ʼಭಾರತದ 5 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆʼ ಎಂದು ಸುಳ್ಳು ಬೊಗಳಿದ ಡಾನ್!
Operation Sindoor: ಭಾರತ ದಾಳಿ ಎಸಗಿ 26 ಅಮಾಯಕ ಪಾಕ್ ನಾಗರಿಕರನ್ನು ಕೊಂದಿದೆ ಎಂದು ಡಾನ್ ವರದಿ ಮಾಡಿದೆ. ಹಾಗೇ, ದಾಳಿಗೆ ಪ್ರತೀಕಾರವಾಗಿ ಪಾಕ್ ಸೈನ್ಯ ಭಾರತದ 5 ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದಿದೆ. ಇಂಥ ಯಾವುದೇ ಘಟನೆ ನಡೆದಿರುವ ಕುರಿತು ಭಾರತ ಸೇನೆ ವರದಿ ಮಾಡಿಲ್ಲ.

ಡಾನ್‌ನಲ್ಲಿ ದಾಳಿಯ ಸುದ್ದಿ

ನವದೆಹಲಿ: ಒಂದು ಕಡೆ ಭಾರತದ ಆಪರೇಶನ್ ಸಿಂಧೂರ್ (Operation Sindoor) ಹೆಸರಿನ ವಾಯುದಾಳಿಯಲ್ಲಿ (india pakistan war news in kannada) ಪಾಕಿಸ್ತಾನದ ಉಗ್ರಗಾಮಿಗಳು ಲಬೋ ಲಬೋ ಎನ್ನುತ್ತಿದ್ದರೆ, ಇನ್ನೊಂದು ಕಡೆ ಅಲ್ಲಿನ ಕೆಲವು ಮೀಡಿಯಾಗಳು ಭಾರತದ ವಿರುದ್ಧ ವರದಿ ಮಾಡುವುದರಲ್ಲಿ ತೊಡಗಿವೆ. ಪಾಕ್ ಮೀಡಿಯಾಗಳಲ್ಲಿ ಪ್ರಮುಖವಾಗಿರುವ ʼಡಾನ್ʼ ಇಂದು ದಾಳಿಯ ಬಳಿಕ ತನ್ನ ವೆಬ್‌ಸೈಟ್‌ನಲ್ಲಿ "ಭಾರತದ ಐದು ಜೆಟ್‌ಗಳನ್ನು ಪಾಕಿಸ್ತಾನದ ಸೇನೆ ಹೊಡೆದುರುಳಿಸಿದೆʼ ಎಂದು ವರದಿ ಮಾಡಿ ಹಾಸ್ಯಕ್ಕೆ ಒಳಗಾಯಿತು. ʼಭಾರತ ದಾಳಿ ನಡೆಸಿ 26 ಪಾಕಿಸ್ತಾನಿ ನಾಗರಿಕರನ್ನು ಕೊಂದಿದೆʼ ಎಂದು ಕೂಡ ಇದು ವರದಿ ಮಾಡಿದೆ.
ನಿಷೇಧಿತ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರ ಪ್ರಧಾನ ಕೇಂದ್ರಗಳನ್ನು 'ಆಪರೇಷನ್ ಸಿಂಧೂರ್' ಅಡಿಯಲ್ಲಿ ಗುರಿಯಾಗಿಸಲಾಗಿದ್ದು, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಅಡಗುತಾಣಗಳ ಮೇಲೆ ಐಎಎಫ್ ರಾತ್ರಿ ದಾಳಿ ನಡೆಸಿದೆ. ಕೆಲವು ವರದಿಗಳ ಪ್ರಕಾರ, ನೂರಕ್ಕೂ ಅಧಿಕ ಉಗ್ರರು ಈ ದಾಳಿಗಳಲ್ಲಿ ಮೃತಪಟ್ಟಿದ್ದಾರೆ. "ಪಾಕಿಸ್ತಾನದ ಸೇನಾ ನೆಲೆಗಳಿಗೆ ತಾನು ದಾಳಿ ಮಾಡಿಲ್ಲ" ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ನಿಖರವಾದ ಕಾರ್ಯಾಚರಣೆಯಲ್ಲಿ ಗುರಿಯಾದವುಗಳಲ್ಲಿ ಬಹಾವಲ್ಪುರದ ಮರ್ಕಜ್ ಸುಭಾನ್ ಅಲ್ಲಾ, ತೆಹ್ರಾ ಕಲಾನ್‌ನಲ್ಲಿರುವ ಸರ್ಜಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಶಿಬಿರಗಳಿವೆ. ಇವೆಲ್ಲವೂ ನಿಷೇಧಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪಿನ ಶಿಬಿರಗಳು.
