Apple Hebbal: ಆ್ಯಪಲ್‌ನ ಮತ್ತೊಂದು ಮಳಿಗೆ ಬೆಂಗಳೂರಿನಲ್ಲಿ ಸೆ.5ರಂದು ಆರಂಭ
Apple Store: ಆ್ಯಪಲ್ ಇಂಡಿಯಾದ ಅಧಿಕೃತ ವೆಬ್‌ಸೈಟ್, ಆ್ಯಪಲ್ ಹೆಬ್ಬಾಳ್ ಸ್ಟೋರ್ ಸೆಪ್ಟೆಂಬರ್ 2, 2025ರಂದು ತೆರೆಯಲಿದೆ ಎಂದು ದೃಢಪಡಿಸಿದೆ. ಈ ಮಳಿಗೆ ಆ್ಯಪಲ್‌ನ ಭಾರತದ ಮೂರನೇ ಪ್ರಮುಖ ಚಿಲ್ಲರೆ ಅಂಗಡಿಯಾಗಿದೆ. ಮುಂಬೈನಲ್ಲಿ ಆ್ಯಪಲ್ ಬಿಕೆಸಿ ಮತ್ತು ನವದೆಹಲಿಯಲ್ಲಿ ಆ್ಯಪಲ್ ಸಾಕೇತ್ ಮಳಿಗೆಗಳನ್ನು ಯಶಸ್ವಿಯಾಗಿ ತೆರೆದ ನಂತರ ಇದು ಬಂದಿದೆ.


ಬೆಂಗಳೂರು: ಆ್ಯಪಲ್ ಕಂಪನಿ ತನ್ನ ಐಫೋನ್‌ಗಳ ಚಿಲ್ಲರೆ ಮಾರಾಟದ ಇನ್ನೊದು ಮಳಿಗೆಯನ್ನು ಬೆಂಗಳೂರಿನಲ್ಲಿ (Apple store in begngaluru) ತೆರೆಯಲು ಮುಂದಾಗಿದೆ. ʼಆ್ಯಪಲ್ ಹೆಬ್ಬಾಳ್ʼ (Apple Hebbal) ಎಂಬ ಹೆಸರಿನ ಈ ಮಳಿಗೆ ಆ್ಯಪಲ್‌ನ ಭಾರತದ ಮೂರನೇ ಪ್ರಮುಖ ಚಿಲ್ಲರೆ ಅಂಗಡಿಯಾಗಿದೆ. ಮುಂಬೈನಲ್ಲಿ ಆ್ಯಪಲ್ ಬಿಕೆಸಿ ಮತ್ತು ನವದೆಹಲಿಯಲ್ಲಿ ಆ್ಯಪಲ್ ಸಾಕೇತ್ ಮಳಿಗೆಗಳನ್ನು ಯಶಸ್ವಿಯಾಗಿ ತೆರೆದ ನಂತರ ಇದು ಬಂದಿದೆ.
ಆ್ಯಪಲ್ ಇಂಡಿಯಾದ ಅಧಿಕೃತ ವೆಬ್‌ಸೈಟ್, ಆ್ಯಪಲ್ ಹೆಬ್ಬಾಳ್ ಸ್ಟೋರ್ ಸೆಪ್ಟೆಂಬರ್ 2, 2025ರಂದು ತೆರೆಯಲಿದೆ ಎಂದು ದೃಢಪಡಿಸಿದೆ. ಈ ಮಳಿಗೆಯ ಪ್ರಾರಂಭೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಆ್ಯಪಲ್ ಉಚಿತ ಬೆಂಗಳೂರು ಪ್ರೇರಿತ ವಾಲ್‌ಪೇಪರ್ ಮತ್ತು ಆ್ಯಪಲ್ ಮ್ಯೂಸಿಕ್‌ನಲ್ಲಿ ವಿಶೇಷವಾಗಿ ಕ್ಯುರೇಟೆಡ್ ಆ್ಯಪಲ್ ಹೆಬ್ಬಾಳ್ ಪ್ಲೇಲಿಸ್ಟ್ ಅನ್ನು ಪರಿಚಯಿಸಿದೆ.
ಆ್ಯಪಲ್ ಹೆಬ್ಬಾಳ್ ಯಾವಾಗ ಉದ್ಘಾಟನೆ?
ಬೆಂಗಳೂರಿನ ಬ್ಯಾಟರಾಯನಪುರದ ಬಳ್ಳಾರಿ ರಸ್ತೆಯಲ್ಲಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಎಫ್-39ರಿಂದ ಎಫ್ -43ರವರೆಗಿನ ಮಳಿಗೆಗಳಲ್ಲಿ ಈ ಶಾಪ್ ಇರಲಿದೆ. ಆ್ಯಪಲ್ ಇಂಡಿಯಾದ ಅಧಿಕೃತ ವೆಬ್ಸೈಟ್ ಪ್ರಕಾರ, ಈ ಮಳಿಗೆಯು ಸೆಪ್ಟೆಂಬರ್ 2, 2025ರಿಂದ ಗ್ರಾಹಕರನ್ನು ಸ್ವಾಗತಿಸಲಿದೆ. ಭಾರತದಲ್ಲಿರುವ ಆ್ಯಪಲ್‌ನ ಇತರ ಪ್ರೀಮಿಯಂ ಮಳಿಗೆಗಳಂತೆಯೇ, ಆ್ಯಪಲ್ ಹೆಬ್ಬಾಳ್ ವ್ಯಾಪಕ ಶ್ರೇಣಿಯ ಸೇವೆಗಳು ಮತ್ತು ಅನುಭವಗಳನ್ನು ಒದಗಿಸುತ್ತದೆ.
ಸರಿಯಾದ ಸಾಧನಗಳು ಮತ್ತು ಆಕ್ಸೆಸರಿಗಳನ್ನು ಆಯ್ಕೆ ಮಾಡುವಲ್ಲಿ ಗ್ರಾಹಕರಿಗೆ ಮಾರ್ಗದರ್ಶನ ನೀಡಲು ತರಬೇತಿ ಪಡೆದ ಆ್ಯಪಲ್ ತಜ್ಞರು ಲಭ್ಯವಿದ್ದಾರೆ. ಕಾರ್ಯಾಗಾರಗಳಿಗಾಗಿ ಮೀಸಲಾದ ʼಟುಡೇ ಅಟ್ ಆ್ಯಪಲ್ʼ ವಲಯವಿದೆ. ಅಲ್ಲಿ ನಡೆಯುವ ಸೃಜನಶೀಲ ಮತ್ತು ತಾಂತ್ರಿಕ ಕೌಶಲ್ಯಗಳ ಬೆಳವಣಿಗೆ ಕಾರ್ಯಾಗಾರಗಳಿಗಾಗಿ ಆನ್ ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.