ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ED Sheeran: ಬೆಂಗಳೂರಿನಲ್ಲಿ ಹಾಡು ಹಾಡುತ್ತಿದ್ದ ಎಡ್‌ ಶೀರನ್‌ರನ್ನು ತಡೆದ ಪೊಲೀಸರು!

Police stop Ed Sheeran’s street performance: ವಿಶ್ವದ ಪ್ರಖ್ಯಾತ ಬ್ರಿಟಿಷ್‌ ಗಾಯಕ ಇಡ್‌ ಶೀರನ್‌ ಅವರು ಪ್ರಸ್ತುತ ಭಾರತದ ಪ್ರವಾಸದಲ್ಲಿದ್ದಾರೆ. ಭಾನುವಾರ ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ರಸ್ತೆ ಬದಿಯಲ್ಲಿ ಹಾಡು ಹಾಡುತ್ತಿದ್ದ ವೇಳೆ ಎಡ್‌ ಶೀರನ್‌ ಅವರನ್ನು ಪೊಲೀಸ್‌ ಸಿಬ್ಬಂದಿ ತಡೆದಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಬೆಂಗಳೂರಿನ ರಸ್ತೆಬದಿಯಲ್ಲಿ  ಹಾಡು ಹಾಡಿದ ಎಡ್‌ ಶೀರನ್‌!

ED Sheeran

Profile Ramesh Kote Feb 9, 2025 3:50 PM

ಬೆಂಗಳೂರು: ಇಂಗ್ಲಿಷ್‌ ಸಿಂಗರ್‌ ಎಡ್‌ ಶೀರನ್‌ (Ed Sheeran) ಅವರ ನೇರ ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸುವುದು ಸಂಗೀತ ಪ್ರಿಯರ ಕನಸು. ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅವರು ಭಾರತದಲ್ಲಿ ಸಂಗೀತ ಕಾರ್ಯಕ್ರಮ ನೀಡುವುದೇ ಅಪರೂಪ. ಒಂದು ವೇಳೆ ಅವರು ಭಾರತದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಸಿದರೆ, ಇವರ ಹಾಡುಗಳನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ರೂ. ಗಳನ್ನು ನೀಡಿ ಟಿಕೆಟ್‌ ಖರೀದಿಸುವ ಸಂಗೀತ ಪ್ರಿಯರಿದ್ದಾರೆ. ಅಂದ ಹಾಗೆ ಅವರು ಪ್ರಸ್ತುತ ಭಾರತದ ಪ್ರವಾಸದಲ್ಲಿದ್ದು, ವಿವಿಧ ನಗರಗಳಲ್ಲಿ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇದೀಗ ಅವರು ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಎದುರು ನೋಡುತ್ತಿದ್ದಾರೆ.

ಬೆಂಗಳೂರಿನ ಲೈವ್‌ ಕನ್‌ಸರ್ಟ್‌ ನಿಮಿತ್ತ ರಾಜಧಾನಿಯಲ್ಲಿ ಸುತ್ತಾಡುತ್ತಿರುವ ಎಡ್‌ ಶೀರನ್‌ ಭಾನುವಾರ ಬೆಂಗಳೂರಿನ ಎಂಜಿ ರಸ್ತೆ ಪಕ್ಕದಲಿರುವ ಚರ್ಚ್‌ ಸ್ಟ್ರೀಟ್‌ನ ಫುಟ್‌ಪಾತ್‌ನಲ್ಲಿ ಹಾಡು ಹಾಡುತ್ತಿದ್ದರು. ಇದನ್ನು ಗಮನಿಸಿದ ಸಂಗೀತ ಪ್ರಿಯರು ಕೂಡ ಎಡ್‌ ಶೀರನ್‌ ಹಾಡಿಗೆ ಧನಿಗೂಡಿಸುತ್ತಿದ್ದರು. ಶೀರನ್‌ ʻಶೇಪ್‌ ಆಫ್‌ ಯೂʼ ಹಾಡನ್ನು ಹಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸ್ ಪೇದೆಯೊಬ್ಬರು ಬ್ರಿಟಿಷ್‌ ಹಾಡುಗಾರನನ್ನು ತಡೆದರು. ಈ ವೇಳೆ ಯುವಕನೊಬ್ಬ ಎಡ್‌ ಶೀರನ್‌ ಅವರನ್ನು ತಡೆಯಬೇಡಿ ಎಂದು ಮನವಿ ಮಾಡಿದರೂ ಅವರ ಮಾತನ್ನು ಪೊಲೀಸ್‌ ಕೇಳಲಿಲ್ಲ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Milk Price: ಬೆಂಗಳೂರು ಕರ್ನಾಟಕ ಹಾಲು ಮಹಾಮಂಡಳಿ ಎದುರು ಫೆ.10ರಂದು ಬೃಹತ್ ಪ್ರತಿಭಟನೆ

