ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mock Drills: ಇಂಡಿಯಾ-ಪಾಕ್‌ ಯುದ್ಧ ಗ್ಯಾರಂಟಿ? ನಾಳೆ ದೇಶಾದ್ಯಂತ ಮಾಕ್‌ ಡ್ರಿಲ್‌

Mock Drills: ಪ್ರಸ್ತುತ ಇರುವಂತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ಬೆದರಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ 244 ವಿಂಗಡಿತ ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಮೇ 7, ಬುಧವಾರದಂದು ಅಣುಕು ಅಭ್ಯಾಸ ನಡೆಸಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಗಳ ನಂತರ ಈ ಆದೇಶ ಹೊರಬಿದ್ದಿದೆ.

ಯುದ್ಧದ ಪೂರ್ವ ಸಿದ್ಧತೆಗೆ ನಾಳೆ ದೇಶಾದ್ಯಂತ ಮಾಕ್‌ ಡ್ರಿಲ್‌!

ಸಾಂಧರ್ಬಿಕ ಚಿತ್ರ

Profile Sushmitha Jain May 6, 2025 10:31 AM

ನವದೆಹಲಿ: ಪ್ರಸ್ತುತ ಇರುವಂತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ಬೆದರಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯವು (Union Home Ministry) ದೇಶಾದ್ಯಂತ 244 ವಿಂಗಡಿತ ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಮೇ 7, ಬುಧವಾರದಂದು ಅಣುಕು ಅಭ್ಯಾಸ (Mock Drills) ನಡೆಸಲು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ (Pahalgam terror Attack) ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಘಟನೆಗೆ ಭಾರತದ ಪ್ರತೀಕಾರವನ್ನು ಚರ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಗಳ ನಂತರ ಈ ಆದೇಶ ಹೊರಬಿದ್ದಿದೆ.

ಪಾಕಿಸ್ತಾನವು ಎರಡು ದಿನಗಳಲ್ಲಿ ಎರಡನೇ ಬಾರಿಗೆ "ಇಂಡಸ್ ಕಸರತ್ತು" ಅಡಿಯಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಿದ ಕೆಲವೇ ಗಂಟೆಗಳ ನಂತರ ಈ ಆದೇಶ ಬಂದಿದೆ. ಈ ಪರೀಕ್ಷೆಯ ಯಶಸ್ಸಿನ ಬಗ್ಗೆ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್, "ಪಾಕಿಸ್ತಾನದ ರಕ್ಷಣೆ ಬಲಿಷ್ಠ ಕೈಗಳಲ್ಲಿದೆ ಎಂಬುದು ಸ್ಪಷ್ಟವಾಗಿದೆ" ಎಂದು ಹೇಳಿದ್ದಾರೆ.

"ಪ್ರಸ್ತುತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ಮತ್ತು ಸಂಕೀರ್ಣ ಬೆದರಿಕೆಗಳು ಮತ್ತು ಸವಾಲುಗಳು ಉದ್ಭವಿಸಿವೆ. ಆದ್ದರಿಂದ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವಾಗಲೂ ಗರಿಷ್ಠ ನಾಗರಿಕ ರಕ್ಷಣಾ ಸಿದ್ಧತೆಯನ್ನು ಕಾಪಾಡಿಕೊಳ್ಳುವುದು ಸೂಕ್ತವಾಗಿದೆ" ಎಂದು ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣೆ ಮತ್ತು ಹೋಂ ಗಾರ್ಡ್ಸ್‌ನ ಮಹಾನಿರ್ದೇಶಕರಿಂದ ಬಂದ ಪತ್ರದಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಓದಿ: Pahalgam Terror Attack: ಕಾಶ್ಮೀರ ಟೈಗರ್, ಕಾಶ್ಮೀರ ಫ್ರೀಡಂ ಆರ್ಮಿ... ಇದು ಜೈಶ್‌ ಉಗ್ರ ಸಂಘಟನೆಯ ಹೊಸ ಮುಖ!

