ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anushree Marriage: ಅನುಶ್ರೀ ಮದುವೆ ಸುಳ್ಳು ಸುದ್ದಿಯೇ?: ಅನುಮಾನ ಮೂಡಿಸಿದ ಇನ್​ಸ್ಟಾಗ್ರಾಮ್ ವಿಡಿಯೋ

ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ಫಿಕ್ಸ್‌ ಆಗಿದ್ದು, ಆಗಸ್ಟ್ 28ಕ್ಕೆ ವಿವಾಹ ನಡೆಯಲಿದೆ ಎಂದು ಎಲ್ಲೆಡೆ ಹರಿದಾಡಿದೆ. ಹೀಗಿರುವಾಗ ಅನುಶ್ರೀ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ಕುತೂಹಲ ಮೂಡಿಸಿದೆ. ಇವರ ಮದುವೆ ಸುಳ್ಳು ಸುದ್ದಿಯೇ ಎಂಬ ಅನುಮಾನ ಮೂಡಿಸಿದೆ.

ಅನುಶ್ರೀ ಮದುವೆ ಸುಳ್ಳು ಸುದ್ದಿಯೇ?

Anushree Marriage

Profile Vinay Bhat Jul 21, 2025 7:35 AM

ಕನ್ನಡದ ನಂಬರ್ ಒನ್ ನಿರೂಪಕಿ ಅನುಶ್ರೀ ಅವರಿಗೆ ಕೊನೆಗೂ ಕಂಕಣಭಾಗ್ಯ ಕೂಡಿಬಂದಿದೆ ಎಂಬ ಸುದ್ದಿ ಕಳೆದ ಮೂರು-ನಾಲ್ಕು ದಿನಗಳಿಂದ ಎಲ್ಲೆಡೆ ಹರಿದಾಡುತ್ತಿದೆ. ಇದೇ ಆಗಸ್ಟ್ ತಿಂಗಳಲ್ಲಿ ಅನುಶ್ರೀ (Anchor Anushree) ಅವರ ವಿವಾಹ ಅವರ ಕುಟುಂಬದವರೇ ನೋಡಿ ಫಿಕ್ಸ್‌ ಮಾಡಿದ ಯುವ ಉದ್ಯಮಿ ಜೊತೆಗೆ ನಡೆಯಲಿದೆ ಎಂದು ಹೇಳಲಾಗಿದೆ. ಹೀಗಿರುವಾಗ ಅನುಶ್ರೀ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ಕುತೂಹಲ ಮೂಡಿಸಿದೆ. ಇವರ ಮದುವೆ ಸುಳ್ಳು ಸುದ್ದಿಯೇ ಎಂಬ ಅನುಮಾನ ಮೂಡಿಸಿದೆ.

ಅನುಶ್ರೀ ಅವರು ನಟಿಗಿಂತ ಹೆಚ್ಚು ನಿರೂಪಕಿಯಾಗಿ ಹೆಸರು ಮಾಡಿದವರು. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಅವರು ಖ್ಯಾತಿ ಗಳಿಸಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ಫಿಕ್ಸ್‌ ಆಗಿದ್ದು, ಆಗಸ್ಟ್ 28ಕ್ಕೆ ವಿವಾಹ ನಡೆಯಲಿದೆ ಎಂದು ಎಲ್ಲೆಡೆ ಹರಿದಾಡಿದೆ.

ಅಷ್ಟೇ ಅಲ್ಲದೆ ತಮ್ಮ ಫ್ಯಾಮಿಲಿ ನೋಡಿದ ಹುಡುಗನನ್ನೇ ಅನುಶ್ರೀ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಗ್ರ್ಯಾಂಡ್ ಆಗಿ ನಿರೂಪಕಿ ಅನುಶ್ರೀ ವಿವಾಹ ನಡೆಯಲಿದೆ ಎಂಬ ಸುದ್ದಿಯಿದೆ. ಆದರೆ, ಡಾ. ರಾಜ್‌ಕುಮಾರ್ ಅವರ ಹಳೆಯ ಸಿನಿಮಾವೊಂದರ ಡೈಲಾಗ್ ಇರುವ ವಿಡಿಯೋವೊಂದನ್ನು ಅನುಶ್ರೀ ಹಂಚಿಕೊಂಡು ಎಲ್ಲರ ತಲೆಗೆ ಹುಳಬಿಟ್ಟಿದ್ದಾರೆ.

"ಈ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಒಳ್ಳಯವರಾಗಿದ್ರೂ ಆಡ್ಕೋತಾರೆ, ಕೆಟ್ಟವರಾಗಿದ್ರೂ ಆಡ್ಕೋತಾರೆ. ಈ ಆಡ್ಕೋಳೋದು, ಅನ್ನೋದು ಮನುಷ್ಯನಿಗೆ ಒಂಥರಾ ಕಾಯಿಲೆ ಇದ್ದಹಾಗೆ. ಇದಕ್ಕೆ ಔಷಧಿನೇ ಇಲ್ಲ" ಎಂಬ ಸಂಭಾಷಣೆ ಇರುವ ವಿಡಿಯೋವನ್ನು ಶೇರ್ ಅನುಶ್ರೀ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

BBK 12: ಬಿಗ್ ಬಾಸ್ ಕನ್ನಡಕ್ಕೂ ನನಗು ಯಾವುದೇ ಸಂಭಂದವಿಲ್ಲ: ಫೇಸ್​ಬುಕ್​ನಲ್ಲಿ ಚಕ್ರವರ್ತಿ ಚಂದ್ರಚೂಡ್ ಪೋಸ್ಟ್

"ಅಷ್ಟೇ" ಎಂದು ಕ್ಯಾಪ್ಷನ್ ಹಾಕುವುರ ಜೊತೆಗೆ ಕೈಮುಗಿಯುತ್ತಿರುವ ಎಮೋಜಿಗಳನ್ನು ಹಾಕಿಕೊಂಡಿದ್ದಾರೆ. ಇದರ ಜೊತೆಗೆ #Spreadlove #positivity ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಕೂಡ ಬರೆದುಕೊಂಡಿದ್ದಾರೆ ಅನುಶ್ರೀ. ಈ ವಿಡಿಯೋಗೆ ನಾನಾ ಥರದ ಕಾಮೆಂಟ್‌ಗಳನ್ನು ಹಾಕಲಾಗಿದೆ. ಅಷ್ಟಕ್ಕೂ ಅನುಶ್ರೀ ಅವರು ಈ ರೀತಿಯ ವಿಡಿಯೋವನ್ನು ಏಕೆ ಹಂಚಿಕೊಂಡರು?, ಮದುವೆ ಬಗ್ಗೆ ಹರಡುತ್ತಿರುವ ಸುದ್ದಿಗೆ ಇದು ಉತ್ತರವೇ ಎಂಬುದು ಗೊತ್ತಿಲ್ಲ. ಮತ್ತೊಂದೆಡೆ ಈ ಮದುವೆ ಬಗ್ಗೆ ಅನುಶ್ರೀ ಆಗಲಿ ಅಥವಾ ಅವರ ಕುಟುಂಬದವರಾಗಲಿ ಈವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಅಪ್ಪು ಅಭಿಮಾನಿ ಅನುಶ್ರೀ ಕೈ ಹಿಡಿಯಲಿರುವ ಹುಡುಗ:

ಅನುಶ್ರೀ ಪುನೀತ್‌ ರಾಜ್‌ಕುಮಾರ್‌ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಅತ್ತ ರಾಜ್‌ಕುಮಾರ್‌ ಫ್ಯಾಮಿಲಿಗೆ ರೋಷನ್‌ ಬಹಳ ಆತ್ಮೀಯರಂತೆ. ಗಂಧದ ಗುಡಿ ಸಿನಿಮಾ ಇವೆಂಟ್ ನಲ್ಲಿ ಅನುಶ್ರೀ ಹಾಗೂ ರೋಷನ್‌ ಭೇಟಿಯಾಗದ್ದರಂತೆ. ಈ ಇವೆಂಟ್‌ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರು ಆಯೋಜನೆ ಮಾಡಿದ್ದರು. ಅದೇ ಕಾರ್ಯಕ್ರಮದಲ್ಲಿ ಅನುಶ್ರೀ ನಿರೂಪಣೆಯನ್ನು ಮಾಡಿದ್ದರು. ರೋಷನ್ ಕೂಡ ಕಾರ್ಯಕ್ರಮ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದರು. ಆಗ ಇವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಅದೇ ಸ್ನೇಹ ಇದೀಗ ಮದುವೆಯವರೆಗೆ ಬಂದು ನಿಂತಿದೆ ಎಂಬ ಮಾತು ಕೂಡ ಇದೆ.