ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bannerghatta: ಬನ್ನೇರುಘಟ್ಟ ಸಫಾರಿಯಲ್ಲಿ ಎಗರಿ ಬಾಲಕನ ಕೈಗೆ ಪರಚಿದ ಚಿರತೆ!

Leopard Attack: ಪೋಷಕರ ಜೊತೆಗೆ ಬಾಲಕ ಸುಹಾಸ್ ಸಫಾರಿಗೆ ತೆರಳಿದ್ದಾಗ ಬಾಲಕನ ಕೈಗೆ ಚಿರತೆ ಪರಚಿದೆ. ಸಫಾರಿ ಜೀಪನ್ನು ಬೆನ್ನಟ್ಟಿ ಬಂದು ಹಾರಿ ಬಾಲಕನ ಕೈಗೆ ಚಿರತೆ ಪರಚಿದೆ. ಮಾಂಸ ಕಿತ್ತು ಬರುವಂತೆ ಪರಚಿದ್ದು, ಸದ್ಯ ಬಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬನ್ನೇರುಘಟ್ಟ ಸಫಾರಿಯಲ್ಲಿ ಎಗರಿ ಬಾಲಕನ ಕೈಗೆ ಪರಚಿದ ಚಿರತೆ!

ಹರೀಶ್‌ ಕೇರ ಹರೀಶ್‌ ಕೇರ Aug 16, 2025 8:08 AM

ಬೆಂಗಳೂರು : ಸಫಾರಿ ವೇಳೆ 13 ವರ್ಷದ ಬಾಲಕನ ಕೈಗೆ ಚಿರತೆ (leopard) ಪರಚಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta national park) ನಿನ್ನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿ (Bannerghatta safari) ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡ ಬಾಲಕ ಬೊಮ್ಮಸಂದ್ರ ನಿವಾಸಿ ಸುಹಾಸ್ ಎಂದು ತಿಳಿದುಬಂದಿದೆ.

ಪೋಷಕರ ಜೊತೆಗೆ ಬಾಲಕ ಸುಹಾಸ್ ಸಫಾರಿಗೆ ತೆರಳಿದ್ದಾಗ ಬಾಲಕನ ಕೈಗೆ ಚಿರತೆ ಪರಚಿದೆ. ಸಫಾರಿ ಜೀಪನ್ನು ಬೆನ್ನಟ್ಟಿ ಬಂದು ಹಾರಿ ಬಾಲಕನ ಕೈಗೆ ಚಿರತೆ ಪರಚಿದೆ. ಮಾಂಸ ಕಿತ್ತು ಬರುವಂತೆ ಪರಚಿದ್ದು, ಸದ್ಯ ಬಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಲಿ, ಸಿಂಹಗಳು ಇರುವ ಆವರಣದಲ್ಲಿ ಅರಣ್ಯ ಇಲಾಖೆಯ ಸುರಕ್ಷಿತ ವಾಹನಗಳಲ್ಲಿ ಸಫಾರಿ ಹೋಗುವವರನ್ನು ಕರೆದೊಯ್ಯಲಾಗುತ್ತದೆ. ಆದರೆ ಈ ಬಾಲಕನ ಮೇಲೆ ಚಿರತೆ ಅಟ್ಯಾಕ್‌ ಮಾಡಲು ಹೇಗೆ ಸಾಧ್ಯವಾಯಿತು ಎಂಬುದು ಈಗ ಪ್ರಶ್ನೆಯಾಗಿ ಮೂಡಿದ್ದು, ಸಫಾರಿಯ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ.

ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಚಿರತೆ

ತಿರುಪತಿ: ಆಂಧ್ರಪ್ರದೇಶದ ತಿರುಪತಿ ಹಾಗೂ ಅದರ ಸುತ್ತಮುತ್ತ ಇತ್ತೀಚೆಗೆ ಚಿರತೆ ಕಾಣಿಸಿಕೊಳ್ಳುತ್ತಿರುವ ಘಟನೆಗಳು, ಸ್ಥಳೀಯ ನಿವಾಸಿಗಳು ಮತ್ತು ಭಕ್ತರಲ್ಲಿ ಆತಂಕವನ್ನು ಹೆಚ್ಚಿಸಿವೆ. ಇದೀಗ ವೇಗವಾಗಿ ಸಾಗುತ್ತಿದ್ದ ಬೈಕ್‍ಗೆ ಚಿರತೆ ಡಿಕ್ಕಿ ಹೊಡೆದಿರುವ ಘಟನೆ ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ಅಲಿಪಿರಿಯ ಜೂ ಪಾರ್ಕ್ ರಸ್ತೆಯಲ್ಲಿ ಸಂಭವಿಸಿದೆ. ಈ ಘಟನೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ವೇಗವಾಗಿ ಸಾಗುತ್ತಿದ್ದ ಬೈಕ್‌ ಸವಾರನತ್ತ ಏಕಾಏಕಿ ಚಿರತೆಯೊಂದು ಜಿಗಿದಿದೆ. ಅದೃಷ್ಟವಶಾತ್ ಬೈಕ್ ಸವಾರ ಅಪಾಯದಿಂದ ಪಾರಾಗಿದ್ದರೂ, ಈ ಘಟನೆ ಭಕ್ತರಲ್ಲಿ ಕಳವಳವನ್ನುಂಟುಮಾಡಿದೆ. ತಿರುಮಲ ಹತ್ತುವ ಮಾರ್ಗವಾದ ಈ ಪ್ರದೇಶದ ಸುರಕ್ಷತೆಯ ಬಗ್ಗೆ ಇದೀಗ ಗಂಭೀರ ಪ್ರಶ್ನೆಗಳು ಎದ್ದಿವೆ. ಇದೇ ವೇಳೆ, ಪ್ರಮುಖ ಶಿಕ್ಷಣ ಸಂಸ್ಥೆಗಳ ಬಳಿ ಹಾಗೂ ಸಮೀಪದ ಕಾಡು ಪ್ರದೇಶಗಳಲ್ಲಿ ಚಿರತೆಗಳ ಚಲವಲನ ಕಂಡುಬಂದಿರುವುದು ಸಿಸಿಟಿವಿ ಮೂಲಕ ದೃಢಪಡಲಾಗಿದೆ. ಇದರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಆಂಧ್ರಪ್ರದೇಶದ ತಿರುಪತಿ ಮತ್ತು ಸುತ್ತಮುತ್ತ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿರುವುದು ನಿವಾಸಿಗಳು ಮತ್ತು ಭಕ್ತರಲ್ಲಿ ಕಳವಳವನ್ನು ಹೆಚ್ಚಿಸಿದೆ. ಬೈಕ್ ಸವಾರನ ಮೇಲೆ ದಾಳಿ ಮತ್ತು ಪ್ರಮುಖ ಶಿಕ್ಷಣ ಸಂಸ್ಥೆಗಳ ಬಳಿ ಚಿರತೆ ಪತ್ತೆಯಾದ ನಂತರ, ಅಲಿಪಿರಿಯ ಮೃಗಾಲಯ ಪಾರ್ಕ್ ರಸ್ತೆಯಲ್ಲಿ ಈ ಘಟನೆ ನಡೆದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಭಯಾನಕ ಘಟನೆಯನ್ನು ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮ್ ಸೆರೆಹಿಡಿದಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Leopard Attack: ಚಿರತೆ ದಾಳಿಯಿಂದ ಸಹೋದರ ಸಾವು; ಮೃತ ದೇಹಕ್ಕೆ ರಾಖಿ ಕಟ್ಟಿದ ಸಹೋದರಿ, ಓದಿದವರ ಕರುಳು ಚುರ್‌ ಎನ್ನುತ್ತೆ ಈ ಸ್ಟೋರಿ