ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Billa Ranga Baasha: ಸುದೀಪ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ಈ ದಿನದಂದು ಹೊರ ಬೀಳಲಿದೆ ʼಬಿಲ್ಲ ರಂಗ ಭಾಷʼದ ಫಸ್ಟ್‌ ಲುಕ್‌ ಪೋಸ್ಟರ್‌

Kichcha Sudeepa: 2022ರಲ್ಲಿ ತೆರೆಕಂಡ ʼರಂಗಿ ತರಂಗʼದ ಮೂಲಕ ಗಮನ ಸೆಳೆದ ಅನೂಪ್‌ ಭಂಡಾರಿ-ಸುದೀಪ್‌ ಜೋಡಿ ಇದೀಗ ʼಬಿಲ್ಲ ರಂಗ ಭಾಷʼದ ಮೂಲಕ ಮತ್ತೊಮ್ಮೆ ಜತೆಯಾಗಿದ್ದಾರೆ. ಸೆಪ್ಟೆಂಬರ್‌ 2ರಂದು ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಮಅಡುವುದಾಗಿ ಅನೂಪ್‌ ಭಂಡಾರಿ ಪ್ರಕಟಿಸಿದ್ದಾರೆ.

ʼಬಿಲ್ಲ ರಂಗ ಭಾಷʼದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್‌

Ramesh B Ramesh B Aug 28, 2025 11:27 PM

ಬೆಂಗಳೂರು: ಸೆಪ್ಟೆಂಬರ್‌ 2ರಂದು ಕಿಚ್ಚ ಸುದೀಪ್‌ (Kichcha Sudeepa) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ನಿಮಿತ್ತ ಸೆಪ್ಟೆಂಬರ್‌ 1ರ ಮಧ್ಯರಾತ್ರಿ ಒಟ್ಟಿಗೆ ಸೇರೋಣ ಎಂದು ಈಗಾಗಲೇ ಅವರು ಫ್ಯಾನ್ಸ್‌ಗೆ ಕರೆ ನೀಡಿದ್ದಾರೆ. ಎಲ್ಲಿ, ಹೇಗೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಅವರು ಘೋಷಿಸಿದ್ದಾರೆ. ಫ್ಯಾನ್ಸ್‌ ಈ ಸುದ್ದಿ ತಿಳಿದು ಎಕ್ಲೈಟ್‌ನಲ್ಲಿದ್ದು, ಇದೀಗ ಮತ್ತೊಂದು ಗುಡ್‌ನ್ಯೂಸ್‌ ಹೊರಬಿದ್ದಿದೆ. ಸೆಪ್ಟೆಂಬರ್‌ 2ರಂದು ಸುದೀಪ್‌ ನಟನೆಯ ಬಹುನಿರೀಕ್ಷಿತ ಚಿತ್ರ ʼಬಿಲ್ಲ ರಂಗ ಭಾಷʼ (Billa Ranga Baasha)ದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಮಾಡುವುದಾಗಿ ನಿರ್ದೇಶಕ ಅನೂಪ್‌ ಭಂಡಾರಿ (Anup Bhandari) ಸೋಶಿಯಲ್‌ ಮೀಡಿಯಾ ಮೂಲಕ ಪ್ರಕಟಿಸಿದ್ದಾರೆ. ಈ ಮೂಲಕ ಸುದೀಪ್‌ ಫ್ಯಾನ್ಸ್‌ಗೆ ಡಬಲ್‌ ಧಮಾಕ ಸಿಕ್ಕಂತಾಗಿದೆ.

ʼಬಿಲ್ಲ ರಂಗ ಭಾಷʼದ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸ್ಯಾಂಡಲ್‌ವುಡ್‌ ಮತ್ತೊಮ್ಮೆ ಸದ್ದು ಮಾಡಲಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ʼವಿಕ್ರಾಂತ್‌ ರೋಣʼದ ಯಶಸ್ಸಿನ ನಂತರ ಅನೂಪ್‌ ಭಂಡಾರಿ ಮತ್ತು ಸುದೀಪ್‌ ಮತ್ತೊಮ್ಮೆ ಒಂದಾಗಿರುವ ಈ ಚಿತ್ರ ಘೋಷಣೆಯಾದಾಗಿನಿಂದಲೂ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಏಪ್ರಿಲ್‌ನಲ್ಲಿ ಚಿತ್ರತಂಡ ಮೊದಲ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಶೂಟಿಂಗ್‌ ಆರಂಭಿಸಿರುವುದನ್ನು ತಿಳಿಸಿತ್ತು. ಈ ಪೋಸ್ಟರ್‌ ವಿಭಿನ್ನವಾಗಿ ಮೂಡಿ ಬಂದು ಗಮನ ಸೆಳೆದಿತ್ತು. ಅದರಲ್ಲಿ ಹಿಮ ತುಂಬಿರುವ ಬೆಟ್ಟಗಳ ನಡುವೆ ಗಂಭೀರವಾಗಿ ಏನನ್ನೋ ನೋಡುತ್ತಿರುವ ಸುದೀಪ್‌ ಲುಕ್‌ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದರು. ಜತೆಗೆ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿತ್ತು.

