Goa state: ಗೋವಾದಲ್ಲಿ ಇನ್ನು ಕನ್ನಡಿಗರು ವಾಹನ ಖರೀದಿಸುವಂತಿಲ್ಲ!
Karnataka: ಗೋವಾದಲ್ಲಿ ಹಲವು ಉದ್ಯೋಗಗಳು ಕನ್ನಡಿಗರ ಪಾಲಾಗಿದೆ. ಕ್ಯಾಬ್, ಟ್ಯಾಕ್ಸಿಗಳನ್ನು ಕನ್ನಡಿಗರೇ ಹೆಚ್ಚು ಓಡಿಸುತ್ತಿದ್ದಾರೆ. ಎಲ್ಲಾ ಉದ್ಯಮದಲ್ಲೂ ಕನ್ನಡಿಗರೇ ಮುಂದಿದ್ದಾರೆ. ಇದನ್ನು ತಪ್ಪಿಸಲು ಗೋವಾ ಸರ್ಕಾರ ಹೊಸ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ.

ಸಾಂದರ್ಭಿಕ ಚಿತ್ರ

ಗೋವಾ: ಗೋವಾ (Goa state) ರಾಜ್ಯದಲ್ಲಿ ಇನ್ನು ಮುಂದೆ ಕನ್ನಡಿಗರು ವಾಹನ ಖರೀದಿಸದಂತೆ ಹೊಸ ಕಾನೂನು ಜಾರಿಗೆ ತರಲು ಗೋವಾ ಸರ್ಕಾರ ನಿರ್ಧರಿಸಿದೆ. ಕರ್ನಾಟಕ (Karnataka) ಸೇರಿದಂತೆ ಇತರ ರಾಜ್ಯದವರು ವಾಹನ ಖರೀದಿಸಲು (Vehicle purchase) ಮತ್ತು ಅವುಗಳನ್ನು ನೋಂದಣಿ ಮಾಡಿಸಲು ಪರವಾನಗಿ ನೀಡದಂತೆ ನಿರ್ಬಂಧ ಹೇರುವ ಕಾನೂನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಗೋವಾದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಗೋವಾದವರಿಗೆ ಉದ್ಯೋಗ ಉಳಿಸಲು ಹಲವು ರೀತಿಯ ಪ್ರಯತ್ನ ನಡೆದಿದೆ. ಗೋವಾದಲ್ಲಿ ಹಲವು ಉದ್ಯೋಗಗಳು ಕನ್ನಡಿಗರ ಪಾಲಾಗಿದೆ. ಕ್ಯಾಬ್, ಟ್ಯಾಕ್ಸಿಗಳನ್ನು ಕನ್ನಡಿಗರೇ ಹೆಚ್ಚು ಓಡಿಸುತ್ತಿದ್ದಾರೆ. ಎಲ್ಲಾ ಉದ್ಯಮದಲ್ಲೂ ಕನ್ನಡಿಗರೇ ಮುಂದಿದ್ದಾರೆ. ಇದನ್ನು ತಪ್ಪಿಸಲು ಗೋವಾ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದ್ದು, ಗೋವಾ ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಿದೆ.
ಗೋವಾದಲ್ಲಿ ಕನ್ನಡಿಗ ಲಾರಿ ಚಾಲಕನ ಮೇಲೆ ಹಲ್ಲೆ
ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮುಂದುವರೆದಿದ್ದು, ಕರ್ನಾಟಕದವರು ಮತ್ತು ಕನ್ನಡಿಗರನ್ನು ಟಾರ್ಗೆಟ್ ಮಾಡಿ ಹಲ್ಲೆ ಮಾಡಿರುವ ಆರೋಪ ಇದೀಗ ಕೇಳಿ ಬಂದಿದೆ. ಕನ್ನಡಿಗ ಲಾರಿ ಚಾಲಕ ಅನಿಲ್ ರಾಠೋಡ್ ಎನ್ನುವವರ ಮೇಲೆ ಗೋವಾದಲ್ಲಿ ಹಲ್ಲೆ ನಡೆಸಲಾಗಿದೆ. ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದ ನಿವಾಸಿಯಾಗಿರುವ ಅನಿಲ್ ರಾಠೋಡ್ ಅವರು ಚಲಾಯಿಸುತ್ತಿದ್ದ ಟ್ರಕ್ ಅನ್ನು ಗೋವಾದ ಪ್ರೆಡ್ನೆ ಬಳಿಯ ರಸ್ತೆಯಲ್ಲಿ ಅಡ್ಡಗಟ್ಟಿ ಗೂಂಡಾಗಿರಿ ನಡೆಸಲಾಗಿದೆ.
ಕಾರು, ಜೀಪ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳ ಗ್ಯಾಂಗ್ ಅನಿಲ್ ರಾಠೋಡ್ ಮೇಲೆ ಹಲ್ಲೆ ಮಾಡಿದೆ. ಕನ್ನಡಿಗ ಚಾಲಕ ಅನಿಲ್‌ಗೆ ನಿಂದಿಸಿದ್ದು ಅಲ್ಲದೆ ಹಲ್ಲೆ ನಡೆಸಿದ್ದಾರೆ. ಅನಿಲ್ ಮಹಾರಾಷ್ಟ್ರದಿಂದ ಗೋವಾಕ್ಕೆ ಕಲ್ಲು ಸಾಗಿಸುತ್ತಿದ್ದರು. ಹಲ್ಲೆ ಮಾಡಿರುವ ದೃಶ್ಯವನ್ನು ಅನಿಲ್ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೋವಾ ಪೊಲೀಸರ ವಿರುದ್ಧ ಚಾಲಕ ಅನಿಲ್ ಆರೋಪಿಸಿದ್ದಾರೆ. ಗೋವಾದಲ್ಲಿ ಕನ್ನಡಿಗರ ಮೇಲೆ ನಿರಂತರ ಹಲ್ಲೆ ದೌರ್ಜನ್ಯ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ನೆರವಿಗೆ ಬರಬೇಕು. ಗೋವಾ ಸಿಎಂ ಜೊತೆಗೆ ಮಾತನಾಡಿ ಕನ್ನಡಿಗರನ್ನು ರಕ್ಷಿಸುವಂತೆ ಚಾಲಕ ಅನಿಲ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪ್ರವಾಹದಿಂದ ಹಾನಿಗೊಳಗಾದ ವಾಹನ ಮಾಲೀಕರಿಗೆ ನೆರವು ಒದಗಿಸುವ ಹೊಸ ಯೋಜನೆ ಘೋಷಿಸಿದ ನಿಸ್ಸಾನ್ ಮೋಟಾರ್ ಇಂಡಿಯಾ