ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಭಕ್ತಿಯ ಹೊಳೆ ಹರಿಸಿದ ಕೃಷ್ಣ- ಮ್ಯೂಸಿಕ್, ಬ್ಲಿಸ್ ಮತ್ತು ಬಿಯಾಂಡ್‌ ಕಾರ್ಯಕ್ರಮ

ಅಮೇಯಾ ಡಬ್ಲಿ ಅವರ 25 ಅದ್ಭುತ ಕಲಾವಿದರ ತಂಡ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತಮ್ಮ ಅಭೂತಪೂರ್ವ ಸಂಗೀತ ಕಾರ್ಯಕ್ರಮದ ಮೂಲಕ ಶ್ರೀ ಕೃಷ್ಣ ಭಕ್ತರನ್ನು ಭಕ್ತಿಯ ಅಲೆಯಲ್ಲಿ ಮುಳು ಗಿಸಿದರು. ಸಂಗೀತ, ಭಕ್ತಿ ಮತ್ತು ಭಾವನೆಗಳನ್ನು ಸರಾಗವಾಗಿ ಬೆರೆಸುವುದಕ್ಕೆ ಹೆಸರುವಾಸಿಯಾಗಿದ್ದ ಅವರು ಕೇವಲ ಸಂಗೀತ ಕಚೇರಿಯನ್ನು ನೀಡಲಿಲ್ಲ

ಕೃಷ್ಣ- ಮ್ಯೂಸಿಕ್, ಬ್ಲಿಸ್ ಮತ್ತು ಬಿಯಾಂಡ್‌ ಕಾರ್ಯಕ್ರಮ

Ashok Nayak Ashok Nayak Jul 29, 2025 11:58 PM

ಬೆಂಗಳೂರು: ಪ್ರಸಿದ್ಧ ಗಾಯಕ ಅಮೆಯಾ ಡಬ್ಲಿ ಭಕ್ತಿ ಸಂಗೀತದ ಮೂಲಕ ನಗರದಲ್ಲಿ ಶ್ರೀ ಕೃಷ್ಣ ಭಕ್ತರ ಮನತಣಿಸಿದರು. ವೈಟ್‌ಫೀಲ್ಡ್‌ನ ಎಮ್‌ಎಲ್‌ಆರ್‍‌ ಕನ್ವೆನ್‌ಶನ್‌ ಸೆಂಟರ್‍‌ನಲ್ಲಿ “ಕೃಷ್ಣ- ಮ್ಯೂಸಿಕ್, ಬ್ಲಿಸ್ ಮತ್ತು ಬಿಯಾಂಡ್’ ಎಂಬ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು.

ಅಮೇಯಾ ಡಬ್ಲಿ ಅವರ 25 ಅದ್ಭುತ ಕಲಾವಿದರ ತಂಡ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತಮ್ಮ ಅಭೂತಪೂರ್ವ ಸಂಗೀತ ಕಾರ್ಯಕ್ರಮದ ಮೂಲಕ ಶ್ರೀ ಕೃಷ್ಣ ಭಕ್ತರನ್ನು ಭಕ್ತಿಯ ಅಲೆಯಲ್ಲಿ ಮುಳುಗಿಸಿದರು. ಸಂಗೀತ, ಭಕ್ತಿ ಮತ್ತು ಭಾವನೆಗಳನ್ನು ಸರಾಗವಾಗಿ ಬೆರೆಸುವುದಕ್ಕೆ ಹೆಸರುವಾಸಿ ಯಾಗಿದ್ದ ಅವರು ಕೇವಲ ಸಂಗೀತ ಕಚೇರಿಯನ್ನು ನೀಡಲಿಲ್ಲ, ಬದಲಾಗಿ ಪ್ರತಿಯೊಬ್ಬ ಕೇಳುಗ ರಿಗೂ ಅಂತರಾತ್ಮ ಸ್ಪರ್ಶಿಸುವ ಭಕ್ತಿಯ ಅನುಭವವನ್ನು ನೀಡಿದ್ದಾರೆ.

ಇದನ್ನೂ ಓದಿ: Bengaluru Power Cut: ಜು.30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಗಾಯಕ ಅಮೇಯಾ ಡಬ್ಲಿ “ ನಾನು ವೇದಿಕೆಯ ಮೇಲೆ ನಡೆಯುವಾಗ, ಆ ಕ್ಷಣಕ್ಕೆ ಶರಣಾಗುತ್ತೇನೆ. ಪ್ರೇಕ್ಷಕರು ನನ್ನ ಮಾರ್ಗದರ್ಶಕರಾಗುತ್ತಾರೆ, ನಾವು ಒಟ್ಟಾಗಿ ಭಕ್ತಿಯ ಕ್ಷಣವನ್ನು ಸೃಷ್ಟಿಸುತ್ತೇವೆ. ಅದು ಕೃಷ್ಣನ ಮ್ಯಾಜಿಕ್. ಇದು ಕೇವಲ ಸಂಗೀತವಲ್ಲ, ಇದು ಹಂಚಿಕೊಂಡ ಆಧ್ಯಾತ್ಮಿಕ ಅನುಭವ” ಎಂದು ಹೇಳಿದರು.

ಭಾರತದ ಸಶಸ್ತ್ರ ಪಡೆಗೆ ಹಾಡುವುದರಿಂದ ಇಡೀ ಜಗತ್ತಿನ ಕೇಳುಗರ ಮೆಚ್ಚುಗೆ ಪಡೆದಿರುವ ಅಮೆಯಾ ಡಬ್ಲಿ ತಮ್ಮ ಅದ್ಭುತವಾದ ದನಿ ಮತ್ತು ಕಲೆಯ ಮೂಲಕ ಪ್ರತಿಯೊಬ್ಬ ಕೇಳುಗನ ಮನದಲ್ಲಿ ಅಚ್ಚಾಗಿ ಉಳಿಯುವ ಸಂಗೀತವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.