Madhuri Dixit: ಪಾಕಿಸ್ತಾನ ಯುದ್ಧ ಗೆದ್ದರೆ ಮಾಧುರಿ ದೀಕ್ಷಿತ್ ನಮ್ಮವಳು; ಮೌಲ್ವಿಯ ವಿವಾದಾತ್ಮಕ ಹೇಳಿಕೆ ವೈರಲ್
ಪ್ರಧಾನಿ ಮೋದಿ ಸೇನಾ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಿದೆ. ಯುದ್ಧದ ವಾತಾವರಣ ಏರ್ಪಟ್ಟಿದೆ. ತಹ ಸ್ಥಿತಿಯಲ್ಲಿ ಇರುವಾಗ ಪಾಕಿಸ್ತಾನದ ಧರ್ಮ ಗುರುವಿನ ಹೇಳಿಕೆ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಧರ್ಮ ಗುರು ತನ್ನ ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ವಿಡಿಯೋ ಮಾಡಿದ್ದಾನೆ.


ಇಸ್ಲಾಮಾಬಾದ್: ಜಮ್ಮು ಹಾಗೂ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ರಾಜತಾಂತ್ರಿಕ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಭಾರತ ಹೀಗಾಗಲೇ ಪಾಕ್ ವಿರುದ್ಧ ಕ್ರಮ ಕೈಗೊಂಡಿದ್ದು, ಪಾಕಿಸ್ತಾನದ ಆರ್ಥಿಕತೆ ಹೊಡೆತ ನೀಡಿದೆ. ಇದೀಗ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದೀಗ ಪಾಕಿಸ್ತಾನದ ಮೌಲಾನ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Madhuri Dixit) ಬಗ್ಗೆ ಹೇಳಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿವಾದಾತ್ಮಕ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ಪ್ರಧಾನಿ ಮೋದಿ ಸೇನಾ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಿದೆ. ಯುದ್ಧದ ವಾತಾವರಣ ಏರ್ಪಟ್ಟಿದೆ. ತಹ ಸ್ಥಿತಿಯಲ್ಲಿ ಇರುವಾಗ ಪಾಕಿಸ್ತಾನದ ಧರ್ಮ ಗುರುವಿನ ಹೇಳಿಕೆ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಧರ್ಮ ಗುರು ತನ್ನ ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ವಿಡಿಯೋ ಮಾಡಿದ್ದಾನೆ. ಅದರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಆ ಯುದ್ಧದಲ್ಲಿ ಪಾಕಿಸ್ತಾನ ಗೆದ್ದರೆ, ತಾನು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅನ್ನು ನಮ್ಮ ದೇಶಕ್ಕೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾನೆ. ಈ ವಿಡಿಯೋ ಯಾವಾಗ ಹೇಳಿದ್ದು ಎಂಬುದು ಇನ್ನೂ ತಿಳಿದು ಬಂದಿಲ್ಲ.
This maulana wants to take Madhuri Dixit after Pakistan attacks India . This is their level of filth which came to them after years of turning the pages of Aasmani 📖 #IndiaPakistanWar #PahalgamTerrorAttack pic.twitter.com/cZ5oaHWuuz
— Amitabh Chaudhary (@MithilaWaala) May 6, 2025
ಈ ವಿಡಿಯೋವನ್ನು ಅಮಿತಾಬ್ ಚೌಧರಿ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ವೈರಲ್ ವಿಡಿಯೋಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಕೆಲವರು ಮೌಲ್ವಿಗೆ ಹಗಲು ಕನಸು ಕಾಣಬೇಡ ಎಂದು ಹೇಳಿದ್ದರೆ, ಇನ್ನೂ ಕೆಲವರು ಪಾಕಿಸ್ತಾನ ಗೆಲ್ಲುವುದು ಅಂದರೆ ಏನು? ಅದೆಲ್ಲಾಅಸಾಧ್ಯ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಕಳೆದ ಯುದ್ಧ ನೆನಪಿದೆಯೇ ಎಂದು ಕಿಚಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Mallikarjun Kharge: ಪಹಲ್ಗಾಮ್ ದಾಳಿ ಬಗ್ಗೆ ಪ್ರಧಾನಿಗೆ ಮೊದಲೇ ಗೊತ್ತಿತ್ತು- ಖರ್ಗೆ ಸ್ಫೋಟಕ ಹೇಳಿಕೆ
ಇತ್ತೀಚೆಗೆ ವೈರಲ್ ಆದ ಮತ್ತೊಂದು ವಿಡಿಯೋದಲ್ಲಿ ಪಾಕಿಸ್ತಾನದ ಧರ್ಮಗುರುವೊಬ್ಬ ಮ್ಮ ಭಾಷಣದ ಸಮಯದಲ್ಲಿ ಪಾಕಿಸ್ತಾನದ ಸೈನ್ಯವನ್ನು ಮತ್ತು ಅದರ ನಡೆಯನ್ನು ಖಂಡಿಸಿದರು. ಜೊತೆಗೆ ಭಾರತ- ಪಾಕಿಸ್ತಾನದ ನಡುವಿನ ಯುದ್ಧದ ಪರಿಸ್ಥಿತಿಯನ್ನು ನೆನೆದು ಜನಸಮೂಹಕ್ಕೆ ಒಂದು ಪ್ರಶ್ನೆ ಕೇಳಿದರು. ಭಾರತದೊಂದಿಗೆ ನೀವು ಹೋರಾಡಲು ಸಿದ್ಧರಿದ್ದೀರಾ?, ಯಾರೆಲ್ಲಾ ಸಿದ್ದರಿದ್ದೀರಾ ಅಂದರೆ ಕೈ ಎತ್ತುವಂತೆ ಕೇಳಿಕೊಂಡರು. ಆದರೆ ಯಾರೊಬ್ಬರೂ ಕೈ ಮೇಲೆ ಮಾಡಿರಲಿಲ್ಲ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.