Nagara Panchami: ನಾಗರಪಂಚಮಿ ಅಂಗವಾಗಿ ಹುತ್ತ ಮತ್ತು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ವಿಶೇಷ ಪೂಜೆ
ನಾಗ ಶ್ರೀಸುಬ್ರಹ್ಮಣ್ಯಸ್ವಾಮಿ ಒಂದು ಪ್ರತೀಕವಾಗಿದೆ. ಈದಿನ ನಾಗ ದೇವರಿಗೆ ಪೂಜಿಸಿದರೆ ಸಂತಾನ ಭಾಗ್ಯ, ವಿವಾಹ ದೋಷ ಪರಿಹಾರ, ರೋಗರುಜಿನ ನಿವಾರಣೆಯಾಗಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯಲಿದೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಿತು.

ನಾಗರಪಂಚಮಿ ಪ್ರಯುಕ್ತ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜೆಗಳು ನಡೆಯಿತು. ಬೆಳಗ್ಗೆಯಿಂದಲೇ ಮಹಿಳೆಯರು ಸುಬ್ರಹ್ಮಣ್ಯ ನಾಗರಕಲ್ಲು ಹಾಗೂ ಹುತ್ತಗಳಿಗೆ ಪೂಜೆ ಸಲ್ಲಿಸಿ, ಹಾಲು ಎರೆದು ಪ್ರಾರ್ಥಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಚಿಕ್ಕಬಳ್ಳಾಪುರ : ನಾಗರಪಂಚಮಿ ಪ್ರಯುಕ್ತ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜೆಗಳು ನಡೆಯಿತು. ಬೆಳಗ್ಗೆಯಿಂದಲೇ ಮಹಿಳೆಯರು ಸುಬ್ರಹ್ಮಣ್ಯ ನಾಗರಕಲ್ಲು ಹಾಗೂ ಹುತ್ತಗಳಿಗೆ ಪೂಜೆ ಸಲ್ಲಿಸಿ, ಹಾಲು ಎರೆದು ಪ್ರಾರ್ಥಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಶ್ರಾವಣಮಾಸದ ಶುಕ್ಲ ಪP??À ಪಂಚಮಿಯಂದು ಆಚರಿಸುವ ನಾಗರಪಂಚಮಿಯಂದು ವಿಶೇಷ ವಾಗಿ ನಾಗ ದೇವರಿಗೆ ಪೂಜೆ ಮಾಡುತ್ತಾರೆ. ನಾಗ ಶ್ರೀಸುಬ್ರಹ್ಮಣ್ಯಸ್ವಾಮಿ ಒಂದು ಪ್ರತೀಕವಾಗಿದೆ. ಈದಿನ ನಾಗ ದೇವರಿಗೆ ಪೂಜಿಸಿದರೆ ಸಂತಾನ ಭಾಗ್ಯ, ವಿವಾಹ ದೋಷ ಪರಿಹಾರ, ರೋಗರುಜಿನ ನಿವಾರಣೆಯಾಗಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯಲಿದೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಿತು.
ಇದನ್ನೂ ಓದಿ: Vishwavani Editorial: ಹದ್ದಿನ ಕಣ್ಣಿಗೆ ಧೂಳು ಬಿದ್ದಿತ್ತೇ?
ನಗರದ ಸುಬ್ಬರಾಯನಪೇಟೆಯಲ್ಲಿನ ಪುರಾಣ ಪ್ರಸಿದ್ಧ ಶ್ರೀಸುಬ್ರಹ್ಮಣ್ಯಸ್ವಾಮಿ ದೇವಾಲಯ, ಎಚ್‌ಎಸ್ ಗಾರ್ಡನ್‌ನಲ್ಲಿರುವ ಶ್ರೀ ಸತ್ಯ ಸಾಯಿ ದೇವಾಲಯಗಳಲ್ಲಿರುವ ನಾಗರ ಕಲ್ಲು ಹಾಗೂ ನಗರಹೊರವಲಯದ ನಾಗಲಮುದ್ದಮ್ಮ ದೇವಾಲಯ ಸೇರಿದಂತೆ ವಿವಿಧ ದೇವಾಲಯ, ಅಶ್ವತ್ಥ ಕಟ್ಟೆಗಳ ಬಳಿ ಬೆಳಗ್ಗೆಯಿಂದಲೇ ಮಹಿಳೆಯರು ಗುಂಪಾಗಿ ಕೂಡಿಕೊಂಡು ನಾಗ ಮೂರ್ತಿಗಳಿರುವ ದೇವಾಲಯಗಳಿಗೆ ತೆರಳಿ ಪೂಜೆ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.
ಮಕ್ಕಳು, ಯುವತಿಯರು, ಮಹಿಳೆಯರು, ವೃದ್ಧೆಯರು,ನವವಧುವರರು ದೇವಸ್ಥಾನಗಳ ಎದುರಿನ ನಾಗ ಪ್ರತಿಮೆಗಳಿಗೆ, ಹುತ್ತಗಳಿಗೆ ಹಾಲೆರೆದು, ಅರಿಶಿಣದಾರ ಕಟ್ಟಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹುತ್ತ, ನಾಗಮೂರ್ತಿಗಳಿಗೆ ಹಾಲೆರೆದು ನೈವೇದ್ಯ ಸಮರ್ಪಿಸಿದರು.