IND vs ENG: ಜಸ್‌ಪ್ರೀತ್ ಬುಮ್ರಾ ಹೇಳಿದ್ದ ಮಾತನ್ನು ರಿವೀಲ್ ಮಾಡಿದ ಮೊಹಮ್ಮದ್ ಸಿರಾಜ್!
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ದಾಳಿ ನಡೆಸಿ 4 ವಿಕೆಟ್ ಕಬಳಿಸಿದರು. ಎರಡನೇ ದಿನದಾಟದ ಅಂತ್ಯಕ್ಕೆ ಮೊಹಮ್ಮದ್ ಸಿರಾಜ್, ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಮಾತನ್ನು ರಿವೀಲ್ ಮಾಡಿದ್ದಾರೆ.

ಜಸ್‌ಪ್ರೀತ್ ಬುಮ್ರಾ ಬಗ್ಗೆ ಮೊಹಮ್ಮದ್ ಸಿರಾಜ್ ಹೇಳಿಕೆ.

ಲಂಡನ್: ಇಲ್ಲಿನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಇದೀಗ ನಡೆಯುತ್ತಿರುವ ಐದನೇ ಹಾಗೂ ಟೆಸ್ಟ್ ಸರಣಿಯ (IND vs ENG) ಕೊನೆಯ ಪಂದ್ಯದಲ್ಲಿ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಆಡುತ್ತಿದೆ. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಸಲುವಾಗಿ ಬುಮ್ರಾ ಓವಲ್ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಬುಮ್ರಾ ಅನಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) ಭಾರತ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಅದರಂತೆ ಎರಡನೇ ದಿನ ಮಾರಕ ಬೌಲಿಂಗ್ ದಾಳಿ ನಡೆಸಿದ ಸಿರಾಜ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಎರಡನೇ ದಿನದಾಟದ ಬಳಿಕ ನಿರ್ಗಮಿತ ಜಸ್‌ಪ್ರೀತ್ ಬುಮ್ರಾ ಹೇಳಿದ್ದ ಮಾತನ್ನು ರಿವೀಲ್ ಮಾಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರು ಜೊತೆಯಾಗಿ ಹಲವು ಮಾರಕ ಸ್ಪೆಲ್‌ಗಳನ್ನು ಹಾಕಿದ್ದಾರೆ. ಈ ಇಬ್ಬರು ಜೊತೆಯಾಗಿ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಬಿಸಿಸಿಐ ಜೊತೆ ಮಾತನಾಡಿದ ಮೊಹಮ್ಮದ್ ಸಿರಾಜ್‌ಗೆ ಬುಮ್ರಾ ಈ ಪಂದ್ಯದಲ್ಲಿ ಆಡಿ 5 ವಿಕೆಟ್ ಪಡೆಯಬೇಕಾದ ಅಗತ್ಯವಿತ್ತು, ಏಕೆ ಅವರು ನಿರ್ಗಮಿಸಿದ್ದಾರೆಂದು ಕೇಳಲಾಗಿತ್ತು. ಇದಕ್ಕೆ ಸಿರಾಜ್, ನಾನು ಪಂದ್ಯದಲ್ಲಿ ಆಡಿ 5 ವಿಕೆಟ್ ಪಡೆಯಬೇಕೆಂದು ಬುಮ್ರಾ ಹೇಳಿದ್ದರು ಎಂಬುದನ್ನು ರಿವೀಲ್ ಮಾಡಿದ್ದಾರೆ.
IND vs ENG: ಸಿರಾಜ್-ಪ್ರಸಿಧ್ ಮಾರಕ ದಾಳಿಗೆ ಇಂಗ್ಲೆಂಡ್ 247ಕ್ಕೆ ಆಲ್‌ಔಟ್, ಭಾರತಕ್ಕೆ 52 ರನ್ ಮುನ್ನಡೆ!!
