ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಈಶ ಗ್ರಾಮೋತ್ಸವ; ಪುರುಷರ ವಾಲಿಬಾಲ್‌ನಲ್ಲಿ ಹೆಗ್ಗಡಿಹಳ್ಳಿ, ಮಹಿಳೆಯರ ಥ್ರೋಬಾಲ್‌ನಲ್ಲಿ ಮರಗೋಡು ತಂಡ ಚಾಂಪಿಯನ್‌

Isha Gramotsavam 2025: 17ನೇ ಆವೃತ್ತಿಯಲ್ಲಿ, ಈಶ ಗ್ರಾಮೋತ್ಸವವು ಗ್ರಾಮೀಣ ಚೈತನ್ಯದ ಆಚರಣೆಯಾಗಿದ್ದು, ರೈತರು, ದಿನಗೂಲಿ ಕಾರ್ಮಿಕರು ಮತ್ತು ಗೃಹಿಣಿಯರು ಸೇರಿದಂತೆ ಗ್ರಾಮೀಣ ಜನಸಾಮಾನ್ಯರು ಹೊರಬಂದು ಕ್ರೀಡೆಗಳ ಆಚರಣಾತ್ಮಕ ಮತ್ತು ಕ್ರೀಡಾಮನೋಭಾವದ ಶಕ್ತಿಯನ್ನು ಅನುಭವಿಸಲು ಅವಕಾಶ ನೀಡುತ್ತದೆ ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದ್ದಾರೆ.

ಕ್ರೀಡೆಗಳನ್ನು ಹಳ್ಳಿಗಳಿಗೆ ಮರಳಿ ತರುವುದೇ ಈಶ ಗ್ರಾಮೋತ್ಸವದ ಉದ್ದೇಶ

-

Prabhakara R Prabhakara R Sep 7, 2025 10:22 PM

ಚಿಕ್ಕಬಳ್ಳಾಪುರ: ಕ್ರೀಡೆಗಳನ್ನು ಹಳ್ಳಿಗಳಿಗೆ ಮರಳಿ ತರುವುದು, ಆ ಮೂಲಕ ಹಳ್ಳಿಗರನ್ನು ಸಂತೋಷಿಗಳನ್ನಾಗಿ ಮಾಡಿ ಗ್ರಾಮೀಣ ಜೀವನವನ್ನು ಸುಗಮಗೊಳಿಸುವುದು ಈಶ ಗ್ರಾಮೀಣ ಕ್ರೀಡೋತ್ಸವದ (Isha Gramotsavam 2025) ಉದ್ದೇಶವಾಗಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.

ತಾಲೂಕಿನ ಆವಲಗುರ್ಕಿ ಬಳಿಯ ಈಶ ಧ್ಯಾನ ಕೇಂದ್ರದ ಆವರಣದಲ್ಲಿ ಕರ್ನಾಟಕದ ಪ್ರಾದೇಶಿಕ ವಿಭಾಗೀಯ ಫೈನಲ್‌ ಪಂದ್ಯಗಳಲ್ಲಿ ಅವರು ಮಾತನಾಡಿದರು.

ನಾವು ಗ್ರಾಮಗಳಲ್ಲಿ ಕ್ರೀಡೆಯನ್ನು ಮರಳಿ ತರುವ ಮೂಲಕ ಗ್ರಾಮಸ್ಥರನ್ನು ಕ್ರೀಡಾಮನೋಭಾವವುಳ್ಳವರನ್ನಾಗಿಸಲು ಮತ್ತು ಅವರ ಜೀವನದ ಹೊರೆಯನ್ನು ನಿರಾಳವಾಗಿಸಲು ಬಯಸುತ್ತೇವೆ ಎಂದು ಸದ್ಗುರು ಜಗ್ಗಿವಾಸುದೇವ್ ಭಾನುವಾರ ಸದ್ಗುರು ಸನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಕ್ರೀಡೋತ್ಸವ ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾಗಿದೆ ಎಂದು ಹೇಳಿದರು.

ಈಶ ಗ್ರಾಮೋತ್ಸವವು ಗ್ರಾಮೀಣ ಭಾರತದಲ್ಲಿ ಮಾನವ ಚೈತನ್ಯವನ್ನು ಹೆಚ್ಚಿಸುವ ಕುರಿತಾಗಿದೆ. ಅಲ್ಲಿನ ಪರಿಸ್ಥಿತಿಗಳು ಹೇಗಿವೆಯೆಂದರೆ ಸಾಂಪ್ರದಾಯಿಕ ಮನರಂಜನೆ ಮತ್ತು ಸಕ್ರಿಯ ಭಾಗವಹಿಸುವಿಕೆಯ ಅಂಶಗಳು ಕಣ್ಮರೆಯಾಗಿವೆ. ಅಲ್ಲಿದ್ದ ಜಾನಪದ ಸಂಗೀತ ಮತ್ತು ಇತರ ವೈವಿಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ನಾವು ಕ್ರೀಡೆಯನ್ನು ಮತ್ತೆ ತರಲು ಮತ್ತು (ಗ್ರಾಮಸ್ಥರನ್ನು) ಕ್ರೀಡಾಮನೋಭಾವವುಳ್ಳವರನ್ನಾಗಿ ಮಾಡಲು ಬಯಸುತ್ತೇವೆ, ಇದರಿಂದಾಗಿ ಅವರ ಜೀವನದ ಭಾರವು ಹಗುರವಾಗಿ ಹೊರುವಂತಾಗುತ್ತದೆ. ಇದು ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಹೇಳಿದರು.

