ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Land Slide: ಜಮ್ಮು ಕಾಶ್ಮೀರದಲ್ಲಿ ಭಾರೀ ಭೂಕುಸಿತ; SDM ರಾಜಿಂದರ್ ಸಿಂಗ್ ರಾಣಾ, ಪುತ್ರ ಸ್ಥಳದಲ್ಲಿಯೇ ಸಾವು, ಪತ್ನಿಗೆ ಗಂಭೀರ ಗಾಯ

ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಭೂ ಕುಸಿತ ಸಂಭವಿಸಿದೆ. ಶುಕ್ರವಾರ ನಡೆದ ಘಟನೆಯಲ್ಲಿ ಚಲಿಸುತ್ತಿದ್ದ ವಾಹನಕ್ಕೆ ಬಂಡೆ ಡಿಕ್ಕಿ ಹೊಡೆದ ಪರಿಣಾಮ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಅವರ ಮಗ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಾರೀ ಭೂಕುಸಿತ; SDM ರಾಜಿಂದರ್ ಸಿಂಗ್ ರಾಣಾ, ಪುತ್ರ ಸ್ಥಳದಲ್ಲಿಯೇ ಸಾವು

Vishakha Bhat Vishakha Bhat Aug 2, 2025 10:51 AM

ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ರಿಯಾಸಿಯಲ್ಲಿ ಭೂ ಕುಸಿತ (Land Slide) ಸಂಭವಿಸಿದೆ. ಶುಕ್ರವಾರ ನಡೆದ ಘಟನೆಯಲ್ಲಿ ಚಲಿಸುತ್ತಿದ್ದ ವಾಹನಕ್ಕೆ ಬಂಡೆ ಡಿಕ್ಕಿ ಹೊಡೆದ ಪರಿಣಾಮ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಅವರ ಮಗ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವಾ ಅಧಿಕಾರಿ ರಾಜಿಂದರ್ ಸಿಂಗ್ ರಾಣಾ ಮೃತ ಅಧಿಕಾರಿ. ರಾಜಿಂದರ್ ಸಿಂಗ್ ರಾಣಾ ಅವರು ಧರ್ಮರಿಯಿಂದ ತಮ್ಮ ಸ್ಥಳೀಯ ಗ್ರಾಮವಾದ ಪಟ್ಟಿಯನ್‌ಗೆ ತಮ್ಮ ಕುಟುಂಬದೊಂದಿಗೆ ತೆರಳುತ್ತಿದ್ದಾಗ ಸಲೂಖ್ ಇಖ್ತರ್ ನಲ್ಲಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.

ರಿಯಾಸಿಯ ಹಲವೆಡೆ ಭೂ ಕುಸಿತ ಸಂಭವಿಸಿದೆ. ಭೂಕುಸಿತದ ಒಂದು ಭಾಗವಾಗಿದ್ದ ದೊಡ್ಡ ಬಂಡೆಯೊಂದು ಅವರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವಾ ಅಧಿಕಾರಿ ರಾಣಾ ಮತ್ತು ಅವರ ಮಗ ಸ್ಥಳದಲ್ಲೇ ಸಾವನ್ನಪ್ಪಿದರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಮತ್ತು ಪ್ರಾಥಮಿಕ ಚಿಕಿತ್ಸೆಯ ನಂತರ, ಗಂಭೀರವಾಗಿ ಗಾಯಗೊಂಡವರನ್ನು ರಿಯಾಸಿಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2011 ರ ಬ್ಯಾಚ್ ಅಧಿಕಾರಿಯಾದ ರಾಣಾ ಅವರನ್ನು ರಾಮನಗರ ಎಸ್‌ಡಿಎಂ ಆಗಿ ನೇಮಿಸಲಾಗಿತ್ತು.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಎಸ್‌ಡಿಎಂ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ರಿಯಾಸಿಯ ಧರ್ಮರಿಯಲ್ಲಿ ಸಂಭವಿಸಿದ ಭೂಕುಸಿತ ಘಟನೆಯಿಂದ ತೀವ್ರ ದುಃಖವಾಗಿದೆ. ಈ ಘಟನೆಯಲ್ಲಿ ನಾವು ಒಬ್ಬ ಅತ್ಯುತ್ತಮ ಅಧಿಕಾರಿ, ಎಸ್‌ಡಿಎಂ ರಾಮನಗರ ರಾಜಿಂದರ್ ಸಿಂಗ್ ಮತ್ತು ಅವರ ಮಗನನ್ನು ಕಳೆದುಕೊಂಡಿದ್ದೇವೆ. ಅವರ ಪತ್ನಿ ಶೀಘ್ರವಾಗಿ ಗುಣಮುಖರಾಗಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಕೂಡ ಸಂತಾಪ ಸೂಚಿಸಿದ್ದಾರೆ. ಈ ವಾರದ ಆರಂಭದಲ್ಲಿ, ಪೂರ್ವ ಲಡಾಖ್‌ನಲ್ಲಿ ಸೇನಾ ವಾಹನದ ಮೇಲೆ ಬಂಡೆಯೊಂದು ಬಿದ್ದು ಇಬ್ಬರು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Krishna Byre Gowda: ಭೂಕುಸಿತ, ಕಡಲ ಕೊರೆತ ತಡೆಗೆ 800 ಕೋಟಿ ಅನುದಾನ-ಕೃಷ್ಣ ಬೈರೇಗೌಡ

ಕಳೆದ ಹಲವಾರು ದಿನಗಳಿಂದ ಜಮ್ಮು ಕಾಶ್ಮೀರದಾದ್ಯಂತ ಭಾರೀ ಮಳೆಯಾಗುತ್ತಿದೆ. ಉಧಂಪುರ್‌, ರಿಯಾಸಿ ಸೇರಿದಂತೆ ಹಲವು ಕಡೆ ಭೂಕುಸಿತ ಸಂಭವಿಸಿದೆ. ರಿಯಾಸಿ ಜಿಲ್ಲೆಯಲ್ಲಿ, ವೈಷ್ಣೋದೇವಿ ತೀರ್ಥಯಾತ್ರೆ ಮಾರ್ಗದ ಬಂಗಂಗಾ ಬಳಿ ಸಂಭವಿಸಿದ ಭೂಕುಸಿತದಲ್ಲಿ ನಾಲ್ವರು ಭಕ್ತರು ಗಾಯಗೊಂಡರೆ, ಪೂಂಚ್‌ನಲ್ಲಿ ಜುಲೈ 21 ರಂದು ಐದು ವರ್ಷದ ಶಾಲಾ ಬಾಲಕನೊಬ್ಬ ಸಾವನ್ನಪ್ಪಿದ್ದ.