಶಿಕ್ಷಕರ ನಿರಂತರ ಬೆಂಬಲ ದೊರೆತರೆ ಮಕ್ಕಳು ಇತಿಹಾಸ ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ

Chief Jail Superintendent Suspend: ‘ಕೈದಿಗಳ ಬಿಂದಾಸ್ ಲೈಫ್’ ವಿಡಿಯೊ ಪ್ರಕರಣ: ಕರ್ತವ್ಯಲೋಪ ಮೇಲ್ನೋಟಕ್ಕೆ ಸಾಬೀತು: ಜೈಲು ಮುಖ್ಯ ಅಧೀಕ್ಷಕಿ ಅನಿತಾ ಆರ್. ಅಮಾನತು

ಜೈಲು ಮುಖ್ಯ ಅಧೀಕ್ಷಕಿ ಅನಿತಾ ಆರ್. ಅಮಾನತು

ಅಮಾನತು ಅವಧಿಯಲ್ಲಿ ಅನಿತಾ ಆರ್. ಅವರ ಕೇಂದ್ರ ಸ್ಥಾನವನ್ನು ವಿಜಯಪುರದ ನೂತನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಸದ್ಯ ಅವರು ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆ ಯಲ್ಲಿ ಮುಖ್ಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸರ್ಕಾರದ ಮುಂದಿನ ಆದೇಶದವರೆಗೆ ಆ ಕರ್ತವ್ಯದಿಂದ ಬಿಡುಗಡೆಗೊಂಡು ವಿಜಯಪುರದ ನೂತನ ಕೇಂದ್ರ ಕಾರಾಗೃಹ ದಲ್ಲಿ ಅಮಾನತು ಅವಧಿಯ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಪಿಎಸ್‌ಐ ಸಂಗೀತಾ ಜತೆ ಫೋಟೋ ವೈರಲ್: ರೌಡಿ ಶೀಟರ್‌ಗೆ ಠಾಣೆಯಲ್ಲೇ ಸನ್ಮಾನ!

ರೌಡಿ ಶೀಟರ್‌ಗೆ ಠಾಣೆಯಲ್ಲೇ ಸನ್ಮಾನ!

ದೇವಲಗಾಣಗಾಪುರ ಠಾಣೆಯ ಪಿಎಸ್‌ಐ ಸಂಗೀತಾ ಅವರು ರೌಡಿ ಶೀಟರ್ ಮಾರುತಿ ಜತೆ ಫೋಟೋ ತೆಗೆಸಿಕೊಂಡಿದ್ದು, ಆತನನ್ನು ಸನ್ಮಾನಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲೂ ಮಾರುತಿ ಭಾಗಿಯಾಗಿರು ವುದು ಚರ್ಚೆಗೆ ಕಾರಣವಾಗಿದೆ.

Parashurama caught in Lokayukta trap: ಲೋಕಾಯುಕ್ತ ಬಲೆಗೆ ಬಿದ್ದ ಪರಶುರಾಮ; ಪರಾರಿಯಾಗಿದ್ದ ವೀರೇಶನ ವಿರುದ್ಧವೂ ಇಲಾಖಾ ಕ್ರಮ

ಲಂಚ ಪ್ರಕರಣ: ಇಬ್ಬರು ಪೊಲೀಸ್ ಪೇದೆ ಅಮಾನತು

ಸೆ.3ರಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ರೂಢಿಗತ ಅಪರಾಧಿ ಕಾರ್ತಿಕ ಎಂಬಾತನಿಗೆ ಗಡಿಪಾರು ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿತ್ತು. ಒಂದು ಲಕ್ಷ ರೂ. ನೀಡುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದ್ದು, ಈ ಪೈಕಿ ಈಗಾಗಲೇ ₹50 ಸಾವಿರ ಪಡೆದಿದ್ದರು. ಬಳಿಕ ಮತ್ತೆ ₹50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

