ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಬೈದು ಬುದ್ಧಿವಾದ ಹೇಳಿದ್ದಕ್ಕೆ ಅಣ್ಣನ ಮಗನನ್ನೇ ಕೊಂದ ಪಾಪಿ ತಮ್ಮ!

Bagalkot News: ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಅಂಗನವಾಡಿಯಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಬಾಲಕನನ್ನು, ಪಾಪಿ ಭೀಮಪ್ಪ ಕರೆದುಕೊಂಡು ಹೋಗಿ, ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ‌ಅಮೀನಗಢ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಬೈದು ಬುದ್ಧಿವಾದ ಹೇಳಿದ್ದಕ್ಕೆ ಅಣ್ಣನ ಮಗನನ್ನೇ ಕೊಂದ ತಮ್ಮ!

Prabhakara R Prabhakara R Jul 22, 2025 10:06 PM

ಬಾಗಲಕೋಟೆ: ಅಣ್ಣ ಬೈದು ಬುದ್ಧಿವಾದ ಹೇಳಿದ್ದಕ್ಕೆ 3 ವರ್ಷದ ಮಗುವಿಗೆ ಜಾಕು ಇರಿದು ಸ್ವಂತ ಚಿಕ್ಕಪ್ಪನೇ ಕೊಂದಿರುವುದು (Murder Case) ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ. ಮಧುಕುಮಾರ್‌ ಕೊಲೆಯಾದ ಬಾಲಕ. ಭೀಮಪ್ಪ ಕೊಲೆ ಆರೋಪಿಯಾಗಿದ್ದಾನೆ. ಅಂಗನವಾಡಿಗೆ ಹೋಗಿದ್ದ ಬಾಲಕನನ್ನು ಚಿಕ್ಕಪ್ಪ ಭೀಮಪ್ಪ ನೇರವಾಗಿ ಮನೆಗೆ ಕರೆದುಕೊಂಡು ಹೋಗಿ, ಹರಿತ ಆಯುಧದಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.

ಬೆನಕನವಾಡಿ ಗ್ರಾಮದ ಮಾರುತಿ ವಾಲಿಕಾರ ಎಂಬುವರ 3 ವರ್ಷದ ಮಗ ಮಧುಕುಮಾರ್‌ನ ಪ್ರಾಣವನ್ನು ಚಿಕ್ಕಪ್ಪ ಭೀಮಪ್ಪ ತೆಗೆದಿದ್ದಾನೆ. ಮಂಗಳವಾರ ಬೆಳಗ್ಗೆ ಮಗುವಿನ ತಂದೆ-ತಾಯಿ ಹೊಲದ ಕೆಲಸಕ್ಕೆ ಹೋಗಿದ್ದರು. ಅಂಗನವಾಡಿಯಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಬಾಲಕನನ್ನು, ಪಾಪಿ ಭೀಮಪ್ಪ ಕರೆದುಕೊಂಡು ಹೋಗಿ, ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ‌ಮುದ್ದಾದ ಮಗು‌ ಕಳೆದುಕೊಂಡ‌ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಬಾಲಕ ಮಧುಕುಮಾರ ತಂದೆ ಮಾರುತಿಗೆ ಆರೋಪಿ ಭೀಮಪ್ಪ ಡೊಡ್ಡಪ್ಪನ ಮಗನಾಗಿದ್ದಾನೆ. ಅಮೀನಗಢ ಪೊಲೀಸರು ಆರೋಪಿ ಭೀಮಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸಿಟ್ಟು ಬಂತು ಕೊಲೆ ಮಾಡಿದೆ ಎಂದು ಮಾತ್ರ ಹೇಳಿದ್ದಾನೆ. ಆದರೆ ಕಳೆದ ವರ್ಷ ಭೀಮಪ್ಪ ತನ್ನ ಪತ್ನಿ ಜತೆ ಜಗಳವಾಡಿ, ಕಲ್ಲಿನಿಂದ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಆಗ ಬಾಲಕ ಮಧುಕುಮಾರನ ತಂದೆ ಮಾರುತಿ ಭೀಮಪ್ಪನಿಗೆ ಬೈದು ಬುದ್ಧಿ ಹೇಳಿದ್ದನಂತೆ. ಅದೇ ಸೇಡಿನಿಂದ ಹೀಗ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಸುದ್ದಿಯನ್ನೂ ಓದಿ | Lucknow Murder: 10 ವರ್ಷಗಳ ಹಿಂದೆ ತಾಯಿಯನ್ನು ಅವಮಾನಿಸಿದ್ದ ವ್ಯಕ್ತಿಯ ಕೊಲೆ; ಆರೋಪಿಗಳು ಸಿಕ್ಕಿಬಿದ್ದಿದೇ ರೋಚಕ..!

ವಿಷಾಹಾರ ಸೇವನೆ, ತಂದೆ- ಮಗಳು ಸಾವು, ಇನ್ನೂ ಮೂವರು ಗಂಭೀರ

ರಾಯಚೂರು: ರಾಯಚೂರಿನಲ್ಲಿ (Raichur News) ಘೋರ ದುರಂತವೊಂದು ಸಂಭವಿಸಿದೆ. ಮನೆಯೂಟ (food posion) ಸೇವಿಸಿ ಅಸ್ವಸ್ಥಗೊಂಡಿದ್ದ ತಂದೆ, ಮಗಳು (death) ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ತಂದೆ ರಮೇಶ್ (35) ಹಾಗೂ ಮಗಳು ನಾಗಮ್ಮ (8) ಮೃತರು. ಅಸ್ವಸ್ಥಗೊಂಡಿದ್ದ ಪತ್ನಿ, ಮೂವರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ತಂದೆ ಹಾಗೂ ಮಗಳು ಮೃತಪಟ್ಟಿದ್ದಾರೆ.

ಊಟದಲ್ಲಿ ವಿಷಾಂಶ ಬೆರೆತಿರಬಹುದು ಎಂದು ಶಂಕಿಸಲಾಗಿದೆ. ಪತ್ನಿ ಪದ್ಮಾವತಿ (34), ಮಗಳು ದೀಪಾ (6) ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳಾದ ಕೃಷ್ಣ, ಚೈತ್ರಾ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.