ಏಷ್ಯಾ ಕಪ್ ಟೂರ್ನಿಗೆ ಶ್ರೀಲಂಕಾ ತಂಡ ಪ್ರಕಟ, ವಾನಿಂದು ಹಸರಂಗ ಕಮ್‌ಬ್ಯಾಕ್!
ಮುಂಬರುವ 2025ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಸ್ಟಾರ್ ಆಲ್‌ರೌಂಡರ್ ವಾನಿಂದು ಹಸರಂಗ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಚರಿತಾ ಅಸಲಂಕ ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ. ಸೆಪ್ಟಂಬರ್ 9 ರಂದು 20 ಓವರ್‌ಗಳ ಟೂರ್ನಿ ಆರಂಭವಾಗಲಿದೆ.

ಏಷ್ಯಾ ಕಪ್ ಟೂರ್ನಿಗೆ ಶ್ರೀಲಂಕಾ ತಂಡ ಪ್ರಕಟ.

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಗಾಗಿ 16 ಸದಸ್ಯರ ಶ್ರೀಲಂಕಾ (Sri Lanka Squad) ತಂಡವನ್ನು ಆಗಸ್ಟ್ 28 ರಂದು ಪ್ರಕಟಿಸಲಾಗಿದೆ. ಶ್ರೀಲಂಕಾ ತಂಡದಲ್ಲಿ ಆಲ್‌ರೌಂಡರ್ ವಾನಿಂದು ಹಸರಂಗ (Wanindu Hasaranga) ಕೂಡ ಸ್ಥಾನ ಪಡೆದಿದ್ದಾರೆ. ಹಸರಂಗ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ಈ ಹಿಂದೆ ಹೇಳಲಾಗುತ್ತಿತ್ತು, ಆದರೆ ಕೊನೆಯ ಕ್ಷಣದಲ್ಲಿ ಅವರಿಗೆ ಫಿಟ್‌ನೆಸ್ ಕ್ಲಿಯರೆನ್ಸ್ ಸಿಕ್ಕಿದೆ. ಇದರ ಫಲವಾಗಿ ಶ್ರೀಲಂಕಾ ತಂಡಕ್ಕೆ ವಾನಿಂದು ಹಸರಂಗ ಅವರ ಸೇವೆ ಲಭ್ಯವಾಗಿದೆ. ಇನ್ನು ಚರಿತ ಅಸಲಂಕ ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.
ಹಸರಂಗ ಅವರನ್ನು ಶ್ರೀಲಂಕಾ ತಂಡದಲ್ಲಿ ಸೇರಿಸಿಕೊಂಡಿದ್ದರಿಂದ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ. ಏಕೆಂದರೆ ಮೊದಲು ಜಿಂಬಾಬ್ವೆ ವಿರುದ್ಧದ ತಂಡವನ್ನು ಘೋಷಿಸಿದಾಗ, ವಾನಿಂದು ಹಸರಂಗ ಅವರ ಹೆಸರು ಅದರಲ್ಲಿ ಇರಲಿಲ್ಲ. ಈ ಕಾರಣಕ್ಕಾಗಿ ಹಸರಂಗ ಏಷ್ಯಾಕಪ್‌ನಲ್ಲಿಯೂ ಆಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಶ್ರೀಲಂಕಾ ಕ್ರಿಕೆಟ್ ತಂಡವನ್ನು ಏಷ್ಯಾಕಪ್‌ನ ಗ್ರೂಪ್ ʻಬಿʼ ನಲ್ಲಿ ಸೇರಿಸಲಾಗಿದೆ. ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಸಹ ಈ ಗುಂಪಿನಲ್ಲಿ ಸೇರಿವೆ.
Asia Cup 2025: ಶುಭಮನ್ ಗಿಲ್‌ಗಾಗಿ ಸಂಜು ಸ್ಯಾಮ್ಸನ್‌ಗೆ ಅನ್ಯಾಯ ಮಾಡಬೇಡಿ!
ಶ್ರೀಲಕಾ ತಂಡಕ್ಕೆ ಚರಿತ ಅಸಲಂಕ ನಾಯಕ
ಏಷ್ಯಾಕಪ್ ಟೂರ್ನಿಯ ಶ್ರೀಲಂಕಾ ತಂಡವನ್ನು ಘೋಷಿಸಿದ ತಂಡದಲ್ಲಿ ಚರಿಚ ಅಸಲಂಕಾ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಇದಲ್ಲದೆ, ಕುಸಾಲ್ ಮೆಂಡಿಸ್ ಮತ್ತು ಕುಸಾಲ್ ಪೆರೆರಾ ಅವರಂತಹ ಅನುಭವಿ ಆಟಗಾರರನ್ನು ಸಹ ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದು, ದಸೂನ್ ಶಣಕ, ಮಹೇಶ್ ತೀಕ್ಷಣ, ನುವಾನ್ ತುಷಾರ ಮತ್ತು ಮತೀಶ ಪತಿರಣ ಅವರಂತಹ ಆಟಗಾರರು ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಪರ ಆಡಲಿದ್ದಾರೆ.
Sri Lanka T20I Squad announced for the Asia Cup 2025📷
— Sri Lanka Cricket 🇱🇰 (@OfficialSLC) August 28, 2025
The Sri Lanka Cricket Selection Panel has named the following squad for the ACC Men’s T20 Asia Cup 2025.
The Squad : https://t.co/lUPAblnZhJ#SriLankaCricket #AsiaCup2025 pic.twitter.com/f5AcHDovgg
ಶ್ರೀಲಂಕಾ ಏಷ್ಯಾಕಪ್ ಟಿ20 ಮಾದರಿಯ ಚಾಂಪಿಯನ್ ತಂಡ ಎಂದು ನಾವು ನಿಮಗೆ ಹೇಳೋಣ. ಅಂತಹ ಪರಿಸ್ಥಿತಿಯಲ್ಲಿ ಅದು ತನ್ನ ಟಿ20 ಮಾದರಿಯ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಶ್ರೀಲಂಕಾ ತಂಡ ಕಳೆದ ಏಕದಿನ ಮಾದರಿಯ ಏಷ್ಯಾಕಪ್‌ನ ಫೈನಲ್‌ಗೆ ತಲುಪಿತ್ತು, ಅಲ್ಲಿಯೂ ಭಾರತ ವಿರುದ್ಧ ಸೋಲನ್ನು ಅನುಭವಿಸಿತ್ತು.
ಏಷ್ಯಾ ಕಪ್ ಟೂರ್ನಿಗೆ ಶ್ರೀಲಂಕಾ ತಂಡ
ಚರಿತ ಅಸಲಂಕಾ (ನಾಯಕ), ಪಥುಮ್ ನಿಸಾಂಕ, ಕುಸಾಲ್ ಮೆಂಡಿಸ್, ಕುಸಲ್ ಪೆರೆರಾ, ನುವನಿಡು ಫೆರ್ನಾಂಡೊ, ಕಮಿಂದು ಮೆಂಡಿಸ್, ಕಮಿಲ್ ಮಿಶಾರ, ದಶೂನ್ ಶಣಕ, ವಾನಿಂದು ಹಸರಂಗ, ದುನಿತ್ ವೆಲ್ಲಾಲಗೆ, ಚಮೀರ ಕರುಣರತ್ನೆ, ಮಹೇಶ್ ತೀಕ್ಷಣ, ದುಷ್ಮಂತ ಚಮೀರ, ಬಿನುರ ಫೆರ್ನಾಂಡೊ, ನುವಾನ್ ತುಷಾರ ಮತ್ತು ಮತೀಶ ಪತಿರಣ