Isha Gramotsavam   (2)

ಇದೀಗ 17ನೇ ಆವೃತ್ತಿಯಲ್ಲಿ, ಈಶ ಗ್ರಾಮೋತ್ಸವವು ಗ್ರಾಮೀಣ ಚೈತನ್ಯದ ಆಚರಣೆಯಾಗಿದ್ದು, ರೈತರು, ದಿನಗೂಲಿ ಕಾರ್ಮಿಕರು ಮತ್ತು ಗೃಹಿಣಿಯರು ಸೇರಿದಂತೆ ಗ್ರಾಮೀಣ ಜನಸಾಮಾನ್ಯರು ಹೊರಬಂದು ಕ್ರೀಡೆಗಳ ಆಚರಣಾತ್ಮಕ ಮತ್ತು ಕ್ರೀಡಾಮನೋಭಾವದ ಶಕ್ತಿಯನ್ನು ಅನುಭವಿಸಲು ಅವಕಾಶ ನೀಡುತ್ತದೆ. ಆಟಗಾರರು ಕ್ಲಸ್ಟರ್, ವಿಭಾಗೀಯ ಹಂತಗಳಲ್ಲಿ ಸ್ಪರ್ಧಿಸಿದ ನಂತರ ಸೆಪ್ಟೆಂಬರ್ 21ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಆದಿಯೋಗಿಯಲ್ಲಿ ನಡೆಯಲಿರುವ ಅಂತಿಮ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ಪುರುಷರ ವಾಲಿಬಾಲ್ ಆಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಗ್ಗಡಿಹಳ್ಳಿ ಗ್ರಾಮದ ಇಬ್ಬನಿ ತಂಡವು ಚಿಕ್ಕಬಳ್ಳಾಪುರ ಗ್ರಾಮೀಣ ಭಾಗದ ಮರಸನಹಳ್ಳಿ ಪಂಚಾಯಿತಿಯ ಅಪ್ಪು ಬಾಯ್ಸ್ ತಂಡವನ್ನು ಸೋಲಿಸಿ ವಿಭಾಗೀಯ ಚಾಂಪಿಯನ್ ಆಗಿ ಹೊರಹೊಮ್ಮಿತು.



ಮಹಿಳೆಯರ ಥ್ರೋಬಾಲ್‌ನಲ್ಲಿ, ಕೊಡಗಿನ ಮರಗೋಡು ಗ್ರಾಮದ ಬ್ಲ್ಯಾಕ್ ಪ್ಯಾಂಥರ್ಸ್ ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಬಡಗನೂರು ಗ್ರಾಮದ ಶಾಸ್ತರ ಪಡುಮಲೆ (ಕುಡ್ಲ ಸ್ಟ್ರೈಕರ್ಸ್‌) ತಂಡವನ್ನು ಜಯಿಸಿ ವಿಭಾಗೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಜೇತರಿಗೆ ತಲಾ 12,000 ನಗದು ಬಹುಮಾನ ನೀಡಲಾಯಿತು, ಹಾಗೂ ರನ್ನರ್‌ ಅಪ್‌ ತಂಡಗಳಿಗೆ ತಲಾ 8,000 ನೀಡಲಾಯಿತು.

ಭಾನುವಾರ ನಡೆದ ಪ್ರಾದೇಶಿಕ ಫೈನಲ್‌ನಲ್ಲಿ, 18 ಪುರುಷರ ವಾಲಿಬಾಲ್ ತಂಡಗಳು ಮತ್ತು 14 ಮಹಿಳೆಯರ ಥ್ರೋಬಾಲ್ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದವು. ಈ ವರ್ಷ ಕರ್ನಾಟಕದ 18 ಜಿಲ್ಲೆಗಳಿಂದ 7200 ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಕ್ಲಸ್ಟರ್ ಮಟ್ಟದಲ್ಲಿ ಸ್ಪರ್ಧಿಸಿ ವಿಭಾಗೀಯ ಮಟ್ಟವನ್ನು ಪ್ರವೇಶಿಸುವ ಮೂಲಕ ದಾಖಲೆಯ ಭಾಗವಹಿಸುವಿಕೆಗೆ ಸಾಕ್ಷಿಯಾದವು.

ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತು ದಕ್ಷಿಣ ಭಾರತದ ಸ್ಟಾರ್ ನಟಿ ಶ್ರೀನಿಧಿ ಶೆಟ್ಟಿ ಅವರ ಉಪಸ್ಥಿತಿಯು ಪ್ರಾದೇಶಿಕ ಫೈನಲ್ ದಿನದ ಉತ್ಸಾಹವನ್ನು ಇಮ್ಮಡಿಗೊಳಿಸಿದವು. ಪಂದ್ಯಗಳು ಚೈತನ್ಯಭರಿತವಾಗಿ ಪ್ರೇಕ್ಷಕರನ್ನು ಆಕರ್ಷಿಸಿದವು. ಕ್ರೀಡೆ, ಸಂಸ್ಕೃತಿ ಮತ್ತು ಸಮುದಾಯ ಚೇತನದ ರೋಮಾಂಚಕ ಆಚರಣೆಯಲ್ಲಿ ಗ್ರಾಮಗಳು ಮುಖಾಮುಖಿಯಾಗುತ್ತಿದ್ದಂತೆ ಪ್ರೇಕ್ಷಕರು ಹರ್ಷೋತ್ಸಾಹದಿಂದ ಹುರಿದುಂಬಿಸಿದರು.

ಇಬ್ಬರು ಮುಖ್ಯ ಅತಿಥಿಗಳು ವಾಲಿಬಾಲ್ ಮತ್ತು ಥ್ರೋಬಾಲ್ ಅಂಗಳದಲ್ಲಿ ಆಟಗಾರರೊಂದಿಗೆ ಕಣಕ್ಕಿಳಿಯುವ ಮೂಲಕ ಕ್ರೀಡೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ನಂತರ ವಿಜೇತರನ್ನು ಅಭಿನಂದಿಸಿ ಫೈನಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದರು.

2004ರಲ್ಲಿ ಸದ್ಗುರುಗಳು ಚಾಲನೆ ನೀಡಿದ ಈಶ ಗ್ರಾಮೋತ್ಸವವು ವೃತ್ತಿಪರ ಆಟಗಾರರಿಗಾಗಿ ಅಲ್ಲದೇ, ರೈತರು, ಮೀನುಗಾರರು, ದಿನಗೂಲಿ ಕೆಲಸಗಾರರು, ಗೃಹಿಣಿಯರು ಮತ್ತು ಶಾಲಾ ಮಕ್ಕಳು ಸೇರಿದಂತೆ ಗ್ರಾಮೀಣ ಜನಸಾಮಾನ್ಯರು ಮೈದಾನಕ್ಕಿಳಿಯುವಂತೆ ಪ್ರೋತ್ಸಾಹಿಸಿದೆ. ತಂಡಗಳನ್ನು ಅದೇ ಗ್ರಾಮ ಪಂಚಾಯಿತಿಯ ಆಟಗಾರರೊಂದಿಗೆ ಮಾತ್ರ ರಚಿಸಬಹುದು, ಇದು ಸಮುದಾಯಗಳನ್ನು ಒಂದುಗೂಡಿಸುತ್ತದೆ ಮತ್ತು ಸ್ಥಳೀಯರ ಹೆಮ್ಮೆಯ ಸಂಭ್ರಮಾಚರಣೆಗೆ ಕಾರಣವಾಗಿರುವುದನ್ನು ಕಾಣಬಹುದು.

ರಾಷ್ಟ್ರೀಯ ಮಟ್ಟದಲ್ಲಿ, 2025ರ ಈಶ ಗ್ರಾಮೋತ್ಸವವು ಕರ್ನಾಟಕ, ಆಂಧ್ರ ಪ್ರದೇಶ,ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಒಡಿಶಾದಾದ್ಯಂತ 35,000ಕ್ಕೂ ಹೆಚ್ಚು ಗ್ರಾಮಗಳಲ್ಲಿ ವ್ಯಾಪಿಸಿದೆ. ಈ ವರ್ಷ 50,000ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ 50,000ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಸ್ಪರ್ಧಿಸುತ್ತಿದ್ದು 6000ಕ್ಕೂ ಹೆಚ್ಚು ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | ಕೊರಿಯಾವನ್ನು ಮಣಿಸಿ ನಾಲ್ಕನೇ ಏಷ್ಯಾಕಪ್ ಹಾಕಿ ಪ್ರಶಸ್ತಿ ಗೆದ್ದ ಭಾರತ

ಈಶ ಗ್ರಾಮೋತ್ಸವವನ್ನು ಆಯೋಜಿಸುತ್ತಿರುವ ಈಶ ಔಟ್ರೀಚ್‌ನ್ನು ಭಾರತ ಸರ್ಕಾರದ ಯುವಕ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ‘ನ್ಯಾಷನಲ್ ಸ್ಪೋರ್ಟ್ಸ್ ಪ್ರಮೋಷನ್ ಆರ್ಗನೈಸೇಷನ್’ ಎಂದು ಗುರುತಿಸಿದೆ. 2025ರಲ್ಲಿ, ಈ ಉಪಕ್ರಮವು ಬೇರುಮಟ್ಟದಲ್ಲಿ ಕ್ರೀಡೆಗೆ ಅದರ ಅಸಾಧಾರಣ ಕೊಡುಗೆಗಾಗಿ ಪ್ರತಿಷ್ಠಿತ ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರವನ್ನು ಪಡೆದಿರುವುದುದನ್ನು ಇಲ್ಲಿ ಸ್ಮರಿಸಬಹುದು.