ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ex Soldier Hunger strike: ಕಾರ್ಗಿಲ್ ವಿಜಯೋತ್ಸವದ ದಿವಸಾ ಜಮೀನಿಗಾಗಿ ಉಪವಾಸ ಸತ್ಯಾಗ್ರಹ ಕುಳಿತ ಮಾಜಿ ಸೈನಿಕ

ಸೇನೆಯಿಂದ ನಿವೃತ್ತರಾಗಿ ಸುಮಾರು 26 ವರ್ಷಗಳು ಕಳೆದರೂ ಜಿಲ್ಲಾಡಳಿತ ಇವರಿಗೆ ಭೂಮಿ ನೀಡಿಲ್ಲ. ಜಮೀನಿಗಾಗಿ 26 ವರ್ಷಗಳಿಂದ ಹೋರಾಟ ಮಾಡುತ್ತಿರುವ ತಾಲೂಕಿನ ಅಂಬಾಜಿ ದುರ್ಗಾ ಹೋಬಳಿಯ ರಾಯಪಲ್ಲಿ ಗ್ರಾಮದ ಶಿವಾನಂದ ರೆಡ್ಡಿ ಎಂಬತಾ ತನ್ನ ಪತ್ನಿ ಸಮೇತ ನ್ಯಾಯಕ್ಕಾಗಿ ಈಗ  ಉಪವಾಸ ಸತ್ಯಾಗ್ರಹ ಮಾಡುತ್ತಾ ಕುಳಿತಿದ್ದಾರೆ.

26 ವರ್ಷಗಳಿಂದ ಜಮೀನಿಗಾಗಿ ಹೋರಾಟ ಮಾಡುತ್ತಿರುವ ಮಾಜಿ ಸೈನಿಕ

Ashok Nayak Ashok Nayak Jul 27, 2025 4:00 PM

ಚಿಂತಾಮಣಿ : ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಗು ತ್ತಿದೆ. ಆದರೆ ಇಲ್ಲಿ ಒಬ್ಬ ಮಾಜಿ ಸೈನಿಕ ನಿವೃತ್ತಿಯ ನಂತರ ತನಗೆ ನೀಡಬೇಕಾದ ಜಮೀನನ್ಸಂನು ಸಂಬಂಧಪಟ್ಟ ಅಧಿಕಾರಿಗಳು ನೀಡಿಲ್ಲ ಎಂದು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಚಿಂತಾಮಣಿ ನಗರದ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ಬೆಳಗ್ಗೆ 11ಗಂಟೆಯಿಂದ ಉಪವಾಸ ಕುಳಿತು ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.

ಇವರು ಸೇನೆಯಿಂದ ನಿವೃತ್ತರಾಗಿ ಸುಮಾರು 26 ವರ್ಷಗಳು ಕಳೆದರೂ ಜಿಲ್ಲಾಡಳಿತ ಇವರಿಗೆ ಭೂಮಿ ನೀಡಿಲ್ಲ. ಜಮೀನಿಗಾಗಿ 26 ವರ್ಷಗಳಿಂದ ಹೋರಾಟ ಮಾಡುತ್ತಿರುವ ತಾಲೂಕಿನ ಅಂಬಾಜಿ ದುರ್ಗಾ ಹೋಬಳಿಯ ರಾಯಪಲ್ಲಿ ಗ್ರಾಮದ ಶಿವಾನಂದ ರೆಡ್ಡಿ ಎಂಬತಾ ತನ್ನ ಪತ್ನಿ ಸಮೇತ ನ್ಯಾಯಕ್ಕಾಗಿ ಈಗ  ಉಪವಾಸ ಸತ್ಯಾಗ್ರಹ ಮಾಡುತ್ತಾ ಕುಳಿತಿದ್ದಾರೆ.

