IND vs WI: ವಿಂಡೀಸ್‌ಗೆ ಮತ್ತೊಂದು ಹಿನ್ನಡೆ, ಭಾರತ ವಿರುದ್ದದ ಟೆಸ್ಟ್ ಸರಣಿಯಿಂದ ಅಲ್ಝಾರಿ ಜೋಸೆಫ್ ಔಟ್!
ಭಾರತ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ವೆಸ್ಟ್ ಇಂಡೀಸ್ ವೇಗದ ಬೌಲರ್ ಅಲ್ಝಾರಿ ಜೋಸೆಫ್ ಹೊರ ಬಿದ್ದಿದ್ದಾರೆ. ಅವರು ಬೆನ್ನು ನೋವಿಗೆ ತುತ್ತಾಗಿರುವ ಕಾರಣ ಈ ಸರಣಿಯಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ವಿಂಡೀಸ್ ಕ್ರಿಕೆಟ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಆಲ್ಝಾರಿ ಜೋಸೆಫ್ ಔಟ್. -

ನವದೆಹಲಿ: ಭಾರತ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ (IND vs WI) ಮುನ್ನ ವೆಸ್ಟ್ ಇಂಡೀಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಶಮರ್ ಜೋಸೆಫ್ ಅವರ ಟೆಸ್ಟ್ ಸರಣಿಯಿಂದ ಹೊರಬಿದ್ದ ಬೆನ್ನಲ್ಲೆ ಇದೀಗ ಹಿರಿಯ ವೇಗದ ಬೌಲರ್ ಆಲ್ಝಾರಿ ಜೋಸೆಫ್ (Alzarri Joseph) ಅವರು ಕೂಡ ಭಾರತದ ಪ್ರವಾಸದಿಂದ ಹೊರ ಬಿದ್ದಿದ್ದಾರೆ. ಆಲ್ಝಾರಿ ಜೋಸೆಫ್ ಅವರು ಬೆನ್ನು ನೋವಿನ ಗಾಯದಿಂದ ಬಳಲುತ್ತಿದ್ದಾರೆ. ವಿಂಡೀಸ್ ಕ್ರಿಕೆಟ್ ಮಂಡಳಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಒಡಿಐ ಮತ್ತು ಟಿ20ಐ ಕ್ರಿಕೆಟ್‌ನಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿರುವ ಜೇಡಿಯಾ ಬ್ಲೇಡ್ಸ್ (Jediah Blades) ಅವರು ಟೆಸ್ಟ್ ತಂಡದಲ್ಲಿ ಜೋಸೆಫ್ ಅವರ ಸ್ಥಾನವನ್ನು ತುಂಬಿದ್ದಾರೆ.
ಹಿರಿಯ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅವರು ಯೋಜಿತ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕಾಗಿರುವುದರಿಂದ ಪ್ರವಾಸಕ್ಕೆ ಆಯ್ಕೆಯಾಗಲು ನಿರಾಕರಿಸಿದ್ದಾರೆ ಎಂದು ಹೇಳಿಕೆಯಲ್ಲಿ ಬಹಿರಂಗಪಡಿಸಲಾಗಿದೆ. ಜೋಸೆಫ್ ಅವರ ಗಾಯದೊಂದಿಗೆ ಹೋಲ್ಡರ್ ಅನುಪಸ್ಥಿತಿಯು ವೆಸ್ಟ್ ಇಂಡೀಸ್ ತಂಡದಲ್ಲಿ ಅನುಭವದ ಕೊರತೆ ಕಾಡುತ್ತಿದೆ. ಇದಕ್ಕೂ ಮುನ್ನ ಶಮರ್ ಜೋಸೆಫ್ ಕೂಡ ಬಹಿರಂಗಪಡಿಸದ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಇದೀಗ ಆಲ್ಝಾರಿ ಜೋಸೆಫ್ ಅವರ ಕೂಡ ವಿಂಡೀಸ್ ಟೆಸ್ಟ್ ತಡದಿಂದ ಹೊರ ಬಿದ್ದಿರುವುದು ಪ್ರವಾಸಿ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
IND vs WI: ಭಾರತ ವಿರುದ್ದದ ಟೆಸ್ಟ್ ಸರಣಿಯಿಂದ ಶಮರ್ ಜೋಸೆಫ್ ಔಟ್!
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಆಲ್ಜಾರಿ ಜೋಸೆಫ್ ಮತ್ತು ಶಮರ್ ಜೋಸೆಫ್ ಪ್ರಮುಖ ಆಟಗಾರರಾಗಿದ್ದರು. ಜೇಡನ್ ಸೀಲ್ಸ್ ಜೊತೆಗೆ ಈ ಮೂವರು ಬೌಲರ್‌ಗಳು ಪ್ರವಾಸಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಅವರ ನಿರ್ಗಮನದೊಂದಿಗೆ ಪ್ರವಾಸಿ ತಂಡ, ಭಾರತದ ವಿರುದ್ಧ ವೇಗದ ವಿಭಾಗವನ್ನು ಮುಂದುವರಿಸುತ್ತದೆಯೇ ಅಥವಾ ಸ್ಪಿನ್ ಸ್ನೇಹಿ ಸಂಯೋಜನೆಯನ್ನು ಆರಿಸಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
Squad Update 🚨
— Windies Cricket (@windiescricket) September 29, 2025
Alzarri Joseph has been ruled out of the upcoming test series against India due to a lower back injury.
After complaints of discomfort, scans revealed a degeneration of the previously resolved lower back injury. pic.twitter.com/k4DfzLb0e7
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲನೇ ಪಂದ್ಯ ಅಕ್ಟೋಬರ್ 2 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗುವ ಮೂಲಕ ಟೆಸ್ಟ್ ಸರಣಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯ ಪಂದ್ಯ ನವದೆಹಲಿ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ಮೂಲಕ ಭಾರತ ತಂಡದ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆವೃತ್ತಿಯ ಅಭಿಯಾನ ಆರಂಭವಾಗಲಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡ
ರಾಸ್ಟನ್ ಚೇಸ್ (ನಾಯಕ), ಜೊಮೆಲ್ ವಾರಿಕನ್ (ಉಪ ನಾಯಕ), ಕೆವ್ಲನ್ ಆಂಡರ್ಸನ್, ಅಲಿಕ್ ಆಥನಾಝೆ, ಜಾನ್ ಕ್ಯಾಂಬೆಲ್, ತ್ಯಾಗಿನರೇನ್ ಚಂದ್ರಪಾಲ್, ಜಸ್ಟಿನ್ ಗ್ರೇವ್ಸ್, ಶೇಯ್ ಹೋಪ್, ಟೆವಿನ್ ಇಮ್ಲಾಚ್, ಜೆಡಾಯ್ ಬ್ಲೇಡ್ಸ್, ಜೊಹಾನ್ ಲೇನ್, ಬ್ರೆಂಡನ್ ಕಿಂಗ್, ಆಂಡರ್ಸನ್ ಫಿಲಿಪ್, ಖ್ಯಾರಿ ಫಿಯರಿ, ಜೇಡನ್ ಸೀಲ್ಸ್