Narayana Guru Jayanti: ಎಲ್ಲರೂ ಸ್ವಾಭಿಮಾನದ ಬದುಕು ನಡೆಸಬೇಕು: ಕೆ.ಎನ್.ರಾಜಣ್ಣ
Madhugiri News: ಮಧುಗಿರಿ ಪಟ್ಟಣದ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ತಾಲೂಕು ಆರ್ಯ ಈಡಿಗರ ಸಂಘದ ವತಿಯಿಂದ ಶ್ರೀ ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಾಸಕ ಕೆ.ಎನ್.ರಾಜಣ್ಣ ಮಾತನಾಡಿದ್ದಾರೆ.

-

ಮಧುಗಿರಿ: ಯುವ ಜನತೆ ರಾಜಕೀಯಕ್ಕೆ ಬರಬೇಕು, ಹೋರಾಟದ ಮನೋಭಾವನೆ ಬೆಳಿಸಿಕೊಳ್ಳಬೇಕು. ಎಲ್ಲರೂ ಸ್ವಾಭಿಮಾನದ ಬದುಕು ನಡೆಸಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ಸಲಹೆ ನೀಡಿದರು. ಪಟ್ಟಣದ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ತಾಲೂಕು ಆರ್ಯ ಈಡಿಗರ ಸಂಘದ ವತಿಯಿಂದ ಶ್ರೀ ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತೋತ್ಸವ (Narayana Guru Jayanti) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಗಾರಪ್ಪ ಹಾಗೂ ಆರ್.ಎಲ್. ಜಾಲಪ್ಪ ಅವರು ಮೆಚ್ಚುವಂತಹ ನಾಯಕರಾಗಿದ್ದು, ಅವರು ಮುಂದಿನ ಪೀಳಿಗೆ, ಸಮಾಜದ ಒಳಿತಿಗಾಗಿ ದುಡಿದವರು. ಅವರು ನಮಗೆಲ್ಲ ಮಾದರಿಯಾಗಿದ್ದಾರೆ.
ಹೆಣ್ಣು ಮಕ್ಕಳಿಗಾಗಿ ರಾತ್ರಿ ಶಾಲೆ ಪ್ರಾರಂಭಿಸಿ, ಪೂರ್ವಜರ ಸಂದೇಶಗಳನ್ನು ಪಾಲಿಸಿ ಯುವ ಪೀಳಿಗೆಗೆ ನಾರಾಯಣ ಗುರುಗಳ ಪರಿಚಯ ಮಾಡಿಸಿ ಇತಿಹಾಸ ತಿಳಿಸುವಂತಾಗಬೇಕು, ರಾಜಕೀಯದಲ್ಲಿ ಏರು ಪೇರು ಸಾಮಾನ್ಯವಾಗಿರುತ್ತೆ, ಮಹನೀಯರ ತತ್ವ ಸಿದ್ದಾಂತಗಳು ಮೆಚ್ಚುವಂಥದ್ದು.
ಈಡಿಗ ಸಮಾಜಕ್ಕೆ ಮುಂದಿನ ಬಾರಿ ಸ್ವಂತ ಕಟ್ಟಡದಲ್ಲಿ ಜಯಂತಿ ಆಚರಣೆ ಮಾಡಲು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ನಿಮ್ಮ ಮತ ಭಿಕ್ಷೆಯನ್ನು ಮರೆಯಲಾರೆ
ಸಚಿವನಾಗಿ ಅಧಿಕಾರ ಅನುಭವಿಸಿದ್ದು, ಸದ್ಯ ಆ ಸ್ಥಾನ ಹೋಗಿದೆ. ಆದರೆ ಶಾಸಕನಾಗಿರುವುದಕ್ಕೆ ನೀವು ನೀಡಿದ ಮತ ಭಿಕ್ಷೆಯನ್ನು ನಾನು ಮರೆಯಲಾರೆ. ಮಧುಗಿರಿ ಸಾಮಾನ್ಯ ಕ್ಷೇತ್ರವಾಗಿದ್ದರೂ ಸಹ ಎಲ್ಲಾ ಜನಾಂಗದವರು ನನಗೆ ಮತ ನೀಡಿ ಗೆಲ್ಲಿಸಿದ್ದೀರಿ.
ರಾಜಕೀಯದಲ್ಲಿ ಅಧಿಕಾರ ಪಡೆದು, ಯುವಕರು ಹೋರಾಟದ ಮನೋಭಾವನೆ ಬೆಳಿಸಿಕೊಳ್ಳಬೇಕು. ಕುಲ ಕಸುಬಿನ ಜತೆಗೆ ಕರಕುಶಲ ಕೆಲಸ ರೂಢಿಸಿಕೊಳ್ಳಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುತ್ತಿರುವ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.
ಸಾಹಿತಿ ಮಲನ ಮೂರ್ತಿ ಮಾತನಾಡಿ, ಪ್ರೀತಿ ವಿಶ್ವಾಸ ನಂಬಿಕೆಗೆ ಹೆಸರಾದವರು ಕೆ.ಎನ್. ರಾಜಣ್ಣ ಎಂದು ಬಣ್ಣಿಸಿದರು.
ಕಿರುತೆರೆ ನಿರ್ಮಾಪಕ ರವಿ ಆರ್ ಗರಣಿ ಮಾತನಾಡಿ, ನೇರ ನುಡಿಯ ಜನರಿಗಾಗಿ ಇರುವ ನಾಯಕ ಕೆ. ಎನ್. ರಾಜಣ್ಣ. ಕಿರುತೆರೆಯಲ್ಲಿ ಕೆಲಸ ಮಾಡುತ್ತಿರುವವರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಬಂಗಾರಪ್ಪ ನಂತರದ ಅಹಿಂದ ಶಕ್ತಿ ಅಂದರೆ ರಾಜಣ್ಣ, ಕಟ್ಟಕಡೆಯ ವ್ಯಕ್ತಿಗೆ ಶಕ್ತಿ ಯಾಗಿರುವ ಕೆಎನ್‌ಆರ್ ಅವರಿಗೆ ಬೆಂಬಲಿಸಿ ಕೋರಿದರು.
ತಹಸೀಲ್ದಾರ್ ಎಚ್. ಶ್ರೀನಿವಾಸ ಮಾತನಾಡಿ, ವಿದ್ಯಾಭ್ಯಾಸ ಕೊಡಿಸಬೇಕು ಸರಕಾರದ ಯೋಜನೆಯನ್ನು ಪಡೆದು ಅಭಿವೃದ್ದಿಯಾಗಿ ಕಲಿತ ಶಾಲೆ ಹಾಗೂ ಊರನ್ನ ಮರೆಯಬಾರದು, ಸತ್ಯ ಹೇಳುದು ಕಷ್ಟ ಯಾರೇ ಬಂದ್ರು ಕಾನೂನು ಪ್ರಕಾರ ಸರ್ಕಾರ ದ ಸವಲತ್ತು ಮಾಡಿ ಎಂಬ ಮಾತ್ತನ್ನೂ ಅಧಿಕಾರಿಗಳಿಗೆ ರಾಜಣ್ಣ ರವರು ಸಭೆಗಳಲ್ಲಿ ತಿಳುವಳಿಕೆ ನೀಡಿದ್ದರು ಎಂದು ಸ್ಮರಿಸಿಕೊಂಡರು.