ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತ್ಯಾಗದಿಂದ ಮಾತ್ರವೇ ಶ್ರೇಷ್ಠತೆ ಪಡೆಯುವುದಕ್ಕೆ ಸಾಧ್ಯ: ರಾಘವೇಶ್ವರ ಶ್ರೀ

Navaratra Namasya: ನಮ್ಮಲ್ಲಿ ಸ್ವಾರ್ಥ ಇಲ್ಲದೆ, ನಮ್ಮಲ್ಲಿರುವ ಸಮಸ್ತವನ್ನು ಸಮರ್ಪಿಸುವ ಮನೋಭಾವ ಇದ್ದಾಗ ದೇವರ ಒಲುಮೆ ಸಾಧ್ಯ. ಅಂತಹ ಒಲುಮೆ ಪಡೆಯಬೇಕಾದರೆ ನಮ್ಮಲ್ಲಿರುವ ನಾನು ನನ್ನದು ಎನ್ನುವ ಮೋಹ ತ್ಯಜಿಸಬೇಕು. ಅದೇ ತ್ಯಾಗ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದರು.

ತ್ಯಾಗದಿಂದ ಮಾತ್ರವೇ ಶ್ರೇಷ್ಠತೆ ಪಡೆಯಲು ಸಾಧ್ಯ: ರಾಘವೇಶ್ವರ ಶ್ರೀ

-

Profile Siddalinga Swamy Sep 23, 2025 9:38 PM

ಸಾಗರ: ಕರ್ಮದಿಂದ ಅಲ್ಲ ತ್ಯಾಗದಿಂದ ಮಾತ್ರ ಶ್ರೇಷ್ಠತೆ ಪಡೆಯುವುದಕ್ಕೆ ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಸಾಗರದ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದಲ್ಲಿ ಏರ್ಪಡಿಸಿರುವ ʼನವರಾತ್ರ ಸಮಸ್ಯಾʼ ದ ಎರಡನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

namasya religious programme 2

ನಮ್ಮಲ್ಲಿ ಸ್ವಾರ್ಥ ಇಲ್ಲದೆ, ನಮ್ಮಲ್ಲಿರುವ ಸಮಸ್ತವನ್ನು ಸಮರ್ಪಿಸುವ ಮನೋಭಾವ ಇದ್ದಾಗ ದೇವರ ಒಲುಮೆ ಸಾಧ್ಯ. ಅಂತಹ ಒಲುಮೆ ಪಡೆಯಬೇಕಾದರೆ ನಮ್ಮಲ್ಲಿರುವ ನಾನು ನನ್ನದು ಎನ್ನುವ ಮೋಹ ತ್ಯಜಿಸಬೇಕು. ಅದೇ ತ್ಯಾಗ ಎಂದು ಶ್ರೀಗಳು ತಿಳಿಸಿದರು.

ನಿತ್ಯ ಬೇರೆಬೇರೆ ರೀತಿಯ ವಸ್ತು ವಿಷಯವನ್ನು ಬಯಸುವುದು ಮನುಷ್ಯನ ಕ್ರಿಯೆಯಾದರೆ, ನಾನಾ ಅವತಾರದಲ್ಲಿ ನಮಗೆ ದರ್ಶನದ ಭಾಗ್ಯ ನೀಡುವುದು ಭಗವಂತನ ಸ್ವಭಾವ. ಅಂತೆಯೇ ಭಗವಂತನಲ್ಲಿ ನಾವು ಅಪೇಕ್ಷೆಗಳ ಪಟ್ಟಿಯನ್ನು ಇಟ್ಟು ಕೇಳುತ್ತೇವೆ. ಆದರೆ ನಿಜವಾಗಿ ನಮಗೇನು ಬೇಕು ಎಂದು ಭಗವಂತನೇ ಅರಿತಿರುವಾಗ ಕೇಳುವ ಅಗತ್ಯ ಇರುವುದೇ ಇಲ್ಲ. ಹಾಗಾಗಿಯೇ ದೇವಿ ಅವತಾರವಾಗುವಾಗ ದೇವೇಂದ್ರ ತಾಯಿಗೆ ಶರಣಾಗಿ ಎಲ್ಲವೂ ತಿಳಿದಿರುವ ನೀನು ರಕ್ಷಿಸಬೇಕು ಎಂದು ಯಾಚಿಸಿದ. ಅದೇ ರೀತಿ ನಮ್ಮ ಬದುಕಿನಲ್ಲಿಯೂ ಎಲ್ಲ ತಿಳಿದಿರುವ ತಾಯಿಯಲ್ಲಿ ಮೊರೆ ಇಡಬೇಕು ಅಷ್ಟೆ. ಬಯಕೆಗಳನ್ನು ಕೇಳುವುದು ತರವಲ್ಲ ಎಂದರು.

ಸಮಾಜ ಸಂಭ್ರಮ

ಮೋಗವೀರ, ಗಂಗಾಮತಸ್ಥ, ಬಂಟ ಯಾನೆ ನಾಡವ, ರಾಮಕ್ಷತ್ರೀಯ ಸಮಾಜಕ್ಕೆ ಸಮಿತಿಯ ವತಿಯಿಂದ ಸಮಾಜ ಸಂಭ್ರಮದ ಅಂಗವಾಗಿ ಗೌರವ ನೀಡಲಾಯಿತು. ಕ್ರಮವಾಗಿ ಆಯಾ ಸಮಾಜದ ಅಧ್ಯಕ್ಷರಾದ ಸತೀಶ್ ಮೊಗವೀರ, ಶಿವಾನಂದ, ಸುಧೀರ್ ಶೆಟ್ಟಿ, ಗಣೇಶ್ ಗೌರವ ಸ್ವೀಕರಿಸಿದರು. ಶ್ರೀಕ್ಷೇತ್ರ ವರದಹಳ್ಳಿಯ ಅಧ್ಯಕ್ಷ ಎಂ.ಜಿ. ಕೃಷ್ಣಮೂರ್ತಿ ಅವರು ಶ್ರೀ ಶ್ರೀಧರ ಸೇವಾ ಮಂಡಳಿಗೆ ಕೊಡ ಮಾಡಿದ ಗೌರವವನ್ನು ಸ್ವೀಕರಿಸಿದರು. ಹೊಸನಗರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಾ ಸುಬ್ರಮಣ್ಯ ಮತ್ತಿತರರು ಆಶೀರ್ವಾದ ಪಡೆದರು.

ಈ ಸುದ್ದಿಯನ್ನೂ ಓದಿ | ಮೂಲವನ್ನು ಎಂದೂ ಕೂಡ ಮರೆಯಬಾರದು, ಅದು ವೃಕ್ಷಕ್ಕೆ ಬೇರಿದ್ದಂತೆ: ರಾಘವೇಶ್ವರ ಭಾರತೀ ಶ್ರೀ

ಇದಕ್ಕೂ ಮುನ್ನ ಬೆಳಗ್ಗೆ ಮಹಾಕಾಳಿ ಹವನ, ಚಂಡೀಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ , ಭಜನೆ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ನೆರವೇರಿತು.