Wild Tiger Safari Movie: ʼವೈಲ್ಡ್ ಟೈಗರ್ ಸಫಾರಿʼ ಚಿತ್ರದ ವಿಲನ್ ಪಾತ್ರದ ಫಸ್ಟ್ ಲುಕ್ ರಿವೀಲ್
Sandalwood News: ಚಂದ್ರಮೌಳಿ ನಿರ್ದೇಶನದ ʼವೈಲ್ಡ್ ಟೈಗರ್ ಸಫಾರಿʼ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದ್ದು, ಸಿನಿಮಾದ ವಿಲನ್ ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಶಿಥಿಲ್ ಪೂಜಾರಿ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಸುಶಾಂತ್ ಪೂಜಾರಿ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ.

-

ಬೆಂಗಳೂರು: ʼವೈಲ್ಡ್ ಟೈಗರ್ ಸಫಾರಿʼ (Wild Tiger Safari Movie) ಹೆಸರೇ ಹೇಳುವಂತೆ ಇದೊಂದು ವೈಲ್ಡ್ ಟೈಗರ್‌ಗಳಂತಿರೋ ಮನುಷ್ಯರ ಕಥೆ ಹೇಳುವ ಸಿನಿಮಾ. ʼಕೆಜಿಎಫ್ʼ ಡೈಲಾಗ್ ರೈಟರ್ ಚಂದ್ರಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ. ʼವೈಲ್ಡ್ ಟೈಗರ್ ಸಫಾರಿʼ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದ್ದು ಸದ್ಯ ಸಿನಿಮಾ ತಂಡ ಚಿತ್ರದಲ್ಲಿ ಅತ್ಯಂತ ವೈಲ್ಡ್ ಎನ್ನಿಸಿಕೊಳ್ಳೋ ಟೈಗರ್ ಅಂದರೆ ಸಿನಿಮಾದ ವಿಲನ್ ಪಾತ್ರದ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.
ಶಿಥಿಲ್ ಪೂಜಾರಿ ನಾಯಕನಾಗಿ ಅಭಿನಯಿಸುತ್ತಿರುವ ʼವೈಲ್ಡ್ ಟೈಗರ್ ಸಫಾರಿʼ ಸಿನಿಮಾದಲ್ಲಿ ಸುಶಾಂತ್ ಪೂಜಾರಿ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಸುಶಾಂತ್, ಅಮರ್ ಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪಾತ್ರದ ಫಸ್ಟ್ ಲುಕ್ ಪೋಸ್ಟರ್ ರಿವಿಲ್ ಆಗಿದೆ. ಪೋಸ್ಟರ್ ಸಖತ್ ವೈಲ್ಡ್ ಆಗಿದ್ದು ಕ್ರೂರತೆ ಎದ್ದು ಕಾಣ್ತಿದೆ. ಇಡೀ ಸಿನಿಮಾದಲ್ಲಿ ಹೆಚ್ಚು ಕ್ರೂರತ್ವ ತುಂಬಿರುವ ಪಾತ್ರ ಇದಾಗಿದ್ದು ಹುಲಿಗಳ ಸಾಮ್ರಾಜ್ಯದಲ್ಲಿ ಅತೀ ಹೆಚ್ಚು ಕ್ರೂರ ಹುಲಿ ಅಂದರೆ ಇದೇ ಅನ್ನುವ ರೀತಿಯಲ್ಲಿ ಈ ಪಾತ್ರದ ಪರಿಚಯ ಮಾಡ್ತಾರೆ ನಿರ್ದೇಶಕ ಚಂದ್ರಮೌಳಿ.

ಇವರ ಜತೆಗೆ ಸಿನಿಮಾದಲ್ಲಿ ಕನ್ನಡ ಸೇರಿದಂತೆ ಬಾಲಿವುಡ್ ಸ್ಟಾರ್‌ಗಳು ಕೂಡ ಅಭಿನಯಿಸುತ್ತಿದ್ದಾರೆ. ʼವೈಲ್ಡ್ ಟೈಗರ್ ಸಫಾರಿʼ ಸಿನಿಮಾ ಕನ್ನಡ ಹಾಗೂ ಹಿಂದಿಯಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ಶಿಥಿಲ್ ಪೂಜಾರಿ ಸೇರಿದಂತೆ ಬಾಲಿವುಡ್‌ನ ಜನಪ್ರಿಯ ಡ್ಯಾನ್ಸರ್‌ಗಳಾದ ಸುಶಾಂತ್ ಪೂಜಾರಿ, ಧರ್ಮೇಶ್ ಇನ್ನು ಅನೇಕರು ಅಭಿನಯಿಸಿದ್ದಾರೆ. ನಿಮಿಕಾ ರತ್ನಾಕರ್ ನಾಯಕಿ. ಚಿತ್ರಕ್ಕೆ ಚಂದ್ರಮೌಳಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣವಿದೆ.
ಈ ಸುದ್ದಿಯನ್ನೂ ಓದಿ | Deepavali Jewel Fashion 2025: ದೀಪಾವಳಿ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಆಭರಣಗಳು
ʼವೈಲ್ಡ್ ಟೈಗರ್ ಸಫಾರಿʼ ಸಿನಿಮಾವನ್ನು ವಿಕೆ ಫಿಲಂಸ್ ಅಡಿಯಲ್ಲಿ ವಿನೋದ್ ಕುಮಾರ್ ನಿರ್ಮಾಣ ಮಾಡುತ್ತಿದ್ದು ಗುರುದತ್ತ ಗಾಣಿಗ ಹಾಗೂ ಕಿಶೋರ್ ಕುಮಾರ್ ಸಹ ನಿರ್ಮಾಪಕರಾಗಿದ್ದಾರೆ.