ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bus Ticket Price hike: ದೀಪಾವಳಿಗೆ ಖಾಸಗಿ ಬಸ್ಸುಗಳಿಂದ ಸುಲಿಗೆ, ಟಿಕೆಟ್‌ ದರ ನಾಲ್ಕು ಪಟ್ಟು ಏರಿಕೆ

Private bus: ಹಬ್ಬಕ್ಕೆ ತಮ್ಮೂರಿಗೆ ತೆರಳುವವರಿಗೆ ಬಸ್ ದರ ಬಲು ದುಬಾರಿ ಆಗಿ ಮಾರ್ಪಟ್ಟಿದೆ. ರೆಡ್ ಬಸ್ ಸೇರಿದಂತೆ ಯಾವುದೇ ಆ್ಯಪ್‌ಗಳಲ್ಲಿಯೂ ಬಸ್ ಟಿಕೆಟ್ ದರ ನಾಲ್ಕು ಪಟ್ಟು ಏರಿಕೆಯಾಗಿದೆ. ʼಇದು ಹಗಲು ದರೋಡೆʼ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೀಪಾವಳಿಗೆ ಖಾಸಗಿ ಬಸ್ಸುಗಳಿಂದ ಸುಲಿಗೆ, ಟಿಕೆಟ್‌ ದರ ನಾಲ್ಕು ಪಟ್ಟು ಏರಿಕೆ

-

ಹರೀಶ್‌ ಕೇರ ಹರೀಶ್‌ ಕೇರ Oct 17, 2025 7:44 AM

ಬೆಂಗಳೂರು: ದೀಪಾವಳಿ ಹಬ್ಬ (Deepavali Festival) ಹಿನ್ನೆಲೆಯಲ್ಲಿ ಊರಿಗೆ ಹೊರಡುವ ಖುಷಿಯಲ್ಲಿದ್ದವರಿಗೆ ಖಾಸಗಿ ಬಸ್‌ ಮಾಲೀಕರು (Private Bus Ticket Price hike) ಭಾರಿ ಆಘಾತವನ್ನೇ ನೀಡಿದ್ದಾರೆ. ಬೆಂಗಳೂರಿನಿಂದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಹೊರಡುವ ರಾತ್ರಿ ಬಸ್ಸುಗಳ ದರ ಮೂರು ಪಟ್ಟು, ನಾಲ್ಕು ಪಟ್ಟು ಏರಿಕೆಯಾಗಿದೆ. ಖಾಸಗಿ ಬಸ್‌ಗಳ ಮಾಲೀಕರು ಪ್ರಯಾಣಿಕರಿಂದ ʼದಿವಾಳಿ ಸುಲಿಗೆʼಗೆ ಮುಂದಾಗಿದ್ದಾರೆ.

ಹಬ್ಬಕ್ಕೆ ತಮ್ಮೂರಿಗೆ ತೆರಳುವವರಿಗೆ ಬಸ್ ದರ ಬಲು ದುಬಾರಿ ಆಗಿ ಮಾರ್ಪಟ್ಟಿದೆ. ರೆಡ್ ಬಸ್ ಸೇರಿದಂತೆ ಯಾವುದೇ ಆ್ಯಪ್‌ಗಳಲ್ಲಿಯೂ ಬಸ್ ಟಿಕೆಟ್ ದರ ನೋಡಿ ಪ್ರಯಾಣಿಕರು ಗಾಬರಿ ಆಗಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಖಾಸಗಿ ಬಸ್‌ಗಳ ಟಿಕೆಟ್ ದರ ಸಾಮಾನ್ಯವಾಗಿ ₹ 600ರಿಂದ ₹ 950 ಇರುತ್ತದೆ. ಆದರೆ ಅ. 17ರ ಟಿಕೆಟ್ ದರ ಮಾತ್ರ ₹ 2500ರಿಂದ ₹ 3500 ನಿಗದಿಪಡಿಸಲಾಗಿದೆ. ʼಇದು ಹಗಲು ದರೋಡೆʼ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರಗಳು ಹೀಗಿವೆ:

ಬೆಂಗಳೂರು ಬಳ್ಳಾರಿ

ಇಂದಿನ ದರ ₹ 500 ರಿಂದ ₹ 650

ಅ. 17ರ ಟಿಕೆಟ್ ದರ ₹ 1200 ರಿಂದ ₹ 1800

ಬೆಂಗಳೂರು ಮಡಿಕೇರಿ

ಇಂದಿನ ದರ ₹ 500 ರಿಂದ ₹ 600

ಅ. 17ರ ಟಿಕೆಟ್ ದರ ₹ 2299 ರಿಂದ ₹ 5000

ಬೆಂಗಳೂರು ಉಡುಪಿ

ಇಂದಿನ ದರ ₹ 600 ರಿಂದ ₹ 950

ಅ. 17ರ ಟಿಕೆಟ್ ದರ ₹ 2500 ರಿಂದ ₹ 3700

ಬೆಂಗಳೂರು ಧಾರವಾಡ

ಇಂದಿನ ದರ ₹ 800 ರಿಂದ ₹ 1200

ಅ. 17ರ ಟಿಕೆಟ್ ದರ ₹ 1700 ರಿಂದ ₹ 3000

ಬೆಂಗಳೂರು ಬೆಳಗಾವಿ

ಇಂದಿನ ದರ ₹ 800 ರಿಂದ ₹ 1000

ಅ. 17ರ ಟಿಕೆಟ್ ದರ ₹ 2000 ರಿಂದ ₹ 3999

ಬೆಂಗಳೂರು ದಾವಣಗೆರೆ

ಇಂದಿನ ದರ ₹ 600 ರಿಂದ ₹ 800

ಅ. 17ರ ಟಿಕೆಟ್ ದರ ₹ 1300 ರಿಂದ ₹ 4590

ಇದನ್ನೂ ಓದಿ: Deepavali festival: ದೀಪಾವಳಿ ಹಬ್ಬದ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿಯಿಂದ 2500 ಹೆಚ್ಚುವರಿ ಬಸ್‌

ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್‌ಗಳು

ಇತ್ತ ಕೆಎಸ್‌ಆರ್‌ಟಿಸಿ ಬಸ್‌ಗಳು ದೀಪಾವಳಿ ಹಬ್ಬದ ಪ್ರಯುಕ್ತ NWKRTC 310 ಹೆಚ್ಚುವರಿ ಬಸ್ಸುಗಳನ್ನು ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಂದ ಅ.17-19 ರವರೆಗೆ ಕಾರ್ಯಾಚರಣೆ ಮಾಡಲಿವೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ (Hubballi), ಧಾರವಾಡ, ಗದಗ, ಬೆಳಗಾವಿ (Belagavi), ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 310 ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಬೆಂಗಳೂರಿನಿಂದ ರಾಜ್ಯ, ಅಂತರರಾಜ್ಯ ವಿವಿಧ ಸ್ಥಳಗಳಿಗೆ ತೆರಳಲು ಅಕ್ಟೋಬರ್ 17 ರಿಂದ 19 ರಂದು ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಬ್ಬ ಮುಗಿದ ನಂತರ ಅಕ್ಟೋಬರ್ 22 ಮತ್ತು ನಂತರ ದಿನಗಳಂದು ಪ್ರಮುಖ ಸ್ಥಳಗಳಿಗೆ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುವುದು.