ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Traffic Fine: ತಿಪಟೂರಿನಲ್ಲಿ ಬಾಲಕನಿಂದ ಬೈಕ್‌ ಚಾಲನೆ; ಮಾಲೀಕನಿಗೆ ಬಿತ್ತು 25,000 ದಂಡ!

Traffic Fine: ಅರಸೀಕೆರೆ ತಾಲೂಕಿನ ಬಾಣಾವರದ ಹೋಬಳಿಯ ಬಸವರಾಜಪುರ ಮೂಲದ ಬಾಲಕ ಬೈಕ್‌ ಚಲಾಯಿಸುವಾಗ, ತಿಪಟೂರು ಪೊಲೀಸರ ಕೈಗೆ ಸಿಕ್ಕಿಬಿದ್ದು, ಪ್ರಕರಣ ದಾಖಲಾಗಿತ್ತು. ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡುವುದು ಮತ್ತು ಅವರಿಗೆ ವಾಹನ ನೀಡುವುದು ಸಂಚಾರ ನಿಯಮ ಉಲ್ಲಂಘನೆಯಾಗಲಿದೆ. ಹೀಗಾಗಿ ಬೈಕ್‌ ಮಾಲೀಕನಿಗೆ ನ್ಯಾಯಾಲಯವು ಭಾರಿ ಮೊತ್ತದ ಜುಲ್ಮಾನೆ ವಿಧಿಸಿದೆ.

ತಿಪಟೂರಿನಲ್ಲಿ ಬಾಲಕನಿಂದ ಬೈಕ್‌ ಚಾಲನೆ; ಮಾಲೀಕನಿಗೆ ಬಿತ್ತು 25,000 ದಂಡ!

Prabhakara R Prabhakara R Aug 25, 2025 9:44 PM

ತಿಪಟೂರು: ಅಪ್ರಾಪ್ತ ವಯಸ್ಸಿನ ಬಾಲಕ ಬೈಕ್‌ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಾಲೀಕನಿಗೆ 25,000 ರೂ. ದಂಡವನ್ನು ತಿಪಟೂರಿನ ಸಿಜೆ & ಜೆಎಂಎಫ್‌ಸಿ ಕೋರ್ಟ್ ವಿಧಿಸಿದೆ. ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡುವುದು ಮತ್ತು ಅವರಿಗೆ ವಾಹನ ನೀಡುವುದು ಸಂಚಾರ ನಿಯಮ ಉಲ್ಲಂಘನೆಯಾಗಲಿದೆ. ಹೀಗಾಗಿ ಬೈಕ್‌ ಮಾಲೀಕನಿಗೆ ನ್ಯಾಯಾಲಯವು ಭಾರಿ ಮೊತ್ತದ ಜುಲ್ಮಾನೆ (Traffic Fine) ವಿಧಿಸಿದೆ.

ಅರಸೀಕೆರೆ ತಾಲೂಕಿನ ಬಾಣಾವರದ ಹೋಬಳಿಯ ಬಸವರಾಜಪುರ ಮೂಲದ ಜಯಂತ್ ಗೌಡ ಅರಸೀಕೆರೆ ಕಡೆಯಿಂದ ತಿಪಟೂರಿಗೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ. ಈ ವೇಳೆ ಬೆಂಗಳೂರು- ಹೊನ್ನಾವರ ಹೆದ್ದಾರಿಯ 206ರ ಕೊನೇಹಳ್ಳಿ ಸಮೀಪ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದನ್ನು ಗಮನಿಸಿದ ಹೊನ್ನವಳ್ಳಿ ಪೊಲೀಸ್ ಪಿಎಸ್ಐ ರಾಜೇಶ್ ಮತ್ತು ಸಿಬ್ಬಂದಿ ವಾಹನ ತಡೆದು, ಪರಿಶೀಲಿಸಿದಾಗ ಸವಾರ ಅಪ್ರಾಪ್ತ ವಯಸ್ಸಿನವ ಎಂಬುದು ತಿಳಿದುಬಂದಿತ್ತು. ಈ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಬೈಕ್‌ ಮಾಲೀಕ ನಿಂಗರಾಜು ಅವರಿಗೆ ದಂಡ ವಿಧಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮತ್ತು ಅದರಿಂದ ಅಪಘಾತಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಪೊಲೀಸರು ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.