जय हिन्द की सेना. भारत माता की जय.🇮🇳 #OperationSindooor pic.twitter.com/0VrWavXmal
— Awanish Sharan 🇮🇳 (@AwanishSharan) May 7, 2025
ಮುರ್ಡಿಕ್‌ನಲ್ಲಿರುವ ಮರ್ಕಜ್ ತೈಬಾ, ಬರ್ನಾಲಾದ ಮರ್ಕಜ್ ಅಹ್ಲೆ ಹದೀಸ್ ಮತ್ತು ಮುಜಫರಾಬಾದ್‌ನ ಶ್ವಾಯ್ನ್ ಅಲ್ಲಾಗಳು ನಿಷೇಧಿತ ಲಷ್ಕರ್-ಎ-ತೈಬಾ ಶಿಬಿರಗಳು. ಮತ್ತು ಕೋಟ್ಲಿಯಲ್ಲಿರುವ ಮಕಾಜ್ ರಹೀಲ್ ಶಾಹಿದ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ಮೆಹಮೂನಾ ಜೋಯಾಗಳು ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್‌ನ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳು.
ಏತನ್ಮಧ್ಯೆ, ಭಾರತದಲ್ಲಿ ಡಾನ್ ನ್ಯೂಸ್ ಮತ್ತು ಜಿಯೋ ನ್ಯೂಸ್ ಸೇರಿದಂತೆ ಹಲವಾರು ಪಾಕಿಸ್ತಾನಿ ಸುದ್ದಿ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ. ಡಾನ್ ಪತ್ರಿಕೆ ಭಾರತ ವಿರೋಧಿ ಸುಳ್ಳುಗಳನ್ನು ಹರಡುವುದರಲ್ಲಿ ನಿರತವಾಗಿದೆ. ಭಾರತ ದಾಳಿ ಎಸಗಿ 26 ಅಮಾಯಕ ಪಾಕ್ ನಾಗರಿಕರನ್ನು ಕೊಂದಿದೆ ಎಂದು ಇದು ವರದಿ ಮಾಡಿದೆ. ಹಾಗೇ, ದಾಳಿಗೆ ಪ್ರತೀಕಾರವಾಗಿ ಪಾಕ್ ಸೈನ್ಯ ಭಾರತದ 5 ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದಿದೆ. ಇಂಥ ಯಾವುದೇ ಘಟನೆ ನಡೆದಿರುವ ಕುರಿತು ಭಾರತ ಸೇನೆ ವರದಿ ಮಾಡಿಲ್ಲ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ನಾಗರಿಕರನ್ನು ಹತ್ಯೆ ಮಾಡಿದ ಎರಡು ವಾರಗಳ ನಂತರ 'ಆಪರೇಷನ್ ಸಿಂಧೂರ್' ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಗಿದೆ. "ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ 'ಆಪರೇಷನ್ ಸಿಂಧೂರ್' ಅನ್ನು ಪ್ರಾರಂಭಿಸಿದವು. ಅಲ್ಲಿಂದ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸಲಾಗಿದೆ ಮತ್ತು ನಿರ್ದೇಶಿಸಲಾಗಿದೆ" ಎಂದು ರಕ್ಷಣಾ ಸಚಿವಾಲಯ ಬೆಳಿಗ್ಗೆ 1.44ಕ್ಕೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Operation Sindoor: ಭಾರತ ಕಾರ್ಯಾಚರಣೆ ನಿಲ್ಲಿಸಿದರೆ, ನಾವೂ ಸೇನೆ ಹಿಂತೆಗೆದುಕೊಳ್ಳಲು ಸಿದ್ಧ; ಪಾಕಿಸ್ತಾನ ರಕ್ಷಣಾ ಸಚಿವ