Madduru unrest: ಮದ್ದೂರು ಗಣೇಶ ವಿಸರ್ಜನೆ ಗಲಭೆ: ಎಸ್‌ಐ ಶಿವಕುಮಾರ್ ಅಮಾನತು, ಎಸ್‌ಪಿ ವರ್ಗಾವಣೆ
Stone Pelting: ಮದ್ದೂರು ಟೌನ್ ಇನ್‌ಸ್ಪೆಕ್ಟರ್ ಶಿವಕುಮಾರ್ ಸಸ್ಪೆಂಡ್ ಮಾಡಲಾಗಿದೆ. ಘಟನೆ ನಡೆದಾಗ ಸ್ಥಳದಲ್ಲಿ ಇಲ್ಲದ ಕಾರಣಕ್ಕೆ ಇನ್‌ಸ್ಪೆಕ್ಟರ್ ಸಸ್ಪೆಂಡ್ ಮಾಡಲಾಗಿದೆೆ ಎಂದು ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಜೊತೆಗೆ ಅಡಿಷನಲ್ ಎಸ್ಪಿ ತಿಮ್ಮಯ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ.

-

ಮಂಡ್ಯ: ಜಿಲ್ಲೆಯ (Mandya News) ಮದ್ದೂರಲ್ಲಿ (Madduru) ಗಣೇಶೋತ್ಸವ ವಿಸರ್ಜನಾ (Ganesha visarjan) ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ (Stone Pelting) ನಡೆದು, ಗಲಾಟೆಯಾಗಿತ್ತು. ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಮದ್ದೂರು ಪೋಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ತಲೆದಂಡವಾಗಿದೆ. ಅವರನ್ನು ಅಮಾನತುಗೊಳಿಸಿ (Suspend) ಸರ್ಕಾರ ಆದೇಶಿಸಿದೆ. ಜೊತೆಗೆ, ಅಡಿಷನಲ್ ಎಸ್ಪಿ ತಿಮ್ಮಯ್ಯ (Timmayya) ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆ ಮಾಡಿದ ಗೃಹ ಇಲಾಖೆ ಇನ್ನೂ ಯಾವುದೇ ಸ್ಥಳ ಸೂಚಿಸಿಲ್ಲ.
ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಮದ್ದೂರು ಗಲಭೆ ಪ್ರಕರಣದಲ್ಲಿ ಎಎಸ್ಪಿ ವರ್ಗಾವಣೆ ವಿಚಾರವಾಗಿ ಮಾತನಾಡಿ, ಅವರ ಅವಧಿ ಮುಗಿದಿತ್ತು. ಡಿಸೆಂಬರ್‌ವರೆಗೂ ಮುಂದುವರೆಸಲು ಹೇಳಿದ್ದೆ. ಎಎಸ್ಪಿ ವರ್ಗಾವಣೆಗೂ ಮದ್ದೂರು ಪ್ರಕರಣಕ್ಕೂ ಸಂಬಂಧ ಇಲ್ಲ. ಸಾಮಾನ್ಯ ವರ್ಗಾವಣೆಯಂತೆ ವರ್ಗವಾಗಿದೆ. ತಿಮ್ಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ. ಸರ್ಕಾರದಲ್ಲಿ ವರ್ಗಾವಣೆ ಪ್ರಕ್ರಿಯೆ ಸಹಜ. ನೂರಕ್ಕೆ ಲಕ್ಷ ಪರ್ಸೆಂಟ್ ಮದ್ದೂರು ಗಲಾಟೆಗೂ ವರ್ಗಾವಣೆಗೂ ಸಂಬಂಧ ಇಲ್ಲ ಎಂದರು.
