ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

F-16 Pilot: ಏರ್‌ಶೋಗೆ ತಯಾರಿ ನಡೆಸುತ್ತಿದ್ದ ವೇಳೆ ಫೈಟರ್‌ ಜೆಟ್‌ ಪತನ; ಪೈಲಟ್‌ ಸಾವು

Airshow Rehearsal: ಏರ್‌ಶೋಗೆ ತಯಾರಿ ನಡೆಯುತ್ತಿದ್ದ ವೇಳೆ ಪೋಜ್ನಾನ್ ಬಳಿಯ 31 ನೇ ಟ್ಯಾಕ್ಟಿಕಲ್ ಏರ್ ಬೇಸ್‌ನಿಂದ ಬಂದ ವಿಮಾನ ಅಪಘಾತಕ್ಕೀಡಾಗಿದೆ ಎಂದು ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ತಿಳಿಸಿದೆ. ಇನ್ನು ಏರ್‌ ಶೋ ವೇಳೆ ಯಾವುದೇ ಪ್ರೇಕ್ಷಕರು ಗಾಯಗಳಾಗಿಲ್ಲ ಎಂದು ಅವರು ಹೇಳಿದರು.

ಏರ್‌ಶೋಗೆ ತಯಾರಿ ನಡೆಸುತ್ತಿದ್ದ ವೇಳೆ ಫೈಟರ್‌ ಜೆಟ್‌ ಪತನ; ಪೈಲಟ್‌ ಸಾವು

Rakshita Karkera Rakshita Karkera Aug 29, 2025 10:57 AM

ಪೋಲೆಂಡ್‌: ವೈಮಾನಿಕ ಪ್ರದರ್ಶನದ ಪೂರ್ವಾಭ್ಯಾಸದ ಸಮಯದಲ್ಲಿ ಪೋಲಿಷ್ ವಾಯುಪಡೆಯ F-16 ಯುದ್ಧ ವಿಮಾನ(F-16 Pilot) ಪತನಗೊಂಡು ಸೇನಾ ಪೈಲಟ್ ಸಾವನ್ನಪ್ಪಿದ್ದಾರೆ. ಪೋಲೆಂಡ್‌ನ ಉಪ ಪ್ರಧಾನ ಮಂತ್ರಿ ವ್ಲಾಡಿಸ್ಲಾ ಕೊಸಿನಿಯಾಕ್-ಕಮಿಸ್ಜ್ ಈ ಸುದ್ದಿಯನ್ನು ದೃಢಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ. ದುರಂತಕ್ಕೆ ಸಂಬಂಧಿದಂತೆ ವಿಡಿಯೊವೊಂದು ವೈರಲ್ ಆಗುತ್ತಿದ್ದು, ವಿಡಿಯೊದಲ್ಲಿ, ಜೆಟ್ ನೆಲಕ್ಕೆ ಬೀಳುವ ಮೊದಲು ಬ್ಯಾರೆಲ್-ರೋಲ್ ಏರೋಬ್ಯಾಟಿಕ್ ಕುಶಲತೆಯನ್ನು ನಿರ್ವಹಿಸುತ್ತಿರುವುದನ್ನು ಕಾಣಬಹುದು. ಬಳಿಕ ಅದು ಸ್ಫೋಟಗೊಂಡು ಬೆಂಕಿಯ ಉಂಡೆಯಂತೆ ಕಂಡು ಬಂದಿದೆ. ಬೆಂಕಿಯ ಜ್ವಾಲೆಯಲ್ಲಿ ಮುಳುಗಿದ್ದ ಜೆಟ್, ರನ್‌ವೇ ಮೇಲೆ ಬಿದ್ದಿದೆ.



ಈ ಘಟನೆ ತಡರಾತ್ರಿ 11 ಗಂಟೆಗೆ ಸಂಭವಿಸಿದೆ ಎಂದು ವರದಿಯಾಗಿದೆ. ಏರ್‌ಶೋಗೆ ತಯಾರಿ ನಡೆಯುತ್ತಿದ್ದ ವೇಳೆ ಪೋಜ್ನಾನ್ ಬಳಿಯ 31 ನೇ ಟ್ಯಾಕ್ಟಿಕಲ್ ಏರ್ ಬೇಸ್‌ನಿಂದ ಬಂದ ವಿಮಾನ ಅಪಘಾತಕ್ಕೀಡಾಗಿದೆ ಎಂದು ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ತಿಳಿಸಿದೆ. ಇನ್ನು ಏರ್‌ ಶೋ ವೇಳೆ ಯಾವುದೇ ಪ್ರೇಕ್ಷಕರು ಗಾಯಗಳಾಗಿಲ್ಲ ಎಂದು ಅವರು ಹೇಳಿದರು. ಇನ್ನು ಘಟನೆ ಬೆನ್ನಲ್ಲೇ ಈ ವಾರಾಂತ್ಯದಲ್ಲಿ ನಡೆಯಬೇಕಿದ್ದ ಏರ್‌ಶೋ ರಾಡೋಮ್ 2025 ಅನ್ನು ರದ್ದುಗೊಳಿಸಲಾಗಿದೆ.



ಈ ಸುದ್ದಿಯನ್ನೂ ಓದಿ: Flight Emergency: ದೆಹಲಿ- ಗೋವಾ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ; ಪ್ಯಾನ್‌, ಪ್ಯಾನ್‌ ಎಂದು ಪೈಲಟ್‌ ಘೋಷಣೆ

ಇನ್ನು ಘಟನಾ ಸ್ಥಳಕ್ಕೆ ಪೋಲೆಂಡ್‌ನ ಉಪ ಪ್ರಧಾನ ಮಂತ್ರಿ ವ್ಲಾಡಿಸ್ಲಾ ಕೊಸಿನಿಯಾಕ್-ಕಮಿಸ್ಜ್ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, F-16 ವಿಮಾನ ಅಪಘಾತದಲ್ಲಿ, ಪೋಲಿಷ್ ಸೈನ್ಯದ ಪೈಲಟ್ ಹುತಾತ್ಮರಾಗಿದ್ದಾರೆ. ಅವರು ಸದಾ ತಮ್ಮ ದೇಶಕ್ಕೆ ಸಮರ್ಪಣಾಭಾವ ಮತ್ತು ಧೈರ್ಯದಿಂದ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿ. ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಕುಟುಂಬ ಮತ್ತು ಪ್ರೀತಿಪಾತ್ರರಿಗೆ, ನಾನು ನನ್ನ ಆಳವಾದ ಸಂತಾಪವನ್ನು ಅರ್ಪಿಸುತ್ತೇನೆ. ಇದು ವಾಯುಪಡೆ ಮತ್ತು ಇಡೀ ಪೋಲಿಷ್ ಸೈನ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರು ಹೇಳಿದರು.