ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shah Rukh Khan: ಶೂಟಿಂಗ್‌ ವೇಳೆ ಅವಘಡ; ಶಾರುಖ್‌ ಖಾನ್‌ಗೆ ಗಾಯ, ಚಿಕಿತ್ಸೆಗಾಗಿ ಅಮೆರಿಕಕ್ಕೆ ಶಿಫ್ಟ್‌

ಶಾರುಖ್ ಖಾನ್ (Shah Rukh Khan) ಅವರು ಕಿಂಗ್‌ (King) ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. 2026 ರಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಶಾಕಿಂಗ್‌ ಸುದ್ದಿಯೊಂದು ಹೊರ ಬಿದ್ದಿದ್ದು, ಅಭಿಮಾನಿಗಳಲ್ಲಿ ಗಾಬರಿ ಹುಟ್ಟಿಸಿದೆ.

ಶೂಟಿಂಗ್‌ ವೇಳೆ ಅವಘಡ;  ಶಾರುಖ್‌ ಖಾನ್‌ಗೆ ಗಾಯ,

Profile Vishakha Bhat Jul 19, 2025 4:14 PM

ಮುಂಬೈ: ಶಾರುಖ್ ಖಾನ್ (Shah Rukh Khan) ಅವರು ಕಿಂಗ್‌ (King) ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. 2026 ರಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಶಾಕಿಂಗ್‌ ಸುದ್ದಿಯೊಂದು ಹೊರ ಬಿದ್ದಿದ್ದು, ಅಭಿಮಾನಿಗಳಲ್ಲಿ ಗಾಬರಿ ಹುಟ್ಟಿಸಿದೆ. , ಮುಂಬೈನ (Mumbai) ಗೋಲ್ಡನ್ ಟೊಬ್ಯಾಕೊ ಸ್ಟುಡಿಯೋದಲ್ಲಿ ತೀವ್ರವಾದ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ ಶಾರುಖ್‌ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯದ ವಿವರಗಳು ಗೌಪ್ಯವಾಗಿ ಉಳಿದಿದ್ದರೂ, ಶಾರುಖ್ ಈಗ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಸದ್ದಿಲ್ಲದೆ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಶಾರುಖ್ ಖಾನ್ ಅವರು ಸ್ಟಂಟ್ ಮಾಡುತ್ತಿದ್ದರು. ಆಗ ಅವರಿಗೆ ಮಸಲ್ ಇಂಜೂರಿ ಆಗಿದೆ. ಅಷ್ಟೇನೂ ಗಂಭೀರ ಗಾಯಗಳಾಗಿಲ್ಲ ಎಂದು ವರದಿ ಹೇಳಿದೆ. ಶಾರುಖ್ ಖಾನ್​ಗೆ ವಯಸ್ಸು 60 ಸಮೀಪಿಸಿದೆ. ಈ ಸಂದರ್ಭದಲ್ಲಿ ಗಾಯಗೊಂಡರೆ ರಿಕವರಿ ಆಗೋಕೆ ಸಾಕಷ್ಟು ಸಮಯ ಬೇಕಿದೆ. ಹೀಗಾಗಿ, ಹೆಚ್ಚಿನ ಚಿಕಿತ್ಸೆ ಪಡೆಯಬೇಕಿದೆ.

ವೈದ್ಯರು ಶಾರುಖ್‌ಗೆ ಕನಿಷ್ಠ ಒಂದು ತಿಂಗಳ ಕಾಲ ಸಂಪೂರ್ಣ ವಿರಾಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆಂದು ವರದಿಯಾಗಿದೆ. ಪರಿಣಾಮವಾಗಿ, ಚಿತ್ರದ ಚಿತ್ರೀಕರಣ ವೇಳಾಪಟ್ಟಿಯನ್ನು ಸ್ಥಗಿತಗೊಳಿಸಲಾಗಿದೆ. ಫಿಲ್ಮ್ ಸಿಟಿ, ಗೋಲ್ಡನ್ ಟೊಬ್ಯಾಕೊ ಮತ್ತು ವೈಆರ್‌ಎಫ್ ಸ್ಟುಡಿಯೋಸ್‌ನಂತಹ ಸ್ಥಳಗಳನ್ನು ಆರಂಭದಲ್ಲಿ ಜುಲೈ ಮತ್ತು ಆಗಸ್ಟ್ ವರೆಗೆ ಕಾಯ್ದಿರಿಸಲಾಗಿತ್ತು, ಆದರೆ ಈಗ ಮುಂದಿನ ಸೂಚನೆ ಬರುವವರೆಗೂ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ. ಮುಂದಿನ ವೇಳಾಪಟ್ಟಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಪುನರಾರಂಭವಾಗುವ ನಿರೀಕ್ಷೆಯಿದೆ.

ಈ ಸುದ್ದಿಯನ್ನೂ ಓದಿ: Fire accident: 5 ಅಂತಸ್ತಿನ ಶಾಪಿಂಗ್ ಮಾಲ್‌ನಲ್ಲಿ ಭಾರಿ ಬೆಂಕಿ ಅವಘಡ-50 ಜನ ಬಲಿ

ಈ ಸಿನಿಮಾವು ಬಹುತಾರಾಗಣವನ್ನು ಹೊಂದಿದ್ದು, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ಅರ್ಷದ್ ವಾರ್ಸಿ, ಅಭಯ್ ವರ್ಮಾ, ಅನಿಲ್ ಕಪೂರ್, ಜಾಕಿ ಶ್ರಾಫ್, ರಾಘವ್ ಜುಯಲ್, ಜೈದೀಪ್ ಅಹ್ಲಾವತ್, ಸಖುರಾಬ್ಲಾವತ್ ಸೇರಿದಂತೆ ಹಲವರು ನಟಿಸಿದ್ದಾರೆ. ಅಧಿಕೃತ ಬಿಡುಗಡೆ ದಿನಾಂಕ ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಚಿತ್ರವು 2026 ರ ಗಾಂಧಿ ಜಯಂತಿಯಂದು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.