ಆದೇಶದಲ್ಲಿ ಏನಿದೆ?

  • ವಾಯುದಾಳಿ ಎಚ್ಚರಿಕೆ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವುದು.
  • ಭಾರತೀಯ ವಾಯುಸೇನೆಯೊಂದಿಗಿನ ಹಾಟ್‌ಲೈನ್/ರೇಡಿಯೊ ಸಂಪರ್ಕ ಲಿಂಕ್‌ಗಳ ಕಾರ್ಯಾಚರಣೆ.
  • ನಿಯಂತ್ರಣ ಕೊಠಡಿಗಳು ಮತ್ತು ಶ್ಯಾಡೋ ನಿಯಂತ್ರಣ ಕೊಠಡಿಗಳ ಕಾರ್ಯನಿರ್ವಹಣೆಯನ್ನು ಪರೀಕ್ಷಿಸುವುದು.
  • ಶತ್ರು ದಾಳಿಯ ಸಂದರ್ಭದಲ್ಲಿ ಸ್ವರಕ್ಷಣೆಗಾಗಿ ನಾಗರಿಕರು, ವಿದ್ಯಾರ್ಥಿಗಳಿಗೆ ನಾಗರಿಕ ರಕ್ಷಣಾ ತರಬೇತಿ.
  • ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳನ್ನು ಒದಗಿಸಬೇಕು.
  • ಪ್ರಮುಖ ಸ್ಥಾವರಗಳು, ಕಟ್ಟಡಗಳನ್ನು ಮರೆಮಾಚುವ ವ್ಯವಸ್ಥೆ.
  • ನಾಗರಿಕ ರಕ್ಷಣಾ ಸೇವೆಗಳ ಸಕ್ರಿಯಗೊಳಿಸುವಿಕೆ ಮತ್ತು ಪ್ರತಿಕ್ರಿಯೆಯನ್ನು ಪರಿಶೀಲಿಸುವುದು, ಇದರಲ್ಲಿ ವಾರ್ಡನ್ ಸೇವೆಗಳು, ಅಗ್ನಿಶಾಮಕ, ರಕ್ಷಣಾ ಕಾರ್ಯಾಚರಣೆಗಳು ಮತ್ತು ಡಿಪೋ ನಿರ್ವಹಣೆ ಸೇರಿವೆ.
  • ಸ್ಥಳಾಂತರ ಯೋಜನೆಗಳ ಸಿದ್ಧತೆ ಮತ್ತು ಅವುಗಳ ಜಾರಿಯನ್ನು ಮೌಲ್ಯಮಾಪನ ಮಾಡುವುದು.

"ಈ ಅಣುಕು ಅಭ್ಯಾಸವನ್ನು ಗ್ರಾಮ ಮಟ್ಟದವರೆಗೆ ನಡೆಸಲು ಯೋಜಿಸಲಾಗಿದೆ. ಈ ಕಸರತ್ತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ಮತ್ತು ವೃದ್ಧಿಸಲು ಗುರಿಯಾಗಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಗೃಹ ಸಚಿವಾಲಯದ ಆದೇಶವು, ಈ ಕಸರತ್ತಿನಲ್ಲಿ ಜಿಲ್ಲಾ ನಿಯಂತ್ರಕರು, ಸ್ಥಳೀಯಾಡಳಿತ, ನಾಗರಿಕ ರಕ್ಷಣಾ ವಾರ್ಡನ್‌ಗಳು, ಸ್ವಯಂಸೇವಕರು, ಹೋಂ ಗಾರ್ಡ್‌ಗಳು (ಸಕ್ರಿಯ ಮತ್ತು ಮೀಸಲು), ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ), ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ನೆಹರು ಯುವ ಕೇಂದ್ರ ಸಂಘಟನೆ (ಎನ್‌ವೈಕೆಎಸ್) ಮತ್ತು ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ ಎಂದು ಹೇಳಿದೆ.