ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WPL 2026: ಯುಪಿ ವಾರಿಯರ್ಸ್‌ ತಂಡದ ನೂತನ ಹೆಡ್‌ ಕೋಚ್‌ ಆಗಿ ಅಭಿಷೇಕ್‌ ನಾಯರ್‌ ನೇಮಕ!

ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಯುಪಿ ವಾರಿಯರ್ಸ್‌ ತಂಡಕ್ಕೆ ಭಾರತ ತಂಡದ ಮಾಜಿ ಆಟಗಾರ ಅಭಿಷೇಕ್‌ ನಾಯರ್‌ ನೂತನ ಹೆಡ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಕಳೆದ ಮೂರು ಸೀಸನ್‌ಗಳಲ್ಲಿ ಯುಪಿ ವಾರಿಯರ್ಸ್‌ ತಂಡವನ್ನು ಮುನ್ನಡೆಸಿದ್ದ ಜಾನ್ ಲೆವಿಸ್‌ ಅವರ ಸ್ಥಾನವನ್ನು ತುಂಬಲಿದ್ದಾರೆ.

WPL 2026:  ಯುಪಿ ವಾರಿಯರ್ಸ್‌ಗೆ ಅಭಿಷೇಕ್‌ ನಾಯರ್‌ ಹೆಡ್‌ ಕೋಚ್‌!

ಯುಪಿ ವಾರಿಯರ್ಸ್‌ಗೆ ಅಭಿಷೇಕ್‌ ನಾಯರ್‌ ಹೆಡ್‌ ಕೋಚ್‌.

Profile Ramesh Kote Jul 26, 2025 11:39 AM

ನವದೆಹಲಿ: ಐಪಿಎಲ್‌ ಮಾದರಿಯಲ್ಲೇ ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಕ್ರಿಕೆಟ್‌ ಅಭಿಮಾನಿಗಳ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಎಲ್ಲಾ ತಂಡಗಳು ಮುಂಬರುವ ಆವೃತ್ತಿಗೆ ಪೂರ್ವ ಸಿದ್ಧತೆ ನಡೆಸುತ್ತಿವೆ. ಇದೀಗ ಕಳೆದ ಮೂರೂ ಸೀಸನ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಯುಪಿ ವಾರಿಯರ್ಸ್‌ ತಂಡಕ್ಕೆ ಭಾರತ ತಂಡದ ಮಾಜಿ ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌ (ABhishek Natar ನೂತನ ಹೆಡ್‌ ಕೋಚ್‌ ಆಗಿ ನೇಮಕವಾಗಿದ್ದು, ಕಳೆದ ಮೂರು ಸೀಸನ್‌ಗಳಲ್ಲಿ ಯುಪಿ ವಾರಿಯರ್ಸ್‌ ತಂಡವನ್ನು ಮುನ್ನಡೆಸಿದ ಜಾನ್ ಲೆವಿಸ್‌ ಅವರ ಸ್ಥಾನವನ್ನು ತುಂಬಲಿದ್ದಾರೆ. ಆ ಮೂಲಕ ನಾಲ್ಕನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್‌ ಹೊಸ ಹೆಡ್‌ ಕೋಚ್‌ ಸಾರಥ್ಯದಲ್ಲಿ ತಯಾರಿ ನಡೆಸಲಿದೆ. ಇದು ತಂಡವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ.

ಈ ಹಿಂದೆ ಅಭಿಷೇಕ್‌ ನಾಯರ್‌ ಭಾರತೀಯ ಪುರುಷರ ಕ್ರಿಕೆಟ್ ತಂಡದ ಸಹಾಯಕ ಕೋಚ್ ಹುದ್ದೆಯಿಂದ ಬಿಡುಗಡೆಗೊಂಡಿದ್ದರು. ನಾಯರ್ ಅವರು 2025ರ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಆಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದ್ದರು. ಫೆಬ್ರವರಿಯಲ್ಲಿ ಯುಎಇನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಭಾರತ ತಂಡದಲ್ಲಿ ಅವರು ಗೌತಮ್ ಗಂಭೀರನ ನೇತೃತ್ವದ ಕೋಚಿಂಗ್ ತಂಡದ ಭಾಗವಾಗಿದ್ದರು. 2024ರಲ್ಲಿ ರಾಷ್ಟ್ರೀಯ ತಂಡಕ್ಕೆ ಸೇರುವ ಮೊದಲು ನಾಯರ್ ಬಹುಕಾಲದಿಂದ ಕೆಕೆಆರ್ ತಂಡದಲ್ಲಿದ್ದರು ಹಾಗೂ 2024ರಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಪ್ರಶಸ್ತಿ ಗೆಲುವಿನಲ್ಲಿ ಅಭಿಷೇಕ್‌ ನಾಯರ್‌ ಕೂಡ ಇದ್ದರು.

IND vs ENG: IND vs ENG: ಕನ್ನಡಿಗ ಕರುಣ್‌ ನಾಯರ್‌ರ ಟೆಸ್ಟ್‌ ವೃತ್ತಿ ಜೀವನ ಅಂತ್ಯ? ಫ್ಯಾನ್ಸ್‌ ಪ್ರತಿಕ್ರಿಯೆ!