ಈ ಸುದ್ದಿಯನ್ನೂ ಓದಿ: Kichcha Sudeepa: ಸೆಪ್ಟೆಂಬರ್ 1ರ ರಾತ್ರಿ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಸುದೀಪ್

ಭವಿಷ್ಯದ ಕಥೆ

ವಿಶೇಷ ಎಂದರೆ ʼಬಿಲ್ಲ ರಂಗ ಭಾಷʼದಲ್ಲಿ ಅನೂಪ್‌ ಪ್ರೇಕ್ಷಕರ ಎದುರು ಹೊಸದೊಂದು ಲೋಕವನ್ನೇ ತೆರೆದಿಡಲಿದ್ದಾರೆ. ತಮ್ಮ ಹಿಂದಿನ ಚಿತ್ರಗಳ ಯಾವ ಛಾಯೆಯೂ ಇದರಲ್ಲಿ ಇರುವುದಿಲ್ಲ. ಪಕ್ಕಾ ಕಮರ್ಷಿಯಲ್‌ ಚಿತ್ರವನ್ನು ವಿಭಿನ್ನವಾಗಿ ಕಟ್ಟಿಕೊಡುವುದಾಗಿ ಹಿಂದೆಯೇ ಅವರು ತಿಳಿಸಿದ್ದರು. ಈ ಸೈನ್ಸ್‌ ಫಿಕ್ಷನ್‌ನ ಕಥೆ 2209ರ ಕಾಲಘಟ್ಟದಲ್ಲಿ ನಡೆಯಲಿದೆ ಎಂದು ಹೇಳಿ ಅವರು ಕುತೂಹಲ ಹೆಚ್ಚಿಸಿದ್ದರು. ಅಂದರೆ 185 ವರ್ಷಗಳ ಬಳಿಕ ಏನಾಗಲಿದೆ ಎನ್ನುವುದನ್ನು ರೋಚಕವಾಗಿ ಅನೂಪ್‌ ಕಟ್ಟಿಕೊಡಲಿದ್ದಾರೆ. ಇದಕ್ಕಾಗಿ ಅವರು ಹಲವು ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ.

ಅದರ ಸೂಚನೆ ಎಂಬಂತೆ ಮೂಡಿ ಬಂದಿದ್ದ ಪೋಸ್ಟರ್‌ ನೋಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದರು. ಪ್ರೈಂ ಶೋ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ ಅಡಿಯಲ್ಲಿ ನಿರಂಜನ್‌ ರೆಡ್ಡಿ ಮತ್ತು ಚೈತನ್ಯಾ ನಿರಂಜನ್‌ ರೆಡ್ಡಿ ʼಬಿಲ್ಲ ರಂಗ ಭಾಷʼ ಸಿನಿಮಾವನ್ನು ನಿರ್ಮಿಸುತ್ತಿದ್ದು, ಬಹುಕೋಟಿ ರೂ. ವೆಚ್ಚದಲ್ಲಿ, ಹಾಲಿವುಡ್‌ ಶೈಲಿಯಲ್ಲಿ ಇದು ತಯಾರಾಗಲಿದೆ.

ಮತ್ತೊಮ್ಮೆ ಒಂದಾದ ಹಿಟ್‌ ಜೋಡಿ

2022ರಲ್ಲಿ ತೆರೆಕಂಡ ಅನೂಪ್‌ ಭಂಡಾರಿ-ಸುದೀಪ್‌ ಜೋಡಿಯ ʼವಿಕ್ರಾಂತ್‌ ರೋಣʼ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂ. ಗಳಿಸಿದಲ್ಲದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು. ಅನೂಪ್‌ ಭಂಡಾರಿ ಮತ್ತೊಮ್ಮೆ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆ ಹೇಳಿ ಗೆದ್ದಿದ್ದರು. ಜತೆಗೆ ಸುದೀಪ್‌ ಆ್ಯಕ್ಷನ್ ದೃಶ್ಯಗಳಲ್ಲಿಯೂ ಮಿಂಚಿದ್ದರು. ʼರಂಗಿ ತರಂಗʼದ ಮೂಲದ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು, ಹೊಸ ಬಗೆಯ ಚಿತ್ರ ನೀಡಿ ಯಶಸ್ವಿಯಾಗಿದ್ದ ಅನೂಪ್‌, ʼವಿಕ್ರಾಂತ್‌ ರೋಣʼದಲ್ಲಿಯೂ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದರು. ಜತೆಗೆ ನಿರೂಪ್‌ ಭಂಡಾರಿ ವಿಭಿನ್ನ ಪಾತ್ರದ ಮೂಲಕ ಸರ್‌ಪ್ರೈಸ್‌ ನೀಡಿದ್ದರು. ಹೀಗಾಗಿಯೇ ಅನೂಪ್‌ ಮತ್ತು ಸುದೀಪ್‌ ಮತ್ತೊಮ್ಮೆ ಒಂದಾಗುತ್ತಾರೆ ಎನ್ನುವಾಗಲೇ ಹೈಪ್‌ ಕಿಯೇಟ್‌ ಆಗಿತ್ತು. ಇದೀಗ ಸುದೀಪ್‌ ಹುಟ್ಟುಹಬ್ಬದಂದೇ ಈ ಚಿತ್ರದ ಮತ್ತೊಂದು ಝಲಕ್‌ ಹೊರ ಬೀಳಲಿದೆ.