ಈ ಘಟನೆಗೆ ಪೊಲೀಸ್ ವೈಫಲ್ಯ ಕಾರಣ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇನ್ನೂ ವರದಿ ಬಂದಿಲ್ಲ. ವರದಿ ಬಂದ ನಂತರ ಆ ಬಗ್ಗೆ ಮಾಹಿತಿ ನೀಡುವೆ. ಘಟನೆ ಸಂಬಂಧ ಮತ್ತೋರ್ವ ಪೊಲೀಸ್ ಅಧಿಕಾರಿ ತಲೆದಂಡವಾಗಿದೆ. ಮದ್ದೂರು ಟೌನ್ ಇನ್‌ಸ್ಪೆಕ್ಟರ್ ಶಿವಕುಮಾರ್ ಸಸ್ಪೆಂಡ್ ಮಾಡಲಾಗಿದೆ. ಘಟನೆ ನಡೆದಾಗ ಸ್ಥಳದಲ್ಲಿ ಇಲ್ಲದ ಕಾರಣಕ್ಕೆ ಇನ್‌ಸ್ಪೆಕ್ಟರ್ ಸಸ್ಪೆಂಡ್ ಮಾಡಲಾಗಿದೆೆ. ಶಾಂತಿ ಸಭೆಯಲ್ಲೇ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಹೆಚ್ಚಿನ ಗಮನಹರಿಸಿ ಬಂದೋಬಸ್ತ್ ಮಾಡುವಂತೆ. ಇನ್ಮುಂದೆ ಇಂತಹ ಯಾವುದೇ ಇಂತಹ ಘಟನೆ ನಡೆಯಬಾರದು. ನಡೆದರೆ ನಿಮ್ಮನ್ನೇ ನೇರ ಹೊಣೆ ಮಾಡುವುದಾಗಿ ವಾರ್ನಿಂಗ್. ಡಿಸಿ, ಎಸ್ಪಿಗೆ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.
ಕಲ್ಲು ತೂರಾಟ ನಡೆಸಿದ 22 ಜನರನ್ನು ಬಂಧಿಸಲಾಗಿದೆ. ಘಟನೆಗೆ ಕಾರಣ ಏನು? ಯಾರು ಕಾರಣ ಅನ್ನೋ ಬಗ್ಗೆ ಇನ್ನು ವರದಿ ಬಂದಿಲ್ಲ. ಮೊನ್ನೆ ಬಿಜೆಪಿ ನಾಯಕರು ಬಂದಿದ್ದರು, ನಿನ್ನೆ ಬಿಜೆಪಿಯ ಪರ್ಯಾಯ ನಾಯಕರು ಬಂದಿದ್ರು. ಅವರ ಹೋರಾಟ ಯಶಸ್ವಿಯಾಗಿದೆ ಎಂದು ವ್ಯಂಗ್ಯವಾಡಿದರು.
ಘಟನಾ ಸ್ಥಳಕ್ಕೆ ಗೃಹ ಸಚಿವರು ಬಾರದ ವಿಚಾರ ಮಾತನಾಡಿ ಗೃಹ ಸಚಿವರು ನನ್ನಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಾನು ಅವರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ನಿನ್ನೆ ಕ್ಯಾಬಿನೆಟ್‌ನಲ್ಲೂ ಚರ್ಚೆ ಆಗಿ, ಘಟನೆಯ ಮಾಹಿತಿ ವಿವರಿಸಿದ್ದೇನೆ. ನಾವು, ಜಿಲ್ಲಾಡಳಿತ ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ. ಗೃಹ ಸಚಿವರು ಬರುವ ಅವಶ್ಯಕತೆಯಿಲ್ಲ. ನಾನೇ ಬರೋದು ಬೇಡ ಅಂತಾ ಹೇಳಿದ್ದೇನೆ. ಯತ್ನಾಳ್ ಯಾವ ಪಾರ್ಟಿ ಅನ್ನೋದನ್ನ ಸ್ಪಷ್ಟಪಡಿಸಲಿ. ಯತ್ನಾಳ್ ಹೊಸ ಪಕ್ಷಕ್ಕೆ ನಮ್ಮದು ಶುಭ ಹಾರೈಕೆ ಎಂದರು.
ಇದನ್ನೂ ಓದಿ: Maddur stone-pelting: ಮದ್ದೂರು ಗಲಭೆ ಪ್ರಕರಣ; ತಪ್ಪೆಸೆಗಿದವರ ವಿರುದ್ಧ ಜಾತಿ ಧರ್ಮ ಪರಿಗಣಿಸದೇ ಕ್ರಮ ಎಂದ ಸಿಎಂ