ಈ ಕುರಿತು ಪ್ರತಿಕ್ರಿಯೆ ನೀಡಿದ ತಂಡದ ಸಿಇಒ ಕ್ಷೇಮಾಲ್ ವೈಂಗಂಕರ್

ಅಭಿಷೇಕ್‌ ನಾಯರ್‌ ಯುಪಿ ವಾರಿಯರ್ಸ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾದ ವಿಷಯದ ಕುರಿತು ಪ್ರತಿಕ್ರಿಯೆ ನೀಡಿರುವ ತಂಡದ ಸಿಇಒ ಕ್ಷೇಮಾಲ್ ವೈಂಗಂಕರ್, "ಅಭಿಷೇಕ್ ನಾಯರ್ ಅವರು ಜಾಗತಿಕ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಜ್ಞಾನಿಗಳಲ್ಲಿ ಒಬ್ಬರು. ಅವರನ್ನೇ ಮುಖ್ಯ ಕೋಚ್ ಆಗಿ ಹೊಂದಿರುವುದು ನಮ್ಮ ತಂಡಕ್ಕೆ ಹೆಮ್ಮೆಯ ವಿಷಯ. ಅವರು ಯುಪಿ ವಾರಿಯರ್ಸ್‌ ತಂಡದ ಬಗ್ಗೆ ಹೊಂದಿರುವ ದೃಷ್ಟಿಕೋನ ಉತ್ಸಾಹದಾಯಕವಾಗಿದೆ. ಅವರ ನಾಯಕತ್ವದಲ್ಲಿ ನಮ್ಮ ತಂಡ ಅಭಿಮಾನಿಗಳಿಗೆ ಇನ್ನೂ ಹೆಚ್ಚು ಸ್ಮರಣೀಯ ಕ್ಷಣಗಳನ್ನು ನೀಡುತ್ತದೆ ಎಂಬ ವಿಶ್ವಾಸವಿದೆ,” ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.



ಅಧಿಕೃತ ಪ್ರಕಟಣೆ ಹೊರಡಿಸಿದ ಯುಪಿ ವಾರಿಯರ್ಸ್‌

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಫ್ರಾಂಚೈಸಿ, " ನಮ್ಮ ತಂಡವೂ ಮೊದಲ ಆವೃತ್ತಿಯಲ್ಲೇ (2023) ಪ್ಲೇಆಫ್‌ ತಲುಪಿತ್ತು. ಮುಂದಿನ ಎರಡು ಆವೃತ್ತಿಗಳಲ್ಲಿ ಲೀಗ್‌ನ ಐದು ತಂಡಗಳ ಪೈಕಿ ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನ ಪಡೆದಿದೆ. ನಾಯರ್ ಅವರು ಈ ಹಿಂದೆ ಮೊದಲ ಆವೃತ್ತಿಯ ವೇಳೆ ತಂಡದೊಂದಿಗಿದ್ದ ಅನುಭವವ ಹೊಂದಿದ್ದಾರೆ. ಈಗ ತಂಡಕ್ಕೆ ಹೆಡ್‌ ಕೋಚ್‌ ಆಗಿ ನೇಮಕವಾಗಿರುವುದು ತಂಡದ ಸಿದ್ಧತೆಯಲ್ಲಿ ಸ್ಥಿರತೆ ಮತ್ತು ಉತ್ತಮ ಪ್ರದರ್ಶನ ತೋರಲು ಸಹಕಾರಿಯಾಗಿದೆ," ಎಂದು ತಿಳಿಸಿದೆ.

IND vs ENG 4th Test: ಜೋ ರೂಟ್‌ ಶತಕ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಇಂಗ್ಲೆಂಡ್‌!

ಅಭಿಷಕ್‌ ನಾಯರ್‌ ಪ್ರತಿಕ್ರಿಯೆ

ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಅಭಿಷೇಕ್‌ ನಾಯರ್‌, "ಯುಪಿ ವಾರಿಯರ್ಸ್‌ ತಂಡ ನನಗೇನೂ ಹೊಸತಲ್ಲ. ಈ ಹಿಂದೆಯೂ ತಂಡದ ಭಾಗವಾಗಿ ಸೇವೆ ಸಲ್ಲಿಸಿದ ಅನುಭವ ಇದೆ. ಈಗ ಮುಖ್ಯ ಕೋಚ್ ಆಗಿ ಹೊಸ ಹೊಣೆಗಾರಿಕೆ ಹೊತ್ತಿರುವುದು ನನಗೆ ಹರ್ಷ ತಂದಿದೆ. ಡಬ್ಲ್ಯುಪಿಎಲ್ ಮಹಿಳಾ ಕ್ರಿಕೆಟ್‌ಗೆ ಅತ್ಯುತ್ತಮ ವೇದಿಕೆಯಾಗಿದ್ದು, ತಂಡವನ್ನು ಮತ್ತಷ್ಟು ಬಲಿಷ್ಟವಾಗಿಸುವ ನಿಟ್ಟಿಲ್ಲಿ ಯೋಜನೆ ರೂಪಿಸುತ್ತೇನೆ. ಈ ಬಾರಿ ನಮ್ಮ ತಂಡ ಚೊಚ್ಚಲ ಚಾಂಪಿಯನ್ಸ್‌ ಪಟ್ಟವೇರಲು ನನ್ನ ಎಲ್ಲ ಶಕ್ತಿಯನ್ನು ಬಳಸಿ ಪ್ರಯತ್ನಿಸುತ್ತೇನೆ," ಎಂದು ಹೇಳಿದ್ದಾರೆ.