Priyank Kharge: ಕೆಪಿಎಸ್‌ಸಿ ತನಿಖೆ ಹಳ್ಳ ಹಿಡಿಯಲು ಬಿಡಲ್ಲ: ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ ತನಿಖೆ ಹಳ್ಳ ಹಿಡಿಯಲು ಬಿಡಲ್ಲ: ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ನಮ್ಮ ಪೊಲೀಸ್ ಇಲಾಖೆಯವರೇ ಐಎಎಸ್ ಅಧಿಕಾರಿಯನ್ನು ಬಂಧಿಸಿರುವ ಉದಾಹರಣೆ ಇದೆ. ಕಳೆದ ಹಲವು ವರ್ಷಗಳಿಂದ ಕೆಪಿಎಸ್‌ಸಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪಗಳಿವೆ. ಈ ಬಾರಿ ಸರ್ಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಹಿಂದಿನ ಅಕ್ರಮದ ಆರೋಪಿಗಳ ಮೇಲೂ ನಿಗಾ ಇಡಲಾಗಿದೆ ಎಂದರು.

ಆದೇಶಗಳ ನಡುವೆ ಅತಂತ್ರರಾದ 'ಭಾವಿ ಶಿಕ್ಷಕರು'

ಆದೇಶಗಳ ನಡುವೆ ಅತಂತ್ರರಾದ 'ಭಾವಿ ಶಿಕ್ಷಕರು'

ಕಲ್ಯಾಣ ಕರ್ನಾಟಕದ 6967 ಹಾಗೂ ಬ್ಯಾಕ್ ಲಾಗ್/ನಾನ್-ಎಚ್‌ಕೆ 8033 ಹುದ್ದೆಗಳಿಗೆ ಸೆ.15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಪರೀಕ್ಷಾ ಸಿದ್ಧತೆ ಬದಿಗಿಟ್ಟು ದಾಖಲೆಗಳ ತಿದ್ದುಪಡಿ, ಆರ್‌ಡಿ ನಂಬರ್ ಗೊಂದಲ ಪರಿಹಾರಕ್ಕೆ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ. ಪರೀಕ್ಷೆಗೆ ಓದಬೇಕೋ, ಆದೇಶ ಬೆನ್ನತ್ತ ಬೇಕೋ? ಎಂಬ ಪ್ರಶ್ನೆ ಅಭ್ಯರ್ಥಿಗಳನ್ನು ಕಾಡುತ್ತಿದೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತವರು ಜಿಲ್ಲೆ ಕಲಬುರಗಿಗೆ ರಾಜ್ಯ ಸರ್ಕಾರದಿಂದ ಬಂಪರ್‌ ಕೊಡುಗೆ; 105 ಕೋಟಿ ರುಪಾಯಿ ಮೊತ್ತದ ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ

ಕಲಬುರಗಿಯ 2 ಮಹತ್ವದ ನೀರಾವರಿ ಯೋಜನೆಗಳಿಗೆ ಸಂಪುಟ ಅನುಮೋದನೆ

Priyank Kharge: ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಮಹತ್ವದ ನೀರಾವರಿ ಯೋಜನೆಗಳಿಗೆ ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ರಿಲೀಫ್: ಅಮಾನತು ಆದೇಶಕ್ಕೆ ತಡೆ

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರ ಅಮಾನತು ರದ್ದು

RSS Route March: ಕಳೆದ ವರ್ಷ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅಮಾನತುಗೊಂಡ ಇಬ್ಬರು ಶಿಕ್ಷಕರಿಗೆ ರಿಲೀಫ್‌ ಸಿಕ್ಕಿದೆ. ರಾಜ್ಯದ ಸರ್ಕಾರದ ಅಮಾನತು ಆದೇಶಕ್ಕೆ ಕಲಬುರಗಿ ಕೆಎಟಿ ತಡೆ ನೀಡಿದೆ. ಆ ಮೂಲಕ ಯಾದಗಿರಿ ಜಿಲ್ಲೆಯ ಇಬ್ಬರು ಶಿಕ್ಷಕರಾದ ಗುರುರಾಜ್ ಜೋಶಿ ಮತ್ತು ಅಣ್ಣಾ ಸಾಹೇಬ್ ದೇಶಮುಖ್ ಅವರಿಗೆ ರಿಲೀಫ್‌ ಸಿಕ್ಕಿದೆ.

Loading...