ಇದನ್ನೂ ಓದಿ: Chikkaballapur News: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಕಾನೂನಿನ ಅರಿವು ಅಗತ್ಯ

ಶಿವಾನಂದರೆಡ್ಡಿ  ಸೇವೆ ಸಲ್ಲಿಸುವಾಗ ಗಡಿ ಭಾಗದಲ್ಲಿ ನಡೆದ ಅಪಘಾತದಲ್ಲಿ ಅಂಗವಿಕಲ ರಾಗಿದರು. ಕಾಲಿಗೆ ತೀವ್ರ ಪೆಟ್ಟಾದ ಕಾರಣ ಸೇನೆಯಿಂದ ಕಡ್ಡಾಯ ನಿವೃತ್ತಿ ಪಡೆಯಬೇಕಾಯಿತು. ಹೀಗೆ ಕಾಲಿಗೆ ಪೆಟ್ಟು ತಿಂದು ನಿವೃತ್ತಿಯಾದ ಹಿನ್ನೆಲೆಯಲ್ಲಿ ಸೇನೆಯಿಂದಲೇ ಜಮೀನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.ಹಾಗೆ ಸೂಚಿಸಿ ಎರಡೂವರೆ ದಶಕವೇ ಕಳೆದರೂ ಈತನಿಗೆ ಸರ್ಕಾರದಿಂದ ಸಿಗಬೇಕಾದ ಜಮೀನು ಸಿಕ್ಕಿಲ್ಲ.ಇದು ನಮ್ಮ ದೇಶದಲ್ಲಿ ಮಾಜಿ ಯೋಧ ನೊಬ್ಬನಿಗೆ ನಮ್ಮ ಆಡಳಿತ ವ್ಯವಸ್ಥೆ  ನೀಡಿದ ಗೌರವ.

ಆದರೆ ತನಗೆ ಸರ್ಕಾರದಿಂದ ಸಿಗಬೇಕಾದ ಜಮೀನಿಗಾಗಿ ಕಳೆದ 24 ವರ್ಷಗಳಿಂದ ಹೋರಾಟ ನಡೆಸಿದ್ದು ಮುಖ್ಯಮಂತ್ರಿ, ಸಚಿವರು,ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಗಮನಕ್ಕೂ ತಂದಿದ್ದರು ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಮಾಜಿ ಸೈನಿಕ ಇಂದು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾನೆ.

ಉಪವಾಸ ಸತ್ಯಾಗ್ರಹ ಕುಳಿತಿರುವ ಮಾಜಿ ಸೈನಿಕ ಶಿವಾನಂದ ರೆಡ್ಡಿ ಮಾತನಾಡಿ ಸುಮಾರು 26 ವರ್ಷಗಳಿಂದ ಜಮೀನಿಗಾಗಿ ಹೋರಾಟ ಮಾಡುತ್ತಿದ್ದೇನೆ ಆದರೆ ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ನನಗೆ ನ್ಯಾಯ ಕೊಡಿಸಲು ಮುಂದಾಗುತ್ತಿಲ್ಲ.

ತಾಲೂಕು ಆಡಳಿತದ ಕೆಲ ಕಂದಾಯ ಇಲಾಖೆಯ ಅಧಿಕಾರಿಗಳು ನನಗೆ ಜಮೀನು ನೀಡಬೇಕೆಂದರೆ ಲಂಚ ಕೊಡಬೇಕೆಂದು ಡಿಮ್ಯಾಂಡ್ ಇಟ್ಟಿದ್ದರು. ಆ ವೇಳೆ ಅವರಿಗೆ ನಾನು ಲೋಕಾಯುಕ್ತ ಗೆ ಹಿಡಿದು ಕೊಟ್ಟಿದ್ದೆ!

ಇದೇ ಒಂದು ಕಾರಣಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ನನಗೆ ಜಮೀನು ಮಂಜೂರು ಮಾಡಿಸಿ ಕೊಡುವುದರಲ್ಲಿ ಬಹಳಷ್ಟು ವಿಳಂಬ ಮಾಡುತ್ತಿರುವುದಲ್ಲದೆ ಸುಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ.

ನನಗೆ ಜಮೀನು ಸಿಗುವವರೆಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.