"ನೀವು ಏಕೆ ಹೋಗುತ್ತಿದ್ದೀರಿ ಎಂದು ನಾನು ಜಸ್ಸಿ ಭಾಯ್‌ಗೆ (ಜಸ್‌ಪ್ರೀತ್ ಬುಮ್ರಾ) ಕೇಳಿದೆ. ಒಂದು ವೇಳೆ ನಾನು 5 ವಿಕೆಟ್ ಪಡೆದರೆ, ಯಾರನ್ನು ಅಪ್ಪಿಕೊಳ್ಳಲಿ? ಎಂದು ಬುಮ್ರಾಗೆ ಹೇಳಿದ್ದೆ. ಇದಕ್ಕೆ ಅವರು ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದರು. ನೀವು ಐದು ವಿಕೆಟ್‌ಗಳನ್ನು ಪಡೆಯಿರಿ. ಈ ರೀತಿಯ ಸಂಭಾಷಣೆಯನ್ನು ಮಾಡಿದ್ದೇವೆ," ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮಾರಕ ಬೌಲಿಂಗ್ ನಡೆಸಿದ ಮೊಹಮ್ಮದ್ ಸಿರಾಜ್, ಐದು ವಿಕೆಟ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಅವರು ನಾಲ್ಕು ವಿಕೆಟ್ ಕಿತ್ತರು. ಭಾರತ ತಂಡದ ಬೌಲರ್‌ಗಳು ಇಂಗ್ಲೆಂಡ್ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 247 ರನ್‌ಗಳಿಗೆ ಆಲ್‌ಔಟ್ ಮಾಡಿದರು. ಇದೀಗ ಮೊಹಮ್ಮದ್ ಸಿರಾಜ್ ತಮ್ಮ 18 ವಿಕೆಟ್‌ಗಳ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
IND vs ENG: ಭಾರತದ ಎದುರು 5 ವಿಕೆಟ್ ಕಿತ್ತು ಐತಿಹಾಸಿಕ ದಾಖಲೆ ಬರೆದ ಗಸ್ ಅಟ್ಕಿನ್ಸನ್!
ತಂಡದ ಗೆಲುವು ಮುಖ್ಯ: ಸಿರಾಜ್
"ಇಂಗ್ಲೆಂಡ್‌ನಲ್ಲಿ ಆಡುವುದನ್ನು ಎಲ್ಲರೂ ಇಷ್ಟಪಡುತ್ತಾರೆ ಏಕೆಂದರೆ ಇಲ್ಲಿನ ಪಿಚ್‌ನಲ್ಲಿ ಸ್ವಿಂಗ್ ಜಾಸ್ತಿ ಇದ್ದು, ಫಾಸ್ಟ್ ಬೌಲರ್‌ಗಳಿಗೆ ನೆರವಾಗುತ್ತದೆ. ನೀವು ಹೇಳಿದ ಹಾಗೆ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಎನಿಸಿಕೊಳ್ಳುವುದು ವಿಶೇಷ ಅನುಭವನ್ನು ನೀಡುತ್ತದೆ. ಆದರೆ, ಹೆಚ್ಚಿನ ಪಂದ್ಯಗಳನ್ನು ಗೆದ್ದರೆ, ಅದು ಇನ್ನಷ್ಟು ಅದ್ಭುತ ಭಾವನೆಗಳನ್ನು ನೀಡುತ್ತದೆ," ಎಂದು ತಿಳಿಸಿದ್ದಾರೆ.
"ಬಾಲ್ಯದಿಂದ ಇಲ್ಲಿಯವರೆಗೆ ಈ ಹಂತವನ್ನು ತಲುಪಲು ಬಹಳಷ್ಟು ಕಠಿಣ ಪರಿಶ್ರಮವಿದೆ. ಆದರೆ ನನಗೆ ಯಾವಾಗಲೂ ಒಂದೇ ಮನಸ್ಥಿತಿ ಇರುತ್ತದೆ - ಫಲಿತಾಂಶ ಏನೇ ಇರಲಿ, ಶೇ 100 ರಷ್ಟು ಪ್ರಯತ್ನವನ್ನು ನೀಡುವುದು," ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.