ಬೆಂಗಳೂರಿನ ಯಾವುದೇ ಸ್ಥಳದಲ್ಲಿ ಅಥವಾ ರಸ್ತೆಯ ಫುಟ್‌ಪಾತ್‌ ಮೇಲೆ ಸಂಗೀತ್‌ ಕಾರ್ಯಕ್ರಮವನ್ನು ಇಟ್ಟುಕೊಳ್ಳಬೇಕೆಂದರೂ ಸಂಬಂಧಿತ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಆದರೆ, ಎಡ್‌ ಶೀರನ್‌ ಯಾವುದೇ ಅನುಮತಿ ಪಡೆಯದೆ ಚರ್ಚ್‌ ಸ್ಟ್ರೀಟ್‌ನಲ್ಲಿ ಪೂರ್ವ ಸಿದ್ದತೆ ಇಲ್ಲದ ಹಾಡುಗಾರಿಕೆಯನ್ನು ಇಟ್ಟುಕೊಂಡಿದ್ದರು. ಇದನ್ನು ಗಮನಿಸಿದ ಪೊಲೀಸ್‌ ಪೇದೆಯೊಬ್ಬರು ಬ್ರಿಟಿಷ್‌ ಸಂಗೀತಗಾರನನ್ನು ತಡೆದರು.



ಚರ್ಚ್‌ಸ್ಟ್ರೀಟ್‌ ಅಧ್ಯಕ್ಷ ಹೇಳಿದ್ದೇನು?

ಚರ್ಚ್‌ ಸ್ಟ್ರೀಟ್‌ ಹಾಗೂ ರೆಸ್ಟ್‌ ಹೌಸ್‌ ಅಸೋಸಿಯೇಷನ್‌ ಅಧ್ಯಕ್ಷ ಸಂಜಯ್‌ ಕುಮಾರ್‌ ಮಾತನಾಡಿ, "ರಸ್ತೆ ಬದಿ ಅಥವಾ ಫುಟ್‌ಪಾತ್‌ಗಳಲ್ಲಿ ಹಾಡುಗಾರಿಕೆ ಅಥವಾ ಯಾವುದೇ ಕಾರ್ಯಕ್ರಮಗಳನ್ನು ನಡೆಸಬೇಕಾದರೂ ವಿದೇಶಗಳಲ್ಲಿಯೂ ಸಹ ಅನುಮತಿ ಪಡೆಯಬೇಕಾಗುತ್ತದೆ. ಎಡ್‌ ಶೀರನ್ ಅವರ ತಂಡವು ನಮ್ಮನ್ನು ಸಂಪರ್ಕಿಸಬಹುದಿತ್ತು. ನಾವೇ ಅವರಿಗೆ ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಅಥವಾ ಮುಕ್ತ ಸ್ಥಳದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡುತ್ತಿದ್ದೆವು," ಎಂದು ಹೇಳಿದ್ದಾರೆ.



ಎಡ್‌ ಶೀರನ್‌ ಅವರನ್ನು ಪೊಲೀಸರು ತಡೆಯುತ್ತಿದ್ದ ವೇಳೆ ಮಾತನಾಡಿದ ಅವರು, "ನಾವು ಇಲ್ಲಿರಲು ಅನುಮತಿಯನ್ನು ಪಡೆದುಕೊಂಡಿದ್ದೇವೆ. ಆದರೆ, ಪೊಲೀಸರು ನಮ್ಮನ್ನು ತಡೆಯುತ್ತಿದ್ದಾರೆ. ತಡವಾಗಿ ನಿಮ್ಮನ್ನು ನೋಡುತ್ತೇನೆ," ಎಂದು ಪ್ರೇಕ್ಷರಿಗೆ ತಿಳಿಸಿದರು. ಅಂದ ಹಾಗೆ ಇಂಗ್ಲಿಷ್‌ ಸಿಂಗರ್‌ಗೆ ರಸ್ತೆ ಬದಿ ಹಾಡು ಹಾಡಲು ಅನುಮತಿ ನೀಡಿಲ್ಲ ಎಂದು ಕಬ್ಬನ್ ಪಾರ್ಕ್ ಪೊಲೀಸರು ಮತ್ತು ಚರ್ಚ್ ಸ್ಟ್ರೀಟ್ ಅಸೋಸಿಯೇಷನ್ ಹೇಳಿದೆ.

ಬೆಂಗಳೂರಿನಲ್ಲಿ ಎಡ್‌ ಶೀರನ್‌ರ ಲೈವ್‌ ಕನ್‌ಸರ್ಟ್‌ ಯಾವಾಗ?

ಬೆಂಗಳೂರಿನ ಹೊರವಲಯದಲ್ಲಿರುವ ಮಾದವಾರದಲ್ಲಿರುವ ನೈಸ್‌ ಗ್ರೌಂಡ್ಸ್‌ ಅಂಗಣದಲ್ಲಿ ಎಡ್‌ ಶೀರನ್‌ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಫೆಬ್ರವರಿ 8 ಮತ್ತು ಫೆಬ್ರವರಿ 9 ರಂದು ಲೈವ್‌ ಕನ್‌ಸರ್ಟ್‌ ನಡೆಯಲಿದೆ. ಇಂದು (ಭಾನುವಾರ) ಎರಡನೇ ದಿನದ ಲೈವ್‌ ಕನ್‌ಸರ್ಟ್‌ ನಡೆಯಲಿದೆ. ಸಂಜೆ 06: 15ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 4 ಗಂಟೆಗೆ ಪ್ರವೇಶ ದ್ವಾರಗಳು ತೆರೆಯಲಿವೆ.