ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sridevi Byrappa: ತಮ್ಮ ಕುಟುಂಬದ ಮಹಿಳೆಗೆ ಅನ್ಯಾಯವಾದಾಗ ನೀವು ಏನು ಮಾಡುತ್ತಿದ್ರಿ?; ರಮ್ಯಾ ಪರ ನಿಂತ ನಟ ಶಿವಣ್ಣ, ವಿನಯ್‌ಗೆ ಯುವ ಪತ್ನಿ ಶ್ರೀದೇವಿ ಪ್ರಶ್ನೆ

Sridevi Byrappa: ಅಸಭ್ಯ ಕಮೆಂಟ್‌ ಮಾಡಿದ್ದರಿಂದ ದರ್ಶನ್‌ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ದೂರು ನೀಡಿದ್ದರು. ಈ ವಿಚಾರದಲ್ಲಿ ರಮ್ಯಾಗೆ ನಟ ಶಿವರಾಜ್‌ ಕುಮಾರ್‌, ವಿನಯ್‌ ರಾಜ್‌ಕುಮಾರ್‌ ಬೆಂಬಲ ಸೂಚಿಸಿದ್ದರು. ತನಗೆ ಅನ್ಯಾಯವಾದಾಗ ಯಾರೂ ದನಿಯೆತ್ತಲಿಲ್ಲ. ಈ ನಟಿ ರಮ್ಯಾಗೆ ಬೆಂಬಲ ಸೂಚಿಸಿದ್ದಾರೆ ಎಂದು ಯುವ ಪತ್ನಿ ಶ್ರೀದೇವಿ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ರಮ್ಯಾ ಪರ ನಿಂತ ಶಿವಣ್ಣ, ವಿನಯ್‌ ವಿರುದ್ಧ ಯುವ ಪತ್ನಿ ಶ್ರೀದೇವಿ ಅಸಮಾಧಾನ!

Prabhakara R Prabhakara R Jul 29, 2025 6:20 PM

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಧ್ವನಿ ಎತ್ತಿದ್ದ ನಟಿ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಕೆಟ್ಟ ಕಮೆಂಟ್‌ಗಳನ್ನು ಹಾಕಿದ್ದರು. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ನಟಿ ರಮ್ಯಾ ದೂರು ನೀಡಿದ್ದರು. ಆದರೆ, ಈ ಪ್ರಕರಣದಲ್ಲಿ ರಮ್ಯಾ ಪರ ನಿಂತ ನಟ ಶಿವಣ್ಣ, ವಿನಯ್‌ ರಾಜ್‌ಕುಮಾರ್‌ ವಿರುದ್ಧ ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ (Sridevi Byrappa) ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಮಹಿಳೆಯರನ್ನು ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲಾ ನಡೆಯುವಾಗ ಮಾತನಾಡದೇ ಸುಮ್ಮನೆ ಇದ್ರಲ್ಲಾ? ಅವಾಗ ನಿದ್ದೆ ಮಾಡ್ತಾ ಇದ್ರ ಎಲ್ಲಾ ಎಂದು ಶ್ರೀದೇವಿ ಪ್ರಶ್ನಿಸಿದ್ದಾರೆ.

Sridevi Byrappa  (1)

2019ರಲ್ಲಿ ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಅವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ವಿವಾಹ ಮಹೋತ್ಸವ ನೆರವೇರಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಆದರೆ, ನಟ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ್​ ಕುಮಾರ್​ ಅವರು ಕಳೆದ ವರ್ಷ ಜೂನ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಶ್ರೀದೇವಿ ಭೈರಪ್ಪ ಮೂಲತಃ ಮೈಸೂರಿನವರು. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.

ಯುವರಾಜ್‌ಕುಮಾರ್ ವಿರುದ್ದ ಪತ್ನಿ ಶ್ರೀದೇವಿ ಭೈರಪ್ಪ ಅವರು ವಿವಿಧ ಆರೋಪ ಮಾಡಿದ್ದರು. ಇದೀಗ ತನಗೆ ದೊಡ್ಮನೆಯಿಂದ ನ್ಯಾಯ ಸಿಕ್ಕಿಲ್ಲ. ಹೆಣ್ಣಿನ ನೋವಿಗೆ ಆಗ ಯಾರೂ ಸ್ಪಂದಿಸಿಲ್ಲ ಎಂಬರ್ಥದಲ್ಲಿ ಶ್ರೀದೇವಿ ಪೋಸ್ಟ್ ಹಂಚಿಕೊಂಡಿದ್ದಾರೆ.

ರಮ್ಯಾ vs ದರ್ಶನ್‌ ಫ್ಯಾನ್ಸ್‌ ಬಗ್ಗೆ ಶಿವಣ್ಣ ಏನು ಹೇಳಿದ್ದರು?

ನಟಿ ರಮ್ಯಾ (Actress Ramya) ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್‌ ಫ್ಯಾನ್ಸ್‌ ಅಸಭ್ಯ ಕಮೆಂಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ರಮ್ಯಾಗೆ ನಟ ಶಿವರಾಜ್‌ ಕುಮಾರ್‌ ಬೆಂಬಲ ಸೂಚಿಸಿದ್ದರು. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ; ಅದನ್ನು ನಾವು ಸಹಿಸಬಾರದು ಎಂದು ತಿಳಿಸಿದ್ದರು.

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದ ಶಿವರಾಜ್‌ ಕುಮಾರ್‌ ಅವರು, ನಟಿ ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ; ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ.

ಈ ಸುದ್ದಿಯನ್ನೂ ಓದಿ | Actor Pratham: ಆಮರಣಾಂತ ಉಪವಾಸಕ್ಕೆ ಪ್ರಥಮ್ ನಿರ್ಧಾರ; ಹಲ್ಲೆ ಯತ್ನದ ಬಗ್ಗೆ ಸ್ಪಷ್ಟನೆ ನೀಡಲು ನಟ ದರ್ಶನ್‌ಗೆ ಆಗ್ರಹ

ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ, ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿಂದಿಸಿ, ದ್ವೇಷ- ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ, ರಮ್ಯಾ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ ಎಂದು ನಟ ಶಿವರಾಜ್‌ಕುಮಾ‌ರ್ ಮತ್ತು ಗೀತಾ ಶಿವರಾಜ್‌ಕುಮಾ‌ರ್ ತಿಳಿಸಿದ್ದರು.