Utthana Prabandha Spardhe 2025: ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳ ಆಹ್ವಾನ
ಉತ್ಥಾನ ಮಾಸಪತ್ರಿಕೆಯು ಕಾಲೇಜು (ಪದವಿ ಮತ್ತು ಮೇಲ್ಪಟ್ಟ) ವಿದ್ಯಾರ್ಥಿಗಳಿಗಾಗಿ ಉತ್ಥಾನ ಮಾಸಪತ್ರಿಕೆ ರಾಜ್ಯ ಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ʼಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ವಿಚಾರ, ವಿಶೇಷತೆ ಮತ್ತು ಕೊಡುಗೆʼ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿದೆ.

-

ಬೆಂಗಳೂರು: ಉತ್ಥಾನ ಮಾಸಪತ್ರಿಕೆಯು ಕಾಲೇಜು (ಪದವಿ ಮತ್ತು ಮೇಲ್ಪಟ್ಟ) ವಿದ್ಯಾರ್ಥಿಗಳಿಗಾಗಿ ಉತ್ಥಾನ ಮಾಸಪತ್ರಿಕೆ ರಾಜ್ಯ ಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು (Utthana Prabandha Spardhe 2025) ಆಯೋಜಿಸಿದೆ. ʼಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ವಿಚಾರ, ವಿಶೇಷತೆ ಮತ್ತು ಕೊಡುಗೆʼ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿದೆ. ಕಥೆ ತಲುಪಲು ಅ.25, 2025 ಕೊನೆಯ ದಿನಾಂಕವಾಗಿದೆ. ಆಯ್ಕೆಯಾದ ಪ್ರಬಂಧಗಳಿಗೆ ಮೊದಲನೆಯ ಬಹುಮಾನ ರೂ. 15,000, ಎರಡನೇ ಬಹುಮಾನ ರೂ. 12,000, ಮೂರನೇ ಬಹುಮಾನ ರೂ. 10,000 ಹಾಗೂ ಹತ್ತು ಮೆಚ್ಚುಗೆಯ ಬಹುಮಾನಗಳು ತಲಾ ರೂ. 2,000 ನೀಡಲಾಗುವುದು.
ಪ್ರಬಂಧ ಸ್ಪರ್ಧೆಯ ನಿಯಮಗಳು
- ಈ ಸ್ಪರ್ಧೆಯಲ್ಲಿ ಪದವಿ, ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.
- ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೀತಿಯಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
- ಕಳುಹಿಸುವ ಪ್ರಬಂಧವನ್ನು ಕಾಲೇಜಿ ಪ್ರಾಂಶುಪಾಲರಿಂದ ಅಥವಾ ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.
- ಪ್ರಬಂಧವನ್ನು ಹಾಳೆಯ ಒಂದೆ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು. ಹಾಳೆಗಳನ್ನು ಚಿತ್ರಗಳಿಂದ, ಬಣ್ಣಗಳಿಂದ ಅಲಂಕರಿಸುವುದು ಬೇಡ.
- ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಜತೆಗೆ ಭಾವಚಿತ್ರವೂ ಇರಬೇಕು.
- ಪ್ರಬಂಧವನ್ನು ನುಡಿ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ಪಿಡಿಎಫ್ ಮತ್ತು word file – ಎರಡನ್ನೂ) utthanacompetition@gmail.com – ಈ ವಿಳಾಸಕ್ಕೆ ಇ-ಮೇಲ್ ಮೂಲಕವೂ ಕಳುಹಿಸಬಹುದು. ಜೆರಾಕ್ಸ್/ಪೋಟೋ ಪಿಡಿಎಫ್ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ.
- ಬಹುಮಾನಿತ ಪ್ರಬಂಧಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕನ್ನು ’ಉತ್ಥಾನ’ ವು ಕಾಯ್ದಿರಿಸಿಕೊಂಡಿದೆ.
- ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಬಂಧವನ್ನು ಹಿಂದಿರುಗಿಸುವ ವ್ಯವಸ್ಥೆ ಇರುವುದಿಲ್ಲ.
- ತೀರ್ಪುಗಾರರ ಮೌಲ್ಯನಿರ್ಣಯದ ನಂತರ ಫಲಿತಾಂಶವನ್ನು ’ಉತ್ಥಾನ’ ದಲ್ಲಿ ಪ್ರಕಟಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರ ವ್ಯವಹಾರ ಸಾಧ್ಯವಾಗದು.
- ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | IPPB Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿದೆ 348 ಹುದ್ದೆ; ಹೀಗೆ ಅಪ್ಲೈ ಮಾಡಿ
ಪ್ರಬಂಧ ಕಳುಹಿಸಬೇಕಾದ ವಿಳಾಸ: ಸಂಪಾದಕರು, ‘ಉತ್ಥಾನʼ ವಾರ್ಷಿಕ ಪ್ರಬಂಧ ಸ್ಪರ್ಧೆ– 2025, ‘ಕೇಶವ ಶಿಲ್ಪʼ, ಕೆಂಪೇಗೌಡ ನಗರ, ಬೆಂಗಳೂರು- 560004 ದೂರವಾಣಿ: 7795441894 ಇ-ಮೇಲ್ ವಿಳಾಸ: utthanacompetition@gmail.com