Mock Drill: ನಾಳೆ ಸಂಜೆ 4 ಗಂಟೆಗೆ ರಾಜ್ಯದ ಈ ಮೂರು ಜಿಲ್ಲೆಗಳಲ್ಲಿ ಮಾಕ್ ಡ್ರಿಲ್
ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ 7ರಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ (mock drill) ನಡೆಸಲಾಗುತ್ತದೆ ಎನ್ನುವ ಮಾಹಿತಿಯನ್ನೂ ನೀಡಿದೆ. ಕರ್ನಾಟಕದ ಎರಡು ಜಿಲ್ಲೆ ಹಾಗೂ ಕೈಗಾ ಅಣುಸ್ಥಾವರ ಇರುವ ಕಾರವಾರ ತಾಲೂಕಿನಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದೆ. ಆ ಮೂಲಕ ಯುದ್ಧದ ಸಿದ್ಧತೆಯನ್ನು ಪರಿಶೀಲಿಸಲಾಗುತ್ತದೆ. ನಾಳೆ ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ನಡೆಯಲಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಳೆ (ಮೇ 7) ಕರ್ನಾಟಕದ (Karnataka) ಮೂರು ಜಿಲ್ಲೆಗಳಲ್ಲಿ ನಾಗರಿಕ ರಕ್ಷಣೆ ಅಣಕು ಕಾರ್ಯಾಚರಣೆ (civil defence mock drill) ನಡೆಯಲಿದೆ. ರಾಜ್ಯದ ಬೆಂಗಳೂರು (Bengaluru) ನಗರ ಜಿಲ್ಲೆ, ಸೀಬರ್ಡ್ ನೌಕಾನೆಲೆ ಇರುವ ಉತ್ತರ ಕನ್ನಡದ ಕಾರವಾರ (Karawara) ಹಾಗೂ ರಾಯಚೂರು (Raichuru) ಜಿಲ್ಲೆಗಳಲ್ಲಿ ನಾಳೆ ಅಣಕು ಕವಾಯತುಗಳು ನಡೆಯಲಿದೆ. ಪಾಕಿಸ್ತಾನ ವಿರುದ್ಧ ಯುದ್ಧದ ಕಾರ್ಮೋಡ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಮೇ 7ರಿಂದ ಆರಂಭವಾಗಿ ಮೂರು ದಿನಗಳ ಕಾಲ ನಾಗರಿಕ ರಕ್ಷಣೆ ಅಣಕು ಕಾರ್ಯಾಚರಣೆ (ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್ಸ್) ನಡೆಸುವಂತೆ ರಾಜ್ಯಗಳಿಗೆ ಕೇಳಿಕೊಂಡಿದ್ದು, ಇದರ ಬೆನ್ನಲ್ಲಿಯೇ ಮೇ 7ರ ಬುಧವಾರದಂದು ದೇಶದ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಅಭ್ಯಾಸ ನಡೆಯಲಿದೆ.
ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ 7ರಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತದೆ ಎನ್ನುವ ಮಾಹಿತಿಯನ್ನೂ ನೀಡಿದೆ. ಕರ್ನಾಟಕದ ಎರಡು ಜಿಲ್ಲೆ ಹಾಗೂ ಕೈಗಾ ಅಣುಸ್ಥಾವರ ಇರುವ ಕಾರವಾರ ತಾಲೂಕಿನಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದೆ. ಆ ಮೂಲಕ ಯುದ್ಧದ ಸಿದ್ಧತೆಯನ್ನು ಪರಿಶೀಲಿಸಲಾಗುತ್ತದೆ. ನಾಳೆ ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ನಡೆಯಲಿದೆ.
ಮಾಕ್ ಡ್ರಿಲ್‌ಗೆ ಆಪರೇಷನ್ ಅಭ್ಯಾಸ ಎಂದು ಹೆಸರು ಇಡಲಾಗಿದ್ದು, ಒಂದು ವಾರಗಳ ಕಾಲ ಮಾಕ್ ಡ್ರಿಲ್ ನಡೆಯಲಿದೆ. ಎಲ್ಲಾ ಸೈರನ್ ಗಳು ಪೊಲೀಸ್ ಠಾಣೆ, ಅಗ್ನಿಶಾಮಕದಳ ಕಚೇರಿಗಳ ಮೇಲೆ ಅಳವಡಿಕೆಯಾಗಿರುತ್ತದೆ. 35 ಕಡೆ ಸೈರನ್ ಅಳವಡಿಕೆಯಾಗಿದೆ. ಮೂರು ಕಿ.ಮೀ ವ್ಯಾಪ್ತಿಯ ತನಕ ಮೊಳಗಲಿದೆ ಎಂದು ತಿಳಿಸಲಾಗಿದೆ. 35 ಕಡೆ ಸೈರನ್ ಅಳವಡಿಕೆಯಾಗಿದ್ದು, 32 ಕಡೆ ಸೈರನ್ ಆಗಲಿದೆ. ಮೂರು ಕಡೆ ಸೈರನ್ ವರ್ಕ್ ಆಗಲ್ಲ ಎಂದು ಮಾಹಿತಿ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಪ್ರಮುಖವಾಗಿ ಮಲ್ಲೇಶ್ವರದಲ್ಲಿ ಯುದ್ದದ ಮಾಕ್ ಡ್ರಿಲ್ ಯೋಜಿಸಲಾಗಿದೆ. ಮಾಕ್ ಡ್ರಿಲ್ ನಲ್ಲಿ NCC, NSS, civil ಸಿವಿಲ್ ಡಿಫೈನ್ಸ್, ಡಾಕ್ಟರ್ ಗಳು, ಭಾಗಿಯಾಗುತ್ತಾರೆ.
ಮೇ 7ರಂದು ಏನಾಗಲಿದೆ?
ಅಧಿಕೃತವಾಗಿ ಗೊತ್ತುಪಡಿಸಿದ ದೇಶದ 244 ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮಟ್ಟದ ನಾಗರಿಕ ರಕ್ಷಣಾ ಪೂರ್ವಾಭ್ಯಾಸ ನಡೆಯಲಿದೆ. ಡ್ರಿಲ್ ಅನ್ನು ಆಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ. ಇದರಲ್ಲಿ ಸ್ಥಳೀಯ ಸರ್ಕಾರಿ ಅಧಿಕಾರಿಗಳು, ನಾಗರಿಕ ರಕ್ಷಣಾ ವಾರ್ಡನ್‌ಗಳು, ಗೃಹರಕ್ಷಕರು, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ), ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಸ್ವಯಂಸೇವಕರು, ನೆಹರು ಯುವ ಕೇಂದ್ರ ಸಂಘಟನೆ (ಎನ್ವೈಕೆಎಸ್) ಸದಸ್ಯರು ಮತ್ತು ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಡ್ರಿಲ್ ಚಟುವಟಿಕೆಗಳು
ಡ್ರಿಲ್ ಐದು ಪ್ರಮುಖ ಸಂಗತಿಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದೂ ನಾಗರಿಕ ರಕ್ಷಣೆಯ ಪ್ರಮುಖ ಅಂಶವಾಗಿದೆ.
1) ಏರ್ ರೈಡ್ ಸೈರನ್‌ಗಳು: ನಗರ ಕೇಂದ್ರಗಳು ಮತ್ತು ಸೈನ್ಯದ ನೆಲೆಗಳ ಬಳಿ ಸೈರನ್‌ಗಳನ್ನು ಪರೀಕ್ಷಿಸಲಾಗುತ್ತದೆ. ಇದು ವೈಮಾನಿಕ ದಾಳಿ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸುತ್ತದೆ. ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಸಮಯವನ್ನು ನೀಡುತ್ತದೆ.
2) ನಾಗರಿಕರಿಗೆ ತರಬೇತಿ: ಶಾಲೆಗಳು, ಕಚೇರಿಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ಕಾರ್ಯಾಗಾರಗಳು ನಡೆಯಲಿವೆ. ಬಚ್ಚಿಟ್ಟುಕೊಳ್ಳುವ ತಂತ್ರಗಳು, ಹತ್ತಿರದ ಆಶ್ರಯಗಳನ್ನು ಪತ್ತೆ ಹಚ್ಚುವುದು, ಮೂಲಭೂತ ಪ್ರಥಮ ಚಿಕಿತ್ಸೆ, ಒತ್ತಡದಲ್ಲಿ ಶಾಂತವಾಗಿರುವುದು ಹೇಗೆ ಮುಂತಾದ ದಾಳಿಯ ಸಮಯದಲ್ಲಿ ಪ್ರತಿಕ್ರಿಯಿಸುವ ರೀತಿಗಳನ್ನು ಸ್ಪರ್ಧಿಗಳು ಕಲಿಯುತ್ತಾರೆ.
3) ಎಲ್ಲ ದೀಪಗಳು ಆಫ್: ರಾತ್ರಿ ಸಮಯದಲ್ಲಿ ನಡೆಯಬಹುದಾದ ಸಂಭಾವ್ಯ ವಾಯುದಾಳಿಗೆ ಗುರಿಯಾಗದಂತೆ, ನಗರಗಳಲ್ಲಿ ಹಠಾತ್ ಬ್ಲ್ಯಾಕೌಟ್ ಮಾಡಲಾಗುತ್ತದೆ. ಅಂದರೆ ಎಲ್ಲ ದೀಪಗಳನ್ನು ಆಫ್ ಮಾಡಲಾಗುತ್ತದೆ. ಈ ತಂತ್ರವನ್ನು ಕೊನೆಯದಾಗಿ 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ವ್ಯಾಪಕವಾಗಿ ಬಳಸಲಾಯಿತು.
4) ಮರೆಮಾಚುವ ಅಭ್ಯಾಸ: ಮಿಲಿಟರಿ ನೆಲೆಗಳು, ಸಂಪರ್ಕ ಗೋಪುರಗಳು, ವಿದ್ಯುತ್ ಸ್ಥಾವರಗಳು, ಸೈನ್ಯ ನೆಲೆಗಳಂಥ ಕಟ್ಟಡಗಳನ್ನು ಕ್ಯಾಮೋಫ್ಲೇಜಿಂಗ್ ಮಾಡಲಾಗುತ್ತದೆ ಅಥವಾ ಮರೆಮಾಚಲಾಗುತ್ತದೆ. ಶತ್ರುಗಳ ಉಪಗ್ರಹಗಳು ಅಥವಾ ವೈಮಾನಿಕ ಕಣ್ಗಾವಲಿನಿಂದ ಇದು ತಪ್ಪಿಸುತ್ತದೆ.
5) ವ್ಯಾಕ್ಯುಯೇಷನ್ ಡ್ರಿಲ್: ಅಧಿಕಾರಿಗಳು ಜನರನ್ನು ಸ್ಥಳಾಂತರಿಸುವ ಯೋಜನೆಗಳನ್ನು ಪೂರ್ವಾಭ್ಯಾಸ ಮಾಡುತ್ತಾರೆ. ಹೆಚ್ಚಿನ ಅಪಾಯದ ವಲಯಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಾರೆ. ಈ ಡ್ರೈ ರನ್ ಗಳು ನೈಜ ತುರ್ತು ಸಂದರ್ಭಗಳಲ್ಲಿ ನಡೆಸುವ ಕಾರ್ಯಾಚರಣೆ ಸುಗಮವಾಗಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Mock Drills: ಇಂಡಿಯಾ-ಪಾಕ್ ಯುದ್ಧ ಗ್ಯಾರಂಟಿ? ನಾಳೆ ದೇಶಾದ್ಯಂತ ಮಾಕ್ ಡ್ರಿಲ್