Bomb Blast: LOC ಬಳಿ ನೆಲಬಾಂಬ್ ಸ್ಫೋಟ; ಓರ್ವ ಅಗ್ನಿವೀರ್ ಸೈನಿಕ ಹುತಾತ್ಮ ,ಇಬ್ಬರಿಗೆ ಗಂಭೀರ ಗಾಯ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ಸಂಭವಿಸಿದ ನೆಲಬಾಂಬ್ ಸ್ಫೋಟಗೊಂಡಿದ್ದು, ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೃಷ್ಣ ಘಾಟಿಯ ಸಾಮಾನ್ಯ ಪ್ರದೇಶದಲ್ಲಿ ಏರಿಯಾ ಡಾಮಿನೇಷನ್ ಗಸ್ತು ತಿರುಗುತ್ತಿದ್ದಾಗ, ಒಂದು ಗಣಿ ಸ್ಫೋಟ ಸಂಭವಿಸಿದೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ಸಂಭವಿಸಿದ ನೆಲಬಾಂಬ್ (Bomb Blast) ಸ್ಫೋಟಗೊಂಡಿದ್ದು, ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೃಷ್ಣ ಘಾಟಿಯ ಸಾಮಾನ್ಯ ಪ್ರದೇಶದಲ್ಲಿ ಏರಿಯಾ ಡಾಮಿನೇಷನ್ ಗಸ್ತು ತಿರುಗುತ್ತಿದ್ದಾಗ, ಒಂದು ಗಣಿ ಸ್ಫೋಟ ಸಂಭವಿಸಿದೆ. ಇದರಲ್ಲಿ ಒಬ್ಬ ಅಗ್ನಿವೀರ್ ಜವಾನ್ ಹುತಾತ್ಮರಾದರು. ಗಾಯಾಳುಗಳನ್ನು, ಅವರಲ್ಲಿ ಒಬ್ಬರು ಜೆಸಿಒ ಆಗಿದ್ದು, ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕೃಷ್ಣ ಘಾಟಿ ಬ್ರಿಗೇಡ್‌ನ ಸಾಮಾನ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ನೆಲ ಬಾಂಬ್ ಸ್ಫೋಟ ಗೊಂಡಿದ್ದು, 7 ಜೆಎಟಿ ರೆಜಿಮೆಂಟ್‌ನ ಅಗ್ನಿವೀರ್ ಲಲಿತ್ ಕುಮಾರ್ ಅವರು ಹುತಾತ್ಮಗೊಂಡಿದ್ದಾರೆ ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದುಃಖದ ಈ ಸಮಯದಲ್ಲಿ ನಾವು ದುಃಖಿತ ಕುಟುಂಬದೊಂದಿಗೆ ನಿಲ್ಲುತ್ತೇವೆ" ಎಂದು ಅದು ಹೇಳಿದೆ.
ಜಾರ್ಖಂಡ್‌ನ ಗೋಮಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಿರ್ಹೋರ್ಡೆರಾ ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳು ಹತರಾಗಿದ್ದು, ಓರ್ವ ಸಿಆರ್ಪಿಎಫ್ ಯೋಧ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿರ್ಹೋರ್ಡೆರಾ ಅರಣ್ಯದಲ್ಲಿ ಬೆಳಗ್ಗೆ 5.30ರ ಸುಮಾರಿಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ಆರಂಭವಾಯಿತು. ನಕ್ಸಲರು ಅಡಗಿರುವ ಮಾಹಿತಿ ಮೇರೆಗೆ ನಡೆದ ಈ ಶೋಧ ಕಾರ್ಯಾಚರಣೆಯಲ್ಲಿ ಇಬ್ಬರು ಹತರಾಗಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಸಿಆರ್ಪಿಎಫ್ನ ಕೊಬ್ರಾ ಪಡೆಯ ಯೋಧ ಹುತಾತ್ಮರಾಗಿದ್ದಾರೆ ಎಂದು ಬೊಕೊರೊ ವಲಯದ ಐಜಿ ಕ್ರಾಂತಿ ಕುಮಾರ್ ಗದಿದೆಸಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ: Anti Naxal Operation: ತಲೆಗೆ 45ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್ ಕಮಾಂಡರ್ ಎನ್‌ಕೌಂಟರ್
ಇತ್ತೀಚೆಗೆ ಪಲಮು ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಕಮಾಂಡರ್ ಗುಂಡೇಟಿಗೆ ಬಲಿಯಾಗಿದ್ದ. ಈ ಕಾರ್ಯಾಚರಣೆ ವೇಳೆ 15 ಲಕ್ಷ ಬಹುಮಾನ ಘೋಷಿತ ಮತ್ತೊಬ್ಬ ಮಾವೋವಾದಿಯೂ ಗಾಯಗೊಂಡಿದ್ದ. ಸ್ಥಳದಲ್ಲಿ ಸೆಲ್ಫ್ ಲೋಡಿಂಗ್ ರೈಫಲ್ ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು. ಮುಂದಿನ ವರ್ಷ ಅಂದರೆ, 2026ರ ಮಾರ್ಚ್ 31ರೊಳಗೆ ನಕ್ಸಲಿಸಂ ಅನ್ನು ದೇಶದಿಂದ ಬೇರುಸಮೇತ ಕಿತ್ತು ಹಾಕಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ. ಅದರಂತೆ, ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದ್ದು, ವಿಶೇಷ ಪ್ಯಾಕೇಜ್ಗಳ ಮೂಲಕ ನಕ್ಸಲರ ಶರಣಾಗತಿಗೆ ಕೂಡ ತಿಳಿಸಲಾಗಿದೆ. ಅವರನ್ನು ಮುನ್ನೆಲೆಗೆ ಕರೆತರುವ ಪ್ರಯತ್ನವೂ ನಡೆಯುತ್